
ಬೆಂಗಳೂರು: ಚುನಾವಣಾ ಸಮಯದಲ್ಲಿ ಕೊಟ್ಟ ಮಾತಿನಂತೆ ಸಿಎಂ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಜತೆಗೆ ಸಾವಿರಾರೂ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಜನಪರ ಮೆಚ್ಚುಗೆ ಗಳಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ
ಭಾನುವಾರ ದೇವನಹಳ್ಳಿ ತಾಲೂಕು ಭೈರದೇನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಪಂಯಿತಿ ವತಿಯಿಂದ ನಡೆದ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರಕ್ಕೆ ಜಿಲ್ಲಾ ಕೇಂದ್ರ ಹಾಗೂ ಜಿಲ್ಲಾ ಆಡಳಿತ ಸಂಕೀರಣವನ್ನು ಮಾಡಿಸಿದ್ದು ಕಾಂಗ್ರೆಸ್ ಸರ್ಕಾರವೇ. ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರದ ಸಹಕಾರ ಇರುತ್ತದೆ ಎಂದರು.
ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ ಅಹ್ಮದ್ ಖಾನ್ ಮಾತನಾಡಿ ಜಿಲ್ಲೆಯ ವಸತಿ ರಹಿತ ಬಡವರಿಗಾಗಿ 2500 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಜತೆಗೆ ಅಲ್ಪಸಂಖ್ಯಾತರ ಮದುವೆ-ಶುಭ ಸಮಾರಂಭಗಳ ಅನುಕೂಲಕ್ಕಾಗಿ 4 ಶಾದಿ ಮಹಲ್ ನಿರ್ಮಾಣಕ್ಕೆ ಮಂಜೂರು ನೀಡಿದೆ. ಸರ್ಕಾರ ಸದಾ ಜನಪರ ಆಡಳಿತದೊಂದಿಗೆ 2 ವರ್ಷವನ್ನು ಕಾಂಗ್ರೆಸ್ ಸರ್ಕಾರ ಪೂರೈಸುತ್ತಿದೆ ಎಂದರು.
ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ 5 ಸಾವಿರ ಕೋಟಿ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ನಿವೇಶನ ರಹಿತರಿಗೆ 10 ಸಾವಿರ ಹಕ್ಕುಪತ್ರ ವಿತರಿಸಲಾಗುತ್ತಿದೆ. ಸಿ.ಎಸ್.ಆರ್.ನಿಧಿಯಿಂದ 125 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ. 465 ಕೋಟಿ ರೂ ಕಾಮಗಾರಿಗಳ ಉಧ್ಘಾಟನೆ. ಒಟ್ಟಾರೆ 1000 ಕೋಟಿ ರೂಗಳ ಕಾಮಗಾರಿ,ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸವಲತ್ತುಗಳ ವಿತರಣೆ
ಪ್ರಮುಖ ಉದ್ಘಾಟನೆ ಕಾಮಗಾರಿಗಳ ವಿವರ: 406 ಕೋಟಿ ರೂ. ವೆಚ್ಚದಲ್ಲಿ ದೇವನಹಳ್ಳಿ ತಾಲ್ಲೂಕಿನ ಹರಳೂರು ಮುದ್ದೇನಹಳ್ಳಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಹಂತ 2 ರಲ್ಲಿ ನಿರ್ಮಿಸಿರುವ 220/66/11 ಕೆ.ವಿ ವಿದ್ಯುತ್ ಉಪಕೇಂದ್ರ ಉದ್ಘಾಟನೆ. 9.91 ಕೋಟಿ ವೆಚ್ಚದಲ್ಲಿ ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಹೆಚ್ಚುವರಿ ಕಟ್ಟಡ ಉದ್ಘಾಟನೆ.
6 ಕೋಟಿ ವೆಚ್ಚದಲ್ಲಿ ವಿಶ್ವನಾಥಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿಯ ಸಂಪನ್ಮೂಲ ಕೇಂದ್ರ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆ. 4.6 ಕೋಟಿ ವೆಚ್ಚದಲ್ಲಿ ದೊಡ್ಡಬಳ್ಳಾಪುರದ ನಗರದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಡಿ ಡಿ ಕ್ರಾಸ್ ರಸ್ತೆಯಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿ.
ಪ್ರಮುಖ ಶಂಕುಸ್ಥಾಪನೆ ಕಾಮಗಾರಿಗಳು: 100 ಕೋಟಿ ವೆಚ್ಚದಲ್ಲಿ ದೇವನಹಳ್ಳಿಯಲ್ಲಿ 600 ಬಂದಿಗಳ ಸಾಮರ್ಥ್ಯದ ನೂತನ ಕೇಂದ್ರದ ಕಾರಾಗೃಹ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ. 40 ಕೋಟಿ ವೆಚ್ಚದಲ್ಲಿ ದೇವನಹಳ್ಳಿ ನಗರದಲ್ಲಿ ಹಾಲಿ ಇರುವ ಹೆಚ್.ಟಿ ಮತ್ತು ಎಲ್.ಟಿ ಮೇಲ್ತಿಂತಿ ಮಾರ್ಗಗಳನ್ನು ಭೂಗತ ಕೇಬಲ್ ಗಳಾಗಿ ಪರಿವರ್ತಿಸಲು ಶ೦ಕುಸ್ಥಾಪನೆ.
9 ಕೋಟಿ ವೆಚ್ಚದಲ್ಲಿ ದೇವನಹಳ್ಳಿ ತಾಲ್ಲೂಕು ರಾಜ್ಯ ಹೆದ್ದಾರಿ 170 ನಂದಿ ಗ್ರಾಮದಿಂದ ಆಂಧ್ರ ಪ್ರದೇಶದ ಗಡಿಯವರೆಗೆ ಸೇರುವ ರಸ್ತೆಯ ಮಾರ್ಗ ವಿಜಯಪುರ, ಶಿಡ್ಲಘಟ್ಟ, ದಿಟ್ಟೂರಹಳ್ಳಿ, ಇ-ತಿಮ್ಮಸಂದ್ರ ಚೇಳೂರು ರಸ್ತೆಯ ಸರಪಳಿ 14.53 ರಿಂದ 15.35 ಕಿ.ಮೀ ವರೆಗೆ ನಾಲ್ಕು ಪಥದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ (ಶಿಡ್ಲಘಟ್ಟ ಜಂಕ್ಷನ್ ಅಭಿವೃದ್ಧಿ).
