ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ತಮ್ಮ ಆದಾಯ ಕಡಿತವಾಗುತ್ತಿದೆ ಎಂದು ಖಾಸಗಿ ಬಸ್ ಸಿಬ್ಬಂದಿ KSRTC ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಇಂದು ನಡೆದಿದೆ.
ಸೋಮವಾರ (ಜು.17) ಬೆಳಗ್ಗೆ ದಾವಣಗೆರೆಯಿಂದ ಅರಸಿಕೇರಿ ಮಾರ್ಗವಾಗಿ ಬಳ್ಳಾರಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಕ್ಕೆ ಖಾಸಗಿ ಬಸ್ ಸಿಬ್ಬಂದಿ ತೊಂದರೆ ನೀಡಿದ್ದಲ್ಲದೆ, ಆ ಬಸ್ ಅಡ್ಡಗಟ್ಟಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಕಂಚಿಕೇರಿ ಸಮೀಪ ನಡೆದಿದೆ.
ದಾವಣಗೆರೆಯಿಂದ ಅರಸಿಕೇರಿ ಮಾರ್ಗವಾಗಿ ಬಳ್ಳಾರಿಗೆ ಹೊರಟಿದ್ದ KSRTC ಬಸ್ ಕಂಚಿಕೇರಿ ದಾಟುತ್ತಿದ್ದಂತೆ ಅರಸೀಕೇರಿಗೆ ಹೊರಟಿದ್ದ KA-17 B 2038 ಖಾಸಗಿ ಬಸ್ ಚಾಲಕ, ಕೆಎಸ್‌ಆರ್‌ಟಿಸಿ ಬಸ್‌ಗೆ ಅಡ್ಡಿಪಡಿಸುತ್ತಾ ಬಸ್ ಚಾಲಾಯಿಸಿದ್ದಾನೆ.
ಇಷ್ಟೆ ಅಲ್ಲದೆ ಸುಮಾರು ಇಪ್ಪತ್ತು ನಿಮಿಷ KSRTC ಬಸ್ ಮುಂದೆ ಹೋಗಲು ದಾರಿ ಬಿಡದೆ ತೊಂದರೆ ನೀಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸುಮಾರು 20 ನಿಮಿಷಗಳ ನಂತರ ಖಾಸಗಿ ಬಸ್ ಅನ್ನು ಕೆಎಸ್‌ಆರ್‌ಟಿಸಿ ಬಸ್ ಓವರ್ ಟೇಕ್ ಮಾಡಿತ್ತು. ಆದರೆ ಇದರಿಂದ ಕೆರಳಿದ ಖಾಸಗಿ ಬಸ್‌ನ ಡ್ರೈವರ್ ಮತ್ತು ಕಂಡಕ್ಟರ್ ಹಳ್ಳಿಯೊಂದರ ಬಳಿ ಕೆಎಸ್‌ಆರ್‌ಟಿಸಿ ಬಸ್ ಅಡ್ಡ ಹಾಕಿ ಬಸ್ ಚಲಾಯಿಸುತ್ತಿದ್ದ ಡ್ರೈವರ್ ಮತ್ತು ಕಂಡಕ್ಟರ್‌ಗೆ ಅವಾಚ್ಯವಾಗಿ ನಿಂದಿಸಿದ್ದಾರೆ.