ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಗೃಹ ನಿರ್ಮಾಣ ಸಂಘದಲ್ಲಿ ನಿಗಮದ ಅಧಿಕಾರಿ ಹಾಗೂ ನೌಕರರಿಗೆ ನಿವೇಶನ ಹಂಚಿಕೆ ಮಾಡದೆ ಕೋಟಿ ಕೋಟಿ ರೂ.ಗಳ ಅವ್ಯವಹಾರಗಳು ನಡೆದಿದೆ.
2007-08ರಿಂದ 2017-18ರವರೆಗೂ ಸುಮಾರು 15 ಕೋಟಿ ರೂಪಾಯಿ ಸಂಘದ 900 ಸದಸ್ಯರು ನಿವೇಶ ಆಸೆಯಿಂದ ತಾವು ದುಡಿದ ಹಣವನ್ನು ತಂದು ಸಂಘಕ್ಕೆ ಕಟ್ಟಿದ್ದರೆ. ಆದರೆ, ಈ 900 ಮಂದಿ ಅಧಿಕಾರಿಗಳು ಮತ್ತು ನೌಕರರಿಗೆ ನಿವೇಶ ಹಂಚಿಕೆ ಮಾಡದೆ ಸಂಘದ ಹಣವನ್ನು ದುರುಪಯೋಗ ಪಡಿಸಿಕೊಂಡು ನುಂಗಿ ನೀರುಕುಡಿದ್ದಿದ್ದಾರೆ ಎಂಬ ಆರೋಪ ಅಂದಿನ ಸಂಘದ ಅಧ್ಯಕ್ಷ ಸೇರಿದಂತೆ ಆಡಳಿತ ಮಂಡಳಿ ಮೇಲೆ ಇದೆ.
ಈ ಆರೋಪದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿದ ಅಧಿಕಾರಿಗಳು ಅಂತಿಮ ವರದಿಯನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಶಿಸ್ತುಪಾಲನಾಧಿಕಾರಿಗಳೂ ಆದ ವಿ.ಅನ್ಬುಕುಮಾರ್ ಅವರಿಗೆ ಅಸಲ್ಲಿಸಿದ್ದಾರೆ.
ಅಧಿಕಾರಿಗಳು ಸಲ್ಲಿಸಿದ ಎಲ್ಲ ತನಿಖಾ ವರದಿಗಳನ್ನು ಪರಿಶೀಲಿಸಿದ ಅನ್ಬುಕುಮಾರ್ ಅವರು, ಈ ಸಂಬಂಧ ಆರೋಪಿಗಳಾದ ಮಂಡ್ಯ ವಿಭಾಗದ ಕೆಎಸ್‌ಆರ್‌ಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಜಿ.ಎ.ಮಂಜುನಾಥ, ರಾಮನಗರ ವಿಭಾಗದ ವಿಭಾಗೀಯ ಸಂಚಲನಾಧಿಕಾರಿ ಪುರುಷೋತ್ತಮ, ಬಿಎಂಟಿಸಿ ಕೇಂದ್ರ ಕಚೇರಿಯ ಲೆಕ್ಕಾಧಿಕಾರಿ ಟಿ.ಎಲ್.ಅರುಣಕುಮಾರ್, ಕೆಎಸ್‌ಆರ್‌ಟಿಸಿ ಬೆಂ.ಕೇ.ವಿಭಾಗದ ಘಟಕ-4ರ ಚಾಲಕ ಎಸ್.ಎನ್.ರಾಜಣ್ಣ ವಿರದ್ಧ ಕ್ರಮ ಕೈಕೊಂಡು ಆದೇಶ ಹೊರಡಿಸಿದ್ದಾರೆ.
ಶಿಸ್ತುಪಾಲನಾಧಿಕಾರಿಯ ಆದೇಶ: ಕರಾರಸಾಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿಗಳು 1971 ಮತ್ತು ಸೇರ್ಪಡೆಗಳ 19(2)ರಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ. ವಿನಿಯಮ 18 ಎ(Vi) ರ ಪ್ರಕಾರ, ಟಿ.ಎಲ್. ಅರಣಕುಮಾರ್, ಇಂದಿನ ಲೆಕ್ಕಾಧಿಕಾರಿ, ರಾಮನಗರ ವಿಭಾಗ ಪ್ರಸ್ತುತ ಕೇಂದ್ರ ಕಚೇರಿ, ಬೆಂಮಸಾಸಂಸ್ಥೆ, ಜಿ.ಎ.ಮಂಜುನಾಥ, ಅಂದಿನ ಭದ್ರತಾ ಮತ್ತು ಜಾಗೃತಾಧಿಕಾರಿ.ರಾಮನಗರ ವಿಭಾಗ ಪ್ರಸ್ತುತ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ, ಮಂಡ್ಯ ವಿಭಾಗ.
ಮರುಷೋತ್ತಮ, ವಿಭಾಗೀಯ ಸಂಚಲನಾಧಿಕಾರಿ, ರಾಮನಗರ ವಿಭಾಗ ಮತ್ತು ಎಸ್.ಎನ್. ರಾಜಣ್ಣ, ಚಾಲಕ, ಬಿ.ಸಂ:7187, ಘಟಕ-4, ಬೆಂಗಳೂರು ಕೇಂದ್ರೀಯ ವಿಭಾಗ, ಕರಾರಸಾನಿಗಮ ಈ ನಾಲ್ವರು ಆರೋಪಿಗಳ ಪ್ರಸ್ತುತ ಮೂಲ ವೇತನದ ವಾರ್ಷಿಕ ವೇತನ ಬಡ್ತಿಯ ನಾಲ್ಕು (04) ಹಂತಗಳನ್ನು ಸಂಚಿತಸಹಿತವಾಗಿ ಕೆಳಗಿಳಿಸಲು ಆದೇಶಿಸಿದ್ದಾರೆ.
ಈ ಆರೋಪಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂ:24/2018ಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವು ಸಂಬಂಧಿತ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಇವರ ಅಂತಿಮ ಅಭ್ಯರ್ಥನದಲ್ಲಿ ಶೇಕಡಾ 50 ರಷ್ಟು ಮಾತ್ರ (ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣ ಮೊತ್ತದಲ್ಲಿ ಮಾತ್ರ) ತಡೆಹಿಡಿಯುವಂತೆ ಆದೇಶ ಹೊರಡಿಸಿದ್ದಾರೆ.
ಇನ್ನು ಈ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಸಿ. ರಾಮಯ್ಯ, ಚಾಲಕ, ಸಂ:1023, ಘಟಕ-1, ಬೆಂಗಳೂರು ಕೇಂದ್ರೀಯ ವಿಭಾಗ, ಕರಾರಸಾನಿಗಮ ಇವರ ಮೇಲಿನ ಆರೋಪಗಳನ್ನು ಕೈಬಿಡಲಾಗಿದೆ ಎಂದು ಆದೇಶಿಸಿದ್ದಾರೆ.
ಅಧಿಕಾರಿಗಳು ಮತ್ತು ನೌಕರರ ನೂರಾರು ಕನಸುಕಟ್ಟಿಕೊಂಡು ಹಾಕಿದ ಕೋಟಿ ಕೋಟಿ ಹಣವನ್ನು ನುಂಗಿ ನೀರುಕುಡಿದವರ ವಿರುದ್ಧ ಕ.ರಾ.ರ.ಸಾ.ನಿಗಮದ ನೌಕರರ ಗೃಹ ನಿರ್ಮಾಣ ಸಂಘದಲ್ಲಿ ನಿಗಮದ ಅಧಿಕಾರಿ ಹಾಗೂ ನೌಕರರುಗಳಿಗೆ ನಿವೇಶನ ಹಂಚಿಕೆ ವಿಷಯದಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ಮತ್ತು ಈ ಅವ್ಯವಹಾರದಲ್ಲಿ ನಿಗಮದ ಅಧಿಕಾರಿ/ಸಿಬ್ಬಂದಿಗಳು ಭಾಗಿಯಾಗಿರುವ ಕುರಿತು ಟಿ.ಹನುಮಂತಪ್ಪ ಎಂಬುವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಎಂಡಿ ಈ ಆದೇಶ ಹೊರಡಿಸಿದ್ದಾರೆ.