ಕಾಡಿನೊಳಗೆ ರೆಸಾರ್ಟ್ ನಿರ್ಮಾಣ- ನಾಡಿಗೆ ಬರುವ ಕಾಡು ಪ್ರಾಣಿಗಳಿಂದ ಮಾನವರ ಹತ್ಯೆ: ಕುರುಬೂರು ಶಾಂತಕುಮಾರ್ ಕಿಡಿ

ಸರಗೂರು: ಅರಣ್ಯದ ಒಳಗೆ ರೆಸಾರ್ಟ್ ಗಳ ನಿರ್ಮಾಣ ಮಾಡುತ್ತಿರುವುದರಿಂದ ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ಮಾನವರ ಹತ್ಯೆ ಮಾಡುತ್ತಿವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ನಿಯೋಗದ ಜತೆ ಇಂದು ಮೃತರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಮೋಜಿಗಾಗಿ ಕಾಡಿನ ಒಳಗೆ ರೆಸಾರ್ಟ್ ನಿರ್ಮಾಣ ಮಾಡಿ ಜನರ ಸಂಚಾರ ಹೆಚ್ಚಾದ ಕಾರಣ ಪ್ರಾಣಿಗಳು ಗಾಬರಿಯಿಂದ ನಾಡಿಗೆ ಬಂದು ಮಾನವರ ಹತ್ಯೆ ಮಾಡುತ್ತಿವೆ ಎಂದ ಅವರು, ಹುಲಿ ದಾಳಿಗೆ ಪ್ರಾಣ ಕಳೆದುಕೊಂಡ ರಾಜಶೇಖರಪ್ಪ ಕುಟುಂಬಕ್ಕೆ ಸರ್ಕಾರ ತಕ್ಷಣ ಐವತ್ತು ಲಕ್ಷ ಪರಿಹಾರ ನೀಡಿ ಅವರ ಕುಟುಂಬಕ್ಕೆ ಸರ್ಕಾರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ವಕೀಲರಾದ ರವಿಕುಮಾರ್, ಹಂಪಾಪುರ ರಾಜೇಶ್, ಸರಗೂರು ಅಜಿತ್ ಕುಮಾರ್, ಸುರೇಶ್ ಶೆಟ್ಟಿ, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ದೊಡ್ಡಕಾಟೂರು ಮಹದೇವಸ್ವಾಮಿ, ಕುರುಬೂರು ಪ್ರದೀಪ್, ಅಂಬಳೆ ಮಂಜುನಾಥ್, ಕೋಟೆ ಸುನಿಲ್, ಚುಂಚುರಾಯನ ಉಂಡಿ ನಂಜುಂಡಸ್ವಾಮಿ, ಸಿದ್ದರಾಮ, ಮಂಜು, ಸೋಮ ಇನ್ನು ಮುಂತಾದವರಿದ್ದರು.
Related








