NEWSನಮ್ಮಜಿಲ್ಲೆನಮ್ಮರಾಜ್ಯ

ಶೀಘ್ರದಲ್ಲೇ ನೌಕರರ ಕೂಟದ ರಾಜ್ಯಾಧ್ಯಕ್ಷರ ಬದಲಾವಣೆ: ರಾಜ್ಯ ಮಹಿಳಾಧ್ಯಕ್ಷೆ ಚಂಪಕಾ

ವಿಜಯಪಥ ಸಮಗ್ರ ಸುದ್ದಿ
  • ಕರ್ನಾಟಕ ಸರ್ಕಾರಿ ಸಾರಿಗೆ ನೌಕರರ ಕತ್ತಲೆಯಲ್ಲಿಟ್ಟು ಸಾರಿಗೆ ಸಂಭ್ರಮ ಮಾಡಲು ಹೊರಟ ಕೂಟ!!
  • ಹಳೇ ಸಂಘಟನೆಗಳಿಂದಲೂ ನೌಕರರಿಗೆ ಮೂರು ಕಾಸಿನ ಪ್ರಯೋಜನವಾಗಿಲ್ಲ

ಬೆಂಗಳೂರು: ರಾಜ್ಯದ ಅತೀವ ಶ್ರಮಿಕ ವರ್ಗ ಯಾವುದೆಂದರೆ, ಅದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕೂ ನಿಗಮಗಳ ನೌಕರರು. ಇಲ್ಲಿನ ಚಾಲಕ, ನಿರ್ವಾಹಕಕರು, ತಾಂತ್ರಿಕ ವರ್ಗದವರು ಹಗಲಿರುಳೆನ್ನದೇ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂತಹ ಶ್ರಮಿಕ ವರ್ಗದ ಮೇಲೆ ಕಳೆದ ಆರೇಳು ವರ್ಷಗಳಲ್ಲಿ ಹಿಂದೆಂದು ಕಾಣದ ಹಲವಾರು ಜಂಜಾಟಗಳು ನಡೆದು ಹೊಗಿವೆ….

ಒಂದು ಕ್ಷೇತ್ರದಲ್ಲಿ ಅಲ್ಲಿನ ದುಡಿಯುವ ವರ್ಗದ ಮೇಲಿನ ಅನ್ಯಾಯ ಸರಿಪಡಿಸಲು ಸಂಘಟನೆಗಳು ಸ್ಥಾಪನೆಯಾಗುತ್ತವೆ. ಆದರೆ ಸಾರಿಗೆ ಸಂಸ್ಥೆಯಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ.!! ಒಂದು ಹೊಸ ಸಂಘಟನೆಯ ಹುಟ್ಟು ಇನ್ನೊಂದು ಸಂಘಟನೆಯ ತೆಗಳಿಕೆಗೆ ಮಾತ್ರ ಇರಬಹುದೇನೋ ಎಂಬಂತೆ ಭಾಸವಾಗುತ್ತದೆ. ಏಕೆಂದರೆ ಕಳೆದ ಆರೇಳು ವರ್ಷಗಳಿಂದ ಬಂದ ಹೊಸ ಸಂಘಟನೆ ಕೂಟ ಕೇವಲ ತನ್ನ ಸಹೋದರ ಸಂಘಟನೆಗಳನ್ನು ತೆಗಳುವ ಕೆಲಸವನ್ನು ಮಾತ್ರ ಚಾಚು ತಪ್ಪದೇ ಮಾಡುತ್ತಿದೆ. ಬಹುಶಃ ಅದೇ ತಮ್ಮ ಸಾಧನೆ ಎಂದು ತಿಳಿದುಕೊಂಡಂತಿದೆ..!

ಆದರೆ ಕೂಟದ ಈ ನಡೆ ನೌಕರ ಸಮುದಾಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಕೇವಲ ಅದು ಹಳೆಯ ಸಂಘಟನೆಯ ತೆಗಳಿಕೆಯಲ್ಲಿಯೇ ಕಾಲ ಕಳೆಯುತ್ತಿದೆ ಹೊರತು, ತನ್ನ ಮುಂದಿನ ನಡೆ ಏನೆಂಬುದನ್ನು ಮರೆತಂತಿದೆ. ಕಾರ್ಮಿಕ ವರ್ಗಕ್ಕೆ ಸರ್ಕಾರಿ ನೌಕರ ಮಾಡುತ್ತೇವೆಂದು ಭ್ರಮೆ ತುಂಬಿ ಇವತ್ತು ಆ ಬೇಡಿಕೆಯನ್ನೆ ಮರೆತಿದೆ.

ನಂತರ ವೇತನ ಆಯೋಗದ ಬೇಡಿಕೆ ಇಟ್ಟರು, ಅದು ಇಲ್ಲ. ವೇತನ ಆಯೋಗದ ಮಾದರಿ ಅಂತೇಳಿದರು, ಅದು ಇಲ್ಲ‌. ಸರಿ ಸಮಾನ ಅಂತ ಹೇಳಿದರು, ಅದು ಇಲ್ಲ. ಮಾಸ್ಟರ್ ಸ್ಕೇಲ್ ಅಂತ ಹೇಳಿದರು, ಅದು ಇಲ್ಲ. ಈ ರೀತಿಯಾಗಿ ಸಮಯಕ್ಕೆ ತಕ್ಕಂತೆ ಆಗಾಗ ತಮ್ಮ ಬೇಡಿಕೆಗಳನ್ನು ಬದಲಾಯಿಸುತ್ತಾ ಬರುತ್ತಿರುವ ಈ ಕೂಟದಿಂದ ನೌಕರ ವರ್ಗಕ್ಕೆ ಏನು ಕೊಡಿಸಲು ಆಗಿಲ್ಲ. ಇವರಿಗೆ ಒಂದು ಗೊತ್ತು-ಗುರಿ, ಗುರು, ಸಿದ್ದಾಂತ ಯಾವುದು ಇಲ್ಲ. ಇಂಥವರಿಂದ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದೊಂದು ಬಹುರೂಪಿ ನಾಟಕದಂತೆ ಭಾಸವಾಗುತ್ತೆ.

ಈಗಾಗಲೇ 2020 ರ ವೇತನ ಪರಿಷ್ಕರಣೆಯ ಹಿಂಬಾಕಿ ಬರಬೇಕಿದೆ. ಮತ್ತಲ್ಲದೇ 2024 ರ ವೇತನ ಪರಿಷ್ಕರಣೆಯ ಕಾಲವಿದು. ಒಂದು ವೇಳೆ ಅತಿ ಶೀಘ್ರವಾಗಿ 2024ರ ವೇತನ ಪರಿಷ್ಕರಣೆ ಆಗದಿದ್ದರೆ, ಇದರ ಬಾಕಿ ಕೂಡ ಉಳಿಯುವ ಅಪಾಯ ಸಾರಿಗೆ ನೌಕರ ವರ್ಗದ ಮೇಲಿದೆ. ಇದನ್ನು ಅರಿತುಕೊಳ್ಳಬೇಕಾದ ಸಮಯವೂ ಕೂಡ ಇದಾಗಿದೆ.

ಆದರೆ ನೌಕರರ ಕೂಟ ಇದಕ್ಕೆ ತನಗೇನು ಸಂಬಂಧವೇ ಇಲ್ಲವೆಂಬಂತೆ ಸಾರಿಗೆ ಸಂಭ್ರಮ ಮಾಡ ಹೊರಟಿದೆ. ಯಾವ ಪುರುಷಾರ್ಥಕ್ಕಾಗಿ ಈ ಸಂಭ್ರಮ? ಇನ್ನೂ 2020ರ ವೇತನ ಪರಿಷ್ಕರಣೆಯ ಅರಿಯರ್ಸ್ ಬಂದಿಲ್ಲ ಅಂತನಾ.? ಡಿ.ಎ, ಡಿ.ಎ.ಅರಿಯರ್ಸ್ ಬಂದಿಲ್ಲ ಅಂತನಾ? ಶಕ್ತಿ ಯೋಜನೆಯ ಸಂಪೂರ್ಣ ಹಣ ಸರ್ಕಾರದಿಂದ ಬಂದಿಲ್ಲ ಅಂತನಾ? ತನ್ನ ಅವೈಜ್ಞಾನಿಕ ಮುಷ್ಕರರಿಂದಾಗಿ ವಜಾ ಆದ ಸಹೋದ್ಯೋಗಿಗಳು ಇನ್ನೂ ಮರು ನೇಮಕಾತಿ ಆಗಿಲ್ಲ ಅಂತನಾ?

ಇವೆಲ್ಲ ಬಂದಿಲ್ಲಗಳ ಮಧ್ಯೆ ಈ ಕೂಟದ ಸಾರಿಗೆ ಸಂಭ್ರಮವೇ? ಸಾರಿಗೆ ನೌಕರ ವರ್ಗ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಅಪಾಯ ಕಟ್ಟಿಟ್ಟ ಬುತ್ತಿ.. ಸಾರಿಗೆ ನೌಕರರೆ, ಇನ್ನಾದರೂ ಎಚ್ಚುತ್ತುಕೊಳ್ಳಿ, ದೊಡ್ಡ ಗಂಡಾಂತರದಿಂದ ಪಾರಾಗಲು ಯೋಚಿಸಿ.

ಈವರೆಗೂ ನೌಕರರಿಗೆ ಹಳೇ ಸಂಘಟನೆಗಳು ಕೊಡಿಸಿರುವದಾದರೂ ಏನು?: ಹೀಗೆ 4 ನಾಲ್ಕೂ ದಶಗಳಿಗೂ ಹೆಚ್ಚು ಕಾಲದಿಂದ ನೌಕರರ ಯಾಮಾರಿಸಿಕೊಂಡು ಬಂದಿರುವ ಮತ್ತು ಈಗಲೂ ಅದನ್ನೇ ಮುಂದುವರಿಸಿರುವ ಕೆಲ ಸಂಘಟನೆಗಳ ಮುಖಂಡರು ತಮ್ಮ ಪರವಾದ ನೌಕರರಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಯವನ್ನು ಹರಿಯ ಬಿಡುತ್ತಿದ್ದಾರೆ. ಆದರೆ, ಈವರೆಗೂ ಈ ನೌಕರರಿಗೆ ಹಳೇ ಸಂಘಟನೆಗಳು ಕೊಡಿಸಿರುವದಾದರೂ ಏನು?

ಇವುಗಳಿಗೆ ಹೋಲಿಸಿಕೊಂಡರೆ ಕೂಟ ನೌಕರರಲ್ಲಿ ಅರಿವನ್ನು ಮೂಡಿಸುವ ಕೆಲಸವನ್ನಾದರೂ ಮಾಡಿದೆ. ಅಲ್ಲದೆ ನೌಕರರು ಮತ್ತು ಅಧಿಕಾರಿಗಳ ನಡುವೆ ಉಂಟಾಗಿದ್ದ ಕಂದಕವನ್ನು ದೂರ ಮಾಡುವ ಪ್ರಯತ್ನವನ್ನು ಮಾಡಿದೆ. ಇದಾವುದನ್ನು ಮಾಡದೆ ನಾವು ಏನು ಮಾಡುತ್ತಿದ್ದೇವೆ ಈ ಕೂಟ ಏನು ಮಾಡುತ್ತಿಲ್ಲ ಎಂದು ಬೀಗುತ್ತಿರುವ ಹಳೇ ಸಂಘಟನೆಗಳಿಂದಲೂ ನೌಕರರಿಗೆ ಮೂರು ಕಾಸಿನ ಲಾಭವೂ ಈವರೆಗೂ ಆಗಿಲ್ಲ ಎಂಬುದನ್ನು ಮರೆಯಬಾರದು.

ಒಬ್ಬನ ಏಕಪಕ್ಷೀಯ ನಿರ್ಧಾರದಿಂದ ಕೆಲವೊಂದು ತಪ್ಪುಗಳು: ನಿಜ, ಕೂಟದ ಒಬ್ಬನ ಏಕಪಕ್ಷೀಯ ನಿರ್ಧಾರದಿಂದ ಕೆಲವೊಂದು ತಪ್ಪುಗಳು ಆಗುತ್ತಿರಬಹುದು ಅದನ್ನು ಪರಿಪಡಿಸಿಕೊಂಡು ಆ ವ್ಯಕ್ತಿ ಹೋಗುವುದಕ್ಕೆ ಕೂಡದ ಪದಾಧಿಕಾರಿಗಳು ಹಲವು ಬಾರಿ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಆದರೆ ಎಚ್ಚೆತ್ತುಕೊಂಡಿಲ್ಲದಿರುವುದರಿಂದ ಈಗ ಆತನ್ನನ್ನೇ ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತೊಗೆಯುವ ತೀರ್ಮಾನಕ್ಕೆ ಕೂಟದ ಪದಾಧಿಕಾರಗಳು ಬಂದಿದ್ದಾರೆ. ಅದೂ ಕೂಡ ಸದ್ಯದಲ್ಲೇ ಆಗುತ್ತದೆ ಎಂದು ಕೂಟದ ಮಹಿಳಾ ರಾಜ್ಯಾಧ್ಯಕ್ಷರಾದ ಚಂಪಕಾ ತಿಳಿಸಿದ್ದಾರೆ.

Leave a Reply

error: Content is protected !!
LATEST
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು 15 ದಿನದ ಹಸುಳೆಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ - ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಸ್ತ್ರ: ಅಪರ ಸಿವಿಲ್ ನ್ಯಾಯಾಧೀಶೆ ಶಕುಂತಲಾ ಯೋಗ ಮಾಡಿ ಸಮೃದ್ಧ ಆರೋಗ್ಯವಂತ ಜೀವನ ನಡೆಸಿ: ಡಾ. ದಿವ್ಯಾ ಸಲಹೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ: ಎಎಪಿ ಆಕ್ರೋಶ KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ