ನ್ಯೂಡೆಲ್ಲಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದ್ದರೂ ಅಧಿಕಾರದ ದುರಾಸೆಗೆ ಅಂಟಿಕೊಂಡಿರುವ ಸಿದ್ದರಾಮಯ್ಯ ಅವರಿಂದ ಹಗ್ಗಜಗ್ಗಾಟ ನಡೆಯುತ್ತಿದೆ.
ಹೌದು! ಜನತಾದಳ ಪರಿವಾರದಿಂದ ಹೊರ ಬಂದ ಬಳಿಕ ಕಾಂಗ್ರೆಸ್‌ನ ಮೂಲ ನಾಯಕರನ್ನು ಮೂಲೆ ಗುಂಪು ಮಾಡಿ ಅಂದಿನಿಂದಲೂ ತಾನೆ ಅಧಿಕಾರ ಮಾಡಿಕೊಂಡು ಬರುತ್ತಿದ್ದರೂ ಇನ್ನು ಅಧಿಕಾರದ ದಾಹ ತೀರಿದಂತೆ ಕಾಣುತ್ತಿಲ್ಲ ಸಿದ್ದರಾಮಯ್ಯ ಅವರಿಗೆ ಎಂದು ಪಕ್ಷದ ಶಾಸಕರಲ್ಲೇ ಅಸಮಾಧಾನ ಸ್ಫೋಟಗೊಳ್ಳುತ್ತಿದೆ.
ಇದರ ನಡುವೆ ಕೆಲ ಶಾಸಕರು ನಮ್ಮಪರ ಇದ್ದಾರೆ ಎಂಬುದನ್ನು ತೋರಿಸುವ ಸಲುವಾಗಿ ಕೆಲ ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ಕೂಡ ಪಕ್ಷದಲ್ಲಿ ಅಸಮಾಧಾನ ಬುಗ್ಗೆ ಮೇಲೇಳಲು ಕಾರಣವಾಗಿದೆ.
ಈ ಎಲ್ಲದರ ನಡುವೆ ರಾಜ್ಯಾದ್ಯಂತ ಓಡಾಡಿ ಬಲಿಷ್ಟವಾಗಿ ಪಕ್ಷ ಸಂಘಟನೆ ಮಾಡಿರುವ ಡಿ.ಕೆ.ಶಿವಕುಮಾರ್ ಅವರಿಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ರಾಜ್ಯದ ಒಕ್ಕಲಿಗ ಸಮುದಾಯ ಮತ್ತು ಹಲವಾರು ಶಾಸಕರು ಕೂಡ ಹೇಳುತ್ತಿದ್ದಾರೆ.
ಇದನ್ನು ಲೆಕ್ಕಿಸದೆ ಸಿದ್ದರಾಮಯ್ಯ ಅವರು ಮತ್ತೆ ನಾನೇ ಸಿಎಂ ಆಗಬೇಕು ಎಂದು ಅಪಹಪಿಸುತ್ತಿರುವುದು ಪಕ್ಷಕ್ಕೆ ರಾಜ್ಯದಲ್ಲಿ ದೊಡ್ಡಮಟ್ಟದ ಹೊಡೆತೆ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪಕ್ಷದ ಉನ್ನತ ಮಟ್ಟದ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ.
ಒಟ್ಟಾರೆ, ಸಿದ್ದರಾಮಯ್ಯ ನಾನೇ ಸಿಎಂ ಆಗಬೇಕು ಎಂದು ಪಟ್ಟು ಹಿಡಿದರೆ ರಾಜ್ಯದಲ್ಲಿ ಮತ್ತಷ್ಟು ಸಮಸ್ಯೆಯನ್ನು ಪಕ್ಷ ಎದುರಿಸುವುದರಲ್ಲಿ ಯಾವುದೇ ಡೌಟ್ ಇಲ್ಲ. ಒಂದು ವೇಳೆ ತಾನು ಈಗಾಗಲೇ ಅಧಿಕಾರ ಅನುಭವಿಸಿದ್ದೇನೆ ಹೀಗಾಗಿ ಈ ಬಾರಿ ಡಿಕೆಶಿ ಸಿಎಂ ಆಗಲಿ ಎಂದು ಹೇಳಿಕೆ ನೀಡಿದರೆ ಪಕ್ಷಕ್ಕೂ ಯಾವುದೇ ಹೊಡೆತ ಬೀಳುವುದಿಲ್ಲ ಮತ್ತು ತನ್ನ ಗೌರವವನ್ನು ಉಳಿಸಿಕೊಂಡಂತೆ ಆಗುತ್ತದೆ.
ಆದರೆ, ಈ ನಿಟ್ಟಿನಲ್ಲಿ ಟಗರು ನಿರ್ಧಾರ ಮಾಡುವುದು ಡೌಟೇ ಆಗಿದೆ. ಹಾಗಾಗಿ ಬಂಡೆಯೂ ಕೂಡ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಲಾಗುತ್ತಿದೆ. ಈ ಎಲ್ಲದರ ನಡುವೆಯೂ ಕೂಡ ಇಂದೆ ಸಿಎಂ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ತಿಳಿದು ಬಂದಿದೆ.