NEWSದೇಶ-ವಿದೇಶನಮ್ಮರಾಜ್ಯ

ಅಡುಗೆ ಗ್ಯಾಸ್‌ ಸಿಲಿಂಡರ್‌ಗೆ 50 ರೂ. ಏರಿಕೆ- ಗ್ರಾಹಕರಿಗೆ ಶಾಕ್‌ಕೊಟ್ಟ ಕೇಂದ್ರ ಸರ್ಕಾರ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಳೆದ ವಾರ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಈಗ ಗೃಹ ಬಳಕೆ ಸಿಲಿಂಡರ್ ಬೆಲೆಯನ್ನೂ 50 ರೂ. ಏರಿಸುವ ಮೂಲಕ ಸಾಮಾನ್ಯ ಜನರ ಜೇಬಿಗೆ ನೇರವಾಗಿ ಕತ್ತಿರಿಹಾಕಿದೆ.

ಹೌದು! 14.2 ಕಿಲೋ ಸಿಲಿಂಡರ್‌ನ ಅಡಿಗೆ ಅನಿಲದ ಬೆಲೆಯನ್ನು 805.50ರಿಂದ 855.50 ರೂ.ಗೆ ಹೆಚ್ಚಳ ಮಾಡಿದೆ. ಇದು ಸಾಮಾನ್ಯ ಬಳಕೆದಾರರಿಗೆ ಮಾತ್ರವಲ್ಲ, ಉಜ್ವಲ ಸ್ಕೀಮ್ ಫಲಾನುಭವಿಗಳಿಗೂ ಈ ಬೆಲೆ ಏರಿಕೆಯ ಬಿಸಿ ತಾಕಿದೆ.

ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎಲ್​​ಪಿಜಿ ಬೆಲೆ ಏರಿಕೆ ಮಾಡಿರುವುದನ್ನು ಸೋಮವಾರ ಅಂದರೆ ಏ.7ರಂದು ತಿಳಿಸಿದ್ದು, ಇಂದಿನಿಂದಲೇ ದರ ಏರಿಕೆಯ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

14.2 ಕಿಲೋ ಗ್ಯಾಸ್‌ ಸಿಲಿಂಡರ್ ಬೆಲೆ 805.50 ರೂ. ಇದ್ದದ್ದು 855.50 ರೂ.ಗೆ ಏರಿಕೆ ಆಗಲಿದೆ. ಉಜ್ವಲ ಸ್ಕೀಮ್​​ನ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್‌ ಸಿಗುತ್ತದಾದರೂ ಅವರಿಗೂ ಕೂಡ 50 ರೂ. ಏರಿಕೆ ಆಗಿದೆ. 505 ರೂ. ಇದ್ದ ಬೆಲೆ 555 ರೂ.ಗೆ ಹೆಚ್ಚಳ ಆಗುತ್ತಿದೆ.

ಪೆಟ್ರೋಲ್ ಮತ್ತು ಡೀಸಲ್ ಮೇಲೆ ಕೇಂದ್ರ ಅಬಕಾರಿ ಸುಂಕದಲ್ಲಿ ಎರಡು ರೂ.ಏರಿಕೆ ಮಾಡಲಾಗಿರುವ ಸುದ್ದಿ ಬಂದ ಬೆನ್ನಲ್ಲೇ ಜನಸಾಮಾನ್ಯರಿಗೆ ಅಡುಗೆ ಅನಿಲದ ಬೆಲೆ ಏರಿಕೆಯ ಶಾಕ್ ಬಂದಿದೆ.

ಏಪ್ರಿಲ್ 1ರಂದು ವಾಣಿಜ್ಯ ಬಳಕೆಯ ಅನಿಲದ ಬೆಲೆಯನ್ನು ಇಳಿಸಲಾಗಿತ್ತು. 19 ಕಿಲೋ ಮತ್ತು 47.5 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ ಇಳಿಕೆ ಆಗಿತ್ತು. ಆದರೆ, ಇವತ್ತು ಎರಡೂ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ಹೆಚ್ಚಳಗೊಂಡಿವೆ. 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ ಸಿಲಿಂಡರ್​​ಗೆ 5.50 ರೂ. ಹೆಚ್ಚಳ ಆಗಿದೆ. 47.5 ಕಿಲೋ ಸಿಲಿಂಡರ್ ಬೆಲೆ 13.50 ರೂನಷ್ಟು ಏರಿಕೆ ಆಗಿದೆ.

Advertisement
Deva
the authorDeva

Leave a Reply

error: Content is protected !!