NEWSನಮ್ಮಜಿಲ್ಲೆನಮ್ಮರಾಜ್ಯ

ರೀಲ್ಸ್‌, ವಿಡಿಯೋ ಮಾಡುವ ವಕೀಲರಿಗೆ ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟ ವಕೀಲರ ಪರಿಷತ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೃತ್ತಿನಿರತ ವಕೀಲರು ತಮ್ಮನ್ನು ತಾವೇ ಉನ್ನತೀಕರಿಸಿಕೊಳ್ಳುವಂತಹ ಪ್ರಚಾರದ ಯಾವುದೇ ರೀಲ್‌ಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಿದ್ದರೆ ಅಂತಹ ಆಕ್ಷೇಪಾರ್ಹ ರೀಲ್‌ಗಳು, ವಿಡಿಯೋಗಳನ್ನು ತಕ್ಷಣವೇ ತೆಗೆದುಹಾಕಬೇಕು. ಇಲ್ಲವಾದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ವಕೀಲರ ಪರಿಷತ್, ವಕೀಲರಿಗೆ ಎಚ್ಚರಿಕೆ ನೀಡಿದೆ.

ವಕೀಲರು ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಪ್ರಕಟಿಸುವುದು, ಕಿರು ವಿಡಿಯೋಗಳನ್ನು ಮಾಡುವುದು, ಕಾನೂನು ಸಲಹೆ ನೀಡುವ ರೀಲ್‌ಗಳು ಮತ್ತು ಅವುಗಳನ್ನು ಫೇಸ್‌ಬುಕ್, ಎಕ್ಸ್, ಲಿಂಕ್ಡ್‌ಇನ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಪ್ರಕಟಿಸುವಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಇತ್ತೀಚೆಗೆ ನಡೆದ ರಾಜ್ಯ ವಕೀಲರ ಪರಿಷತ್ ಸಭೆಯಲ್ಲಿ ಚರ್ಚೆಯಾಯಿತು.

ತಮ್ಮ ಬಗ್ಗೆ ತಾವೇ ಪ್ರಚಾರ ಮಾಡಿಕೊಳ್ಳುವ ವಕೀಲರು ಕಡ್ಡಾಯವಾಗಿ ಈ ಸಂಬಂಧ ರೂಪಿಸಲಾಗಿರುವ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಭಾರತೀಯ ವಕೀಲರ ಪರಿಷತ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ ಬಿಸಿ) ಹಾಗೂ ವಕೀಲರ ಕಾಯಿದೆ 1961ರ ಕಲಂ 35ರಡಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪರಿಷತ್ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ್ ಎಚ್ಚರಿಕೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!