CRIMENEWSನಮ್ಮಜಿಲ್ಲೆ

KKRTC ಚಲಿಸುತ್ತಿದ್ದ ಬಸ್‌ನಿಂದ ಆಯಾ ತಪ್ಪಿ ಹೊರಕ್ಕೆ ಬಿದ್ದ ಕಂಡಕ್ಟರ್ ದಾರುಣ ಸಾವು

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಚಲಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಿಂದ ಆಯಾ ತಪ್ಪಿ ಕೆಳಗೆ ಬಿದ್ದು ಕಂಡಕ್ಟರ್ ಒಬ್ಬರು ಸ್ಥಳದಲೇ ಮೃತಪಟ್ಟಿರುವ ಘಟನೆ ಶಹಾಪುರದಲ್ಲಿ ನಡೆದಿದೆ.

ಮಂಗಳವಾರ ಈ ಘಟನೆ ನಡೆದಿದ್ದು, ನಿರ್ವಾಹಕ ಬಾಬು ಮಂದ್ರವಾಡ (47) ಎಂಬುವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಲಬುರ್ಗಿ ಘಟಕ -1 ನಿರ್ವಾಹಕ ಬಾಬು ಮಂದ್ರವಾಡ ಹಾಗೂ ಚಾಲಕ ದಿಲೀಪ್‌ ಅವರು ಕಲಬುರಗಿ-ಸುರಪುರ ಮಾರ್ಗದಲ್ಲಿ ಡ್ಯೂಟಿ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಬಸ್‌ ಕಲಬುರಗಿಯಿಂದ ಶಹಾಪುರ ಬಸ್‌ ನಿಲ್ದಾಣಕ್ಕೆ ಬಂದಿದ್ದು, ಇಲ್ಲಿಂದ ಸುರಾಪುರಕ್ಕೆ ಹೋಗುತ್ತಿದ್ದಾಗ ನಿರ್ವಾಹಕ ಬಾಬು ಬಾಗಿಲ ಬಳಿ ಹೋಗುತ್ತಿದ್ದಂತೆ  ಕಾಲುಜಾರಿ ಬಸ್‌ನಿಂದ ಹೊರಕ್ಕೆ ಬಿದ್ದಿದ್ದಾರೆ.

ಈ ವೇಳೆ ವಾಹನದ ಮುಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಸ್ಥಳಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ ಬಳಿಕ ಕಂಡಕ್ಟರ್‌ ಮೃತದೇಹವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕಳಿಸಿದರು.

ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

Deva
the authorDeva

Leave a Reply

error: Content is protected !!