KKRTC ವಿಜಯಪುರ ಡಿಸಿ ನಾರಾಯಣಪ್ಪ ಕುರಬರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಸಿಎಂ, ಸಿಎಸ್, ಸಾರಿಗೆ ಸಚಿವರಿಗೆ ದೂರು ಸಲ್ಲಿಕೆ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ವಿಭಾಗದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಅಧಿಕಾರದ ದುರ್ಬಳಕೆ ಮಾಡುತ್ತಿದ್ದು ಹಾಗೂ ನಿಗಮಕ್ಕೆ ಸುಮಾರು 1.98 ಕೋಟಿ ರೂ.ಗಳಷ್ಟು ಬರುವ ವಾಣಿಜ್ಯ ಆದಾಯ ನಷ್ಟ ಮಾಡಿದ್ದಾರೆ. ಹೀಗಾಗಿ ಇವರನ್ನು ವಿಚಾರಣಾ ಪೂರ್ವ ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಯಾಕೂಬ ನಾಟೀಕಾರ ಸಿಎಂ, ಡಿಸಿಎಂ, ಸಾರಿಗೆ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದಾರೆ.
ಸಂಸ್ಥೆಯ ನಡತೆ ಹಾಗೂ ಶಿಸ್ತು ನಿಯಮಾವಳಿಗಳು 1971ರ ಪ್ರಕಾರ ದಂಡನಾರ್ಹವಾದ ಅಪರಾಧಗಳನ್ನು ಎಸಗಿದ್ದಾರೆ ಹಾಗೂ ಇವರು ಕರ್ತವ್ಯದ ಮೇಲೆ ಇರುವುದರಿಂದ ಈ ಪ್ರಕರಣದ ತನಿಖೆಗೆ ಬಾಧಕವಾಗುತ್ತದೆ, ಸಾಕ್ಷಿ ನಾಶ ಮಾಡುವ ಸಂಭವವಿರುವುದರಿಂದ ಕೂಡಲೇ ಅಮಾನತು ಮಾಡಬೇಕು ಎಂದು ಜೂನ್ 26ರಂದು ಬೆಂಗಳೂರಿಗೆ ಬಂದು ವಿಧಾನಸೌಧದಲ್ಲಿ ದೂರು ನೀಡಿದ್ದಾರೆ.
ದೂರು ಅರ್ಜಿಯಲ್ಲೇನಿದೆ? : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಾರಾಯಣಪ್ಪ ಕುರಬರ ಅಧಿಕಾರದ ದುರುಪಯೋಗ ಮುಗಿಲು ಮುಟ್ಟಿದೆ. 2021ನೇ ಇಸ್ವಿಯಲ್ಲಿ ಇದೇ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ದೇವಾನಂದ ಎ.ಬಿರಾದಾರ ಅವರ ಜತೆಗೆ ಸೇರಿಕೊಂಡು ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿರುವ ನಂದಿನಿ ಕ್ಯಾಂಟೀನನ್ನು ಪರವಾನಗಿದಾರರಿಗೆ ಪ್ರತಿ ತಿಂಗಳು ಸುಮಾರು 9.5 ಲಕ್ಷ ರೂ.ಗಳಿದ್ದ ಬಾಡಿಗೆಯನ್ನು “ಸಂಧಾನ” ಎನ್ನುವ ಭ್ರಷ್ಟಾಚಾರ ಮಾಡಲು ಬಳಸುವ ಅತಿ ಉತ್ತಮ ವಿಧಾನ ಭ್ರಮಾಸ್ತ್ರವನ್ನು ಬಳಸಿ ಪ್ರತಿ ತಿಂಗಳಿಗೆ 4 ಲಕ್ಷ ರೂ.ಗಳೀಗೆ ಬಾಡಿಗೆ ಮಾಡಿ ಕೊಟ್ಟಿದ್ದಾರೆ.
ಇದರಿಂದ ಸಂಸ್ಥೆಗೆ ಅಂದರೆ 1 ತಿಂಗಳಿಗೆ 5.5 ಲಕ್ಷ ರೂ. ಆದರೆ 3 ವರ್ಷಕ್ಕೆ 1.98 ಕೋಟಿ ರೂ.ಗಳಷ್ಟು ಬರುವ ವಾಣಿಜ್ಯ ಆದಾಯವನ್ನು ನಷ್ಟ ಮಾಡಿ ಪರವಾನಗಿದಾರರಿಗೆ 3 ವರ್ಷಗಳ ವರೆಗೆ ನಂದಿನಿ ಕ್ಯಾಂಟೀನನ್ನು ನಡೆಸಲು ಅನಕೂಲ ಮಾಡಿಕೊಟ್ಟಿದ್ದಾರೆ.

ಈ ಹಿಂದೆ ಇವರು 2021 ನೇ ಇಸ್ವಿಯಲ್ಲಿ ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಮಹಿಳೆಯರಿಗೆ ನೀಡಿರುವ ಕಿರಕುಳದ ಆರೋಪದ ಮೇಲೆ ಇವರನ್ನು ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿತ್ತು. ಮತ್ತೇ ವಿಜಯಪುರ ವಿಭಾಗಕ್ಕೆ ಪ್ರಸ್ತುತ ಬಂದು ವಕ್ಕರಿಸಿದ್ದಾರೆ ಹಾಗೂ ತಮ್ಮ ಹಳೆಯ ಚಾಳಿಯಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮುಂದುವರಿಸಿದ್ದಾರೆ. ಇವರು ಅಧಿಕಾರಿಗಳಿಗೂ ಸಹ ಕಿರಕುಳ ನೀಡುತ್ತಿದ್ದಾರೆ.
ಮೂಲ ಹುದ್ದೆ ಉಪ ಮುಖ್ಯಕಾನೂನು ಅಧಿಕಾರಿ. ಆದರೆ ಇವರಿಗೆ ತಮ್ಮ ಮೂಲ ಹುದ್ದೇ ಬೇಕಾಗಿಲ್ಲ. ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೇನೇ ಬೇಕು. ಈ ಹುದ್ದೆಕೂಡ ವಿಜಯಪುರ ವಿಭಾಗಕ್ಕೆ ಬೇಕು. ಆದರೆ ಯಾಕೇ ಬೇಕು? ಅದು ಮತ್ತೇ ವಿಜಯಪುರ ವಿಭಾಗಕ್ಕೆನೇ ಯಾಕೇ ಬೇಕು?” ಇನ್ನು ವಿಭಾಗಕ್ಕೆ ಬಂದಾಗಿನಿಂದ ತಾರತಮ್ಯ ಪ್ರಾರಂಭ ಮಾಡಿದ್ದಾರೆ. ಪದೋನ್ನತಿ ನೀಡಿ ಬೇರೆ ಘಟಕಗಳಿಗೆ ವರ್ಗಾವಣೆ ಮಾಡಿದ್ದಾರೆ. ತಮಗೆ ಬೇಕಾಗಿದ್ದವರನ್ನು ವಿಭಾಗೀಯ ಕಚೇರಿ ಮತ್ತು ವಿಜಯಪುರ ಸ್ಥಳಿಯ ಘಟಕಗಳಿಗೆ ನಿಯೋಜಿಸಿಕೊಂಡಿದ್ದಾರೆ.
ವಿಭಾಗಕ್ಕೆ ಬಂದಾಗಿನಿಂದ ರಜೆ ಮುಂಜೂರಾತಿ ಮಾಡಲು 50% ಅನುಪಾತದಲ್ಲಿ ತಮ್ಮ ಆಪ್ತ ಸಹಾಯಕರಾದ ಅಬ್ದುಲಮುತ್ತಲಿಬ ಪಾನಫರೋಶ ಮುಖಾಂತರ ಹಣ ಪಡೆದುಕೊಂಡು ರಜೆ ಮಂಜೂರು ಮಾಡುತ್ತಿದ್ದಾರೆ. ಈ ರಜೆ ಮುಂಜೂರಾತಿ ಮಾಡಲು 50% ಅನುಪಾತದಲ್ಲಿ ಹಣ ಪಡೆಯುತ್ತಿರುವ ಬಗ್ಗೆ 18/06/2025 ರಂದು ವಿಜಯಪಥದಲ್ಲಿ ಸುದ್ದಿ ಪ್ರಕಟವಾಗಿದೆ.
ಎಂ.ಜಿ. ಕಲಬುರ್ಗಿ ಚಾ ಕಂ ನಿ ಬಿಲ್ಲೇ ಸಂಖ್ಯೆ 418 ವಿಜಯಪುರ 01 ನೇ ಘಟಕ ಇವರು ಜಮಾತ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೇರಳಿದ್ದಾರೆ. ಈ ಬಗ್ಗೆ ಘಟಕ ವ್ಯವಸ್ಥಾಪಕರಿಗೆ ಮುಂಚಿತವಾಗಿ ಹೇಳೆ ಹೋದರು ಸಹ ಇವರ ಹಾಜರಾತಿಯನ್ನು 02/11/2024 ರಿಂದ 17/12/2024 ರ ವರೆಗೆ ಒಟ್ಟು 46 ದಿನಗಳ ಗೈರು ಹಾಜರಾತಿ ಎಂದು ಪರಿಗಣಿಸಿ ಆಪಾದನಾ ಪತ್ರ ನೀಡಿದ್ದಾರೆ. ಇವರು ಆಪಾದನಾ ಪತ್ರಕ್ಕೆ ಲಿಖಿತವಾಗಿ ಸಂಜಾಯಿಷಿ ಉತ್ತರ ಸಲ್ಲಿಸಿದ್ದಾರೆ ಹಾಗೂ ಈ ವಿಷಯದಲ್ಲಿ ರಜೆ ಮಂಜೂರು ಮಾಡಲು ಸಾಕಷ್ಟು ಒತ್ತಡ ಹಾಗೂ ಶೀಫಾರಸು ಮಾಡಿಸಿದರೂ ಸಹ ಹಣ ನೀಡದೇ ಇದಿದ್ದರಿಂದ ಇಲ್ಲಿಯ ವರಗೆ ಪ್ರಕರಣ ಮುಕ್ತಾಯ ಮಾಡಿ ರಜೇ ಮಾಡಿ ಕೊಟ್ಟಿಲ್ಲ.
ವಿಜಯಪುರ ವಿಭಾಗದ ತಾಳಿಕೋಟ ಘಟಕದಲ್ಲಿ ಸೇವೆಸಲ್ಲಿಸುತ್ತಿರುವ ಮಲಿಕಸಾ ಗಾ. ಆಲಮೇಲ ಚಾಲಕ 10189 ಇವರನ್ನು 2021ನೇ ಇಸ್ವಿಯಲ್ಲಿ ಮುಷ್ಕರ ನಿರತ ಕಾರ್ಮಿಕರು ದೈಹಿಕವಾಗಿ ಹಲ್ಲೆ ಮಾಡಿದ್ದರಿಂದ ಇವರ ಸೊಂಟದಲ್ಲಿ 05 ಕಡೆ ನರಗಳು ಬ್ಲಾಕ್ ಆಗಿವೆ. ಈ ವಿಷಯದಲ್ಲಿ ಅವರು ಸುತ್ತೋಲೆ ಸಂಖ್ಯೆ 1491 ರನ್ವಯ ವೈದ್ಯಕೀಯ ಪ್ರಮಾಣ ಪಡೆದುಕೊಂಡು ಬಂದರು ಸಹ ಅವರಿಗೆ ಲಘು ಕೆಲಸ ನೀಡಿದೆ ಸತಾಯಿಸುತ್ತಿದ್ದಾರೆ.
ಇವರು ನ್ಯಾಯಾಲಾಯದಿಂದ ಆದೇಶ ಮಾಡಿಕೋಂಡು ಬಂದರು ಸಹ ಘಟಕ ಮಟ್ಟದಲ್ಲಿ ಲಘು ಕೆಲಸ ನೀಡುತ್ತಿಲ್ಲ. ಹಿಂಬರಹ ನೀಡಿ 40% ಕಡಿಮೆ ಅಂಗವಿಕಲತೆ ಇರುವುದರಿಂದ ಲಘು ಕೆಲಸ ನೀಡಲು ಬರುವುದಿಲ್ಲ ಎಂದು ಕೈ ತೋಳೆದುಕೊಂಡಿದ್ದಾರೆ. ಮತ್ತೇ ಜಿಲ್ಲಾ ಆಸ್ಪತ್ರೆ ವಿಜಯಪುರದಿಂದ ಸುತ್ತೋಲೆ ಸಂಖ್ಯೆ 681 09/09/1987 ರನ್ವಯ ವೈದ್ಯಕೀಯ ಪ್ರಮಾಣ ಪತ್ರ ತಂದು ಹುದ್ದೆಯ ಕಾರ್ಯವನ್ನು ನಿರ್ವಹಿಸಲು ಅಶಕ್ತನಾದ ನನಗೆ ಸೂಕ್ತ ತತ್ಸಮಾನ ಹುದ್ದೆ ನೀಡುವ ಬಗ್ಗೆ ವಿನಂತಿ ಅರ್ಜಿ ಸಲ್ಲಿಸಿದ ನಂತರ. ಅವರನ್ನು ವಿಭಾಗೀಯ ಕಚೇರಿಗೆ ಕರೇಯಿಸಿ ನೀನು ನರೇಂದ್ರ ಮೋದಿ ಪ್ರಧಾನ ಮಂತ್ರಿಗಳು ಹಾಗೂ ಅಮಿತಾ ಷಾ ಇವರಿಗೆ ನ್ಯಾಯ ನೀಡಲು ಮನವಿ ಸಲ್ಲಿಸಿರುತ್ತಿ. ಅವರು ಈಗ ಪಾಕಿಸ್ತಾನದ ಜತೆಗೆ ಯುದ್ದದಲ್ಲಿ ವ್ಯಸ್ಥರಾಗಿರುತ್ತಾರೆ.ಅವರು ಯುದ್ದ ಗೆದ್ದ ಬಂದ ನಂತರ ನೋಡೋಣ ಹೋಗು ಎಂದು ಹೇಳಿ ಅವಮಾನ ಮಾಡಿ ಕಳುಹಿಸಿದ್ದಾರೆ.
ಮಲಿಕಸಾ ಗಾ.ಆಲಮೇಲ ಚಾಲಕ 10189 ತಾಳಿಕೋಟ ಘಟಕ ಇವರು ರಾಷ್ಟ್ರಪತಿಯವರಿಗೆ ಸಲ್ಲಿಸಿರುವ ದೂರಿನ ಮೇಲೆ ರಾಷ್ಟ್ರಪತಿಯವರ ಕಾರ್ಯಾಲಯದಿಂದ ಪತ್ರ ಬಂದರು ಸಹ ಇವರಿಗೆ ಲಘು ಕೆಲಸ ನೀಡಿದೇ ಸತಾಯಿಸುತ್ತಿದ್ದಾರೆ.
ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಇವರೇ ಅಮಾನತು ಮಾಡಿ ಈಗ ಆ ಸುಳ್ಳು ಪ್ರಕರಣದಲ್ಲಿ ವಜಾ ಆಗಿ ಹರಿಕೆ ಕುರಿ ಆಗಿರುವ ಎಂ.ಎನ್.ಇಲಕಲ್ ಕಿರಿಯ ಸಹಾಯಕ ಇವರ ಪ್ರಕರಣದಲ್ಲಿ ವಿಚಾರಣಾಧಿಕಾರಿಗಳಾಗಿರುವ ಮಹಾಂತೇಶ ಕರಾಳೆ, ಲೆಕ್ಕಾಧಿಕಾರಿಗಳು ವಿಜಯಪುರ ವಿಭಾಗ ಇವರನ್ನು ನ್ಯಾಯಾಲಯಕ್ಕೆ ಸಾಕ್ಷಿಗಾಗಿ ಕಳುಹಿಸುತ್ತಿಲ್ಲ. ಸದರಿ ಅವರ ಮಿಕ್ಕಿರುವ 11 ತಿಂಗಳ ಸೇವೆಯಲ್ಲಿ ಎಂ.ಎನ್.ಇಲಕಲ್ ಕಿರಿಯ ಸಹಾಯಕ ಇವರನ್ನು ಮತ್ತೇ ಕರ್ತವ್ಯಕ್ಕೆ ನಿಯೋಜನೆ ಮಾಡಲು ಅಡ್ಡಗಾಲು ಹಾಕುತ್ತಿದ್ದಾರೆ ಹಾಗೂ ನಾನು ಇಲ್ಲಿ ಇರುವ ವರೆಗೂ ಇವರು ಮರಳಿ ಹೇಗೆ ಬರುತ್ತಾರೆ ಎಂದು ನೋಡುತ್ತೇನೆ ಎಂದು ಚಾಲೇಂಜ್ ಮಾಡಿದ್ದಾರೆ.
ಇತ್ತ ಇಲಕಲ್ ಪ್ರಕರಣದಲ್ಲಿ ವಿಚಾರಣಾಧಿಕಾರಿಗಳಾಗಿರುವ ಮಹಾಂತೇಶ ಕರಾಳೆ ಲೆಕ್ಕಾಧಿಕಾರಿಗಳು ವಿಜಯಪುರ ಇವರನ್ನು ಸಹ ವಿಚಾರಣೆಗೆ ಕಳುಹಿಸಲು ಅಡ್ಡಗಾಲು ಹಾಕುತ್ತಿದ್ದಾರೆ.( ವಿಚಾರಣೆಗೆ ಹೋಗಲು ಪತ್ರ ನೀಡುತ್ತಾರೆ. ಮರು ದಿನ ದೂರವಾಣಿ ಮುಖಾಂತರ ಬೇರೆ ಅಧಿಕಾರಿಗಳಿಂದ ದೂರವಾಣಿ ಕರೆ ಮಾಡಿಸಿ ಕರೆಸಿಕೊಂಡು ಮುಂದಿನ ಸಲ ಹೋಗುವಿರಂತೆ ಎಂದು ಕಾಲಹರಣ ಮಾಡಿ ಮಹಾಂತೇಶ ಕರಾಳೆ ಅವರ ಮೇಲೆ ಗುಬೆ ಕುರಿಸುವ ಕೆಲಸ ಮಾಡುತ್ತಿದ್ದಾರೆ.
ವಿಜಯಪುರ ವಿಭಾಗದ ವಿಜಯಪುರ 01 ನೇ ಘಟಕ ವ್ಯವಸ್ಥಾಪಕರು ತಮ್ಮ ಸ್ವಂತ ವಾಹನದ ನಿರ್ವಹಣೆಯನ್ನು (ಇಂಜಿನ್ ಆಯಿಲ ಬದಲಾವಣೆ, ಟೈರ್ ಪಂಚರ್, ವಾಷಿಂಗ್ ಇತ್ಯಾದಿ) ಕಾನೂನು ಬಾಹಿರವಾಗಿ ಘಟಕದಲ್ಲಿ ನಿರ್ವಹಿಸಿಕೊಂಡಿರುತ್ತಾರೆ. ಈ ವಿಷಯ ವಿಜಯಪಥ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ವರದಿ ಪ್ರಕಟವಾಗಿದೆ. ಈ ವಿಷಯದಲ್ಲಿ ಇಲ್ಲಿಯ ವರೆಗೆ ಘಟಕ ವ್ಯವಸ್ಥಾಪಕರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಬದಲಾಗಿ ಎಂ.ಆರ್. ಪಾರ್ಥನಹಳ್ಳಿ ಎಂಬ ಪಾರುಪತ್ತೇಗಾರರ ಮೇಲೆ ವಿಡಿಯೋ ಹಾಗೂ ಛಾಯಾ ಚಿತ್ರಗಳನ್ನು ತೆಗೆದು ಬೇರೆಯವರಿಗೆ ಕಳುಹಿಸಿದ್ದರಿಂದ ಘಟಕ ವ್ಯವಸ್ಥಾಪಕರ ಹೆಸರಿಗೆ ಸುದ್ದಿಯಾಗಿದೆ ಎಂದು ಆರೋಪಿಸಿ ಅವರ ಮೇಲೆ ಕುಪಿತ ಗೊಂಡು ವರದಿ ನೀಡಿದ್ದಾರೆ. ಈ ವಿಷಯದಲ್ಲಿ ಭ್ರಷ್ಟಾಚಾರಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಇವರು ತಮ್ಮ ಅಧಿಕಾರದ ಒತ್ತಡದಿಂದ ಘಟಕ ವ್ಯವಸ್ಥಾಪಕರ ಮೇಲೆ ಇಲ್ಲಿಯ ವರೆಗೆ ಯಾವುದೇ ಕ್ರಮಗಳು ಜರುಗದಂತೇ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಈ ವಿಷಯದಲ್ಲಿ ನಿಸ್ಪಷ್ಷವಾಗಿ ಕಾನೂನು ರೀತಿಯ ಕ್ರಮ ಘಟಕ ವ್ಯವಸ್ಥಾಪಕರ ಮೇಲೆ ಜರುಗಬೇಕು. ಅದೇ ಕೆಲಸ ಒಬ್ಬ ಕಾರ್ಮಿಕ ಮಾಡಿದರೆ ಸಂಸ್ಥೆ ಸುಮ್ಮನೆ ಬಿಡುತ್ತಿತ್ತಾ?
ವಿಜಯಪುರ ವಿಭಾಗೀಯ ಕಾರ್ಯಾಗಾರದ ಟೈರ್ ಉತ್ಪಾದನಾ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪಾರುಪತ್ತೇಗಾರರಾದ 01ನೇ ಎಂ.ಆರ್.ಪಾರ್ಥನಹಳ್ಳಿ ಅವರನ್ನು ಸುಖಾ ಸುಮ್ಮನೆ ವಿಜಯಪುರ 01ನೇ ಘಟಕಕ್ಕೆ ವರ್ಗಾವಣೆ ಮಾಡಿದ್ದಾರೆ. ವಿಜಯಪುರ 01 ನೇ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಂಕರ ಎಸ್.ಪವಾರ ಪಾರುಪತ್ತೇಗಾರ ಇವರನ್ನು ವಿಭಾಗೀಯ ಕಾರ್ಯಾಗಾರಕ್ಕೆ ನಿಯೋಜಿಸಿದ್ದಾರೆ. ಈ ನಿಯೋಜನೆ ಭ್ರಷ್ಟಾಚಾರದ ನಿಯೋಜನೆ ಆಗಿದೆ ಎಂದು ದೂರಿದ್ದಾರೆ.
ಈ ನಾರಾಯಣಪ್ಪ ಕುರಬರ ವಿರುದ್ದ ಸಾಕಷ್ಟು ದೂರುಗಳಿದ್ದು ತಮ್ಮ ಅಧಿಕಾರದ ಹಾಗೂ ರಾಜಕೀಯ ಒತ್ತಡವನ್ನು ಬಳಸಿಕೊಂಡು ತಮಗೆ ಬೇಕಾಗಿದ್ದವರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮೆಸಿಕೊಂಡು ಅವರ ವಿರುದ್ಧ ಇವರು ದೂರುಗಳಲ್ಲಿ ನಿರಪರಾಧಿ ಎಂದು ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳುವ ಹವ್ಯಾಸ ಇವರದ್ದಾಗಿದೆ. ಇಲಾಖೆಗೆ ಸೇರಿದ್ದಾಗಿನಿಂದ ಇಲ್ಲಿಯ ವರೆಗೆ ಇವರ ಮೇಲೆ ದಾಖಲಾಗಿರುವ ದೂರುಗಳ ಮೇಲೆ ಹಾಗೂ ಆ ದೂರಿನ ವಿಚಾರಣೆ ಮಾಡಿರುವ ವಿಚಾರಣಾಧಿಕಾರಿಗಳ ಬಗ್ಗೆ ದೂರುಗಳ ಮೇಲೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸೂಕ್ತ ವಿಚಾರಣೆಯನ್ನು ಮಾಡಿಸಬೇಕು.
ಮಾಳಪ್ಪ ಬಿರಾದಾರ ಚಾಲಕ ಕಂ ನಿರ್ವಾಹಕ ಇಂಡಿ ಘಟಕ ಇವರ ಅಮಾನತು ತೇರವು ಮಾಡಿ ವಿಜಯಪುರ ಘಟಕ-02ಕ್ಕೆ ನಿಯೋಜಿಸಿದ್ದಾರೆ. ಅವರಿಂದ ಹಣ ಪಡೆದುಕೊಂಡು ವಿಜಯಪುರ ಘಟಕ-02 ನೀಡಿದ್ದನ್ನು ರದ್ದು ಮಾಡಿ ತಾನು ಒತ್ತಾಯದ ಮೇಲೆ ಮಾಡಿದ್ದು ಎಂದು ತೋರಿಸಲು ಭ್ರಷ್ಟಾಚಾರದ ಹಗರಣ ಹೊರಗಡೆ ಬರದ ಹಾಗೆ ಮಾಡಲು ರಾಜಕೀಯ ನಾಯಕರಿಂದ ಇನ್ನಿತರರಿಂದ ಶೀಫಾರಸು ಮಾಡಿಸಿಕೊಂಡು ಮುದ್ದೇಬಿಹಾಳ ಘಟಕ ನೀಡಿದ್ದಾರೆ.
ಈ ನಾರಾಯಣಪ್ಪ ಕುರಬರ ವಿಜಯಪುರ ವಿಭಾಗಕ್ಕೆ ಬಂದಾಗಿನಿಂದ ಇಲ್ಲಿಯ ವರೆಗೆ ಮಾಡಿರುವ ವರ್ಗಾವಣೆಗಳ ಬಗ್ಗೆ, ಪದೋನ್ನತಿ ನೀಡಿರುವ ಬಗ್ಗೆ, ಪ್ರಕರಣಗಳನ್ನು ಇತ್ಯರ್ಥ ಮಾಡಿರುವ ಬಗ್ಗೆ ಸುತ್ತೋಲೆ ಸಂಖ್ಯೆ 1491 ರನ್ವಯ ಲಘು ಕೆಲಸ ನೀಡಿದ ಬಗ್ಗೆ, ಅಮಾನತು ಆದ ನಂತರ ಘಟಕಗಳನ್ನು ನೀಡಿ ಮತ್ತೇ ಘಟಕಗಳನ್ನು ಬದಲಾವಣೆ ಮಾಡಿದ ವಿಷಯಗಳಲ್ಲಿ ತನಿಖೆಗೆ ಒಳ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾರಾಯಣಪ್ಪ ಕುರಬರ ತನ್ನ ಉಳಿದ 11 ತಿಂಗಳ ಸೇವೆಯಲ್ಲಿ ವಿಭಾಗದಲ್ಲಿ ಸಾಕಷ್ಟು ಭೃಷ್ಟಾಚಾರ ಮಾಡುವುದು ಇವರ ದೊಡ್ಡ ಗುರಿಯಾಗಿದೆ. ವಿಜಯಪುರ ವಿಭಾಗದಲ್ಲಿ ಅಮಾಯಕ ಹಾಗೂ ಮುಗ್ದ ಕಾರ್ಮಿಕರಿದ್ದು ಬೇಡಿದಷ್ಟು ಹಣ ನೀಡುತ್ತಾರೆ ಎಂದು ತಿಳಿದುಕೊಂಡು ವಿಜಯಪುರ ವಿಭಾಗವನ್ನೇ ಭ್ರಷ್ಟಾಚಾರ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ.
ಹೀಗಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆಈ ಎಲ್ಲ ವಿಷಯದಲ್ಲಿ ತುರ್ತು ಕ್ರಮ ಕೈಗೊಂಡು ಓರ್ವ ಐಎಎಸ್ ಅಧಿಕಾರಿಯವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಈ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ತುರ್ತಾಗಿ ತನಿಖೆ ಕೈಗೊಂಡು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಾರಿಗೆ ಇಲಾಖೆಯ ಡಾ.ಎನ್.ವಿ. ಪ್ರಸಾದ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಯಾಕುಬ್ ದೂರು ಸಲ್ಲಿಸಿದ್ದಾರೆ.
Related

You Might Also Like
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್: ಬೆಲೆಯಲ್ಲಿ ಭಾರಿ ಇಳಿಕೆ
ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್...
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...
9 ಎಕರೆಯಲ್ಲಿ ಕೆಂಪೇಗೌಡರ ವಸ್ತು ಸಂಗ್ರಹಾಲಯ ನಿರ್ಮಾಣ: ಉಸ್ತುವಾರಿ ಸಚಿವ ಕೆಎಚ್ಎಂ
ನಾಡಪ್ರಭು ಕೆಂಪೇಗೌಡರ 516 ನೇ ಜಯಂತ್ಯೋತ್ಸವ ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಆವತಿ ಗ್ರಾಮದ ಬಳಿ 9.10 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ,...
ಲೋಕಾಯುಕ್ತರು ರಾಜಿನಾಮೆ ನೀಡಬೇಕು, ಅಬಕಾರಿ ಸಚಿವರ ವಜಾಗೊಳಿಸಲು ಆಗ್ರಹಿಸಿ KRS ಪಕ್ಷದಿಂದ ಬೃಹತ್ ಪ್ರತಿಭಟನೆ
ಬೆಂಗಳೂರು: ಲೋಕಾಯುಕ್ತರು ರಾಜಿನಾಮೆ ನೀಡಲಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ವಜಾಗೊಳಿಸಿ, ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ...
ಸರ್ಕಾರ ಅತೀ ಶೀಘ್ರದಲ್ಲೇ ಸಾರಿಗೆ ನೌಕರರಿಗೆ ಕೊಟ್ಟ ಭರವಸೆ ಈಡೇರಿಸಲಿದೆ: ಡಿಸಿಎಂ ಡಿಕೆಶಿ
ಬೆಂಗಳೂರು: ಚುನಾವಣಾ ಪೂರ್ವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ...
KKRTC: ತನ್ನದಲ್ಲದ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳಿದ ಮಹಿಳೆ- ಪ್ರಶ್ನಿಸಿದ್ದಕ್ಕೆ ಪ್ರಜ್ಞೆ ತಪ್ಪುವವರೆಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಸಂಬಂಧಿಕರು
ಕಲಬುರಗಿ: ಬೇರೆಯವರ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಪಡೆದುಕೊಳ್ಳಲು ಮುಂದಾದ ಮಹಿಳೆಗೆ ಇದು ನಿಮ್ಮ ಆಧಾರ ಕಾರ್ಡ್ ಅಲ್ಲ ನಿಮ್ಮದನ್ನು ಕೊಡಿ ಎಂದು ನಿರ್ವಾಹಕರು ಹೇಳಿದ್ದಕ್ಕೆ ಮಹಿಳೆ...
KSRTC: ಟೈರ್ ಬ್ಲಾಸ್ಟಾಗಿ ಮನೆಗೆ ನುಗ್ಗಿದ ಬಸ್-10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ತಿಪಟೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮನೆಗೆ ಬಸ್ ನುಗ್ಗಿದ ಘಟನೆ ತಾಲೂಕಿನ ಸಿದ್ದಾಪುರ...