ಬೆಂಗಳೂರು: ಸಾರಿಗೆ ಸಂಸ್ಥೆಯಲ್ಲಿ ದುಡಿಯುವ ನೌಕರರಿಗೆ ನೆಮ್ಮದಿ ಇಲ್ಲ, ವೇತನ ತಾರತಮ್ಯತೆಯನ್ನು ಈವರೆಗೂ ಅಧಿಕಾರಕ್ಕೆ ಬಂದಿರುವ ಯಾವುದೇ ಸರ್ಕಾರ ಬಗೆಹರಿಸಿಲ್ಲ ಇನ್ನಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಾದರೂ ನಮ್ಮ ಈ ವೇತನ ತಾರತಮ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಈಗಾಗಲೇ ವಿಧಾನಸಭಾ ಚುನಾವಣೆಯ ವೇಳೆ ನೀವೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ನಮಗೂ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನವನ್ನು ವೇತನ ಆಯೋಗ ಮಾದರಿಯಲ್ಲೇ ಕೊಡುವ ಮೂಲಕ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಅಧಿಕಾರಿಗಳು/ನೌಕರರಿಗೂ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಈವರೆಗೂ ನಮಗೆ ಯಾವ ವಿಜ್ಞಾನ ತಂತ್ರಜ್ಞಾನ ಎಷ್ಟೋ ಮುಂದುವರಿದರೂ ಈ ಹಿಂದಿನ ಸರ್ಕಾರಗಳು ಮಾತ್ರಾ ಹಳೇ ಕಾಲದರೀತಿಯಲ್ಲಿಯೇ KSRTC Employeesಗೆ ಅನ್ಯಾಯ ಮಾಡಿಕೊಂಡು ಬಂದಿವೆ. ದೇಶದಲ್ಲಿ ನೂರಾರು ಪ್ರಶಸ್ತಿ ಪದಕಗಳನ್ನು ತಮ್ಮ ಮುಡಿಗೆ ಏರಿಸಿಕೊಳ್ಳುವ ಮೂಲಕ ಮೊದಲ ಸ್ಥಾನದಲ್ಲಿ ಗುರುತಿಸಿ ಕೊಂಡಿದ್ದರೂ ನಮಗೆ ಆರ್ಥಿಕವಾಗಿ ಸಿಗಬೇಕಿರುವ ಸೌಲಭ್ಯ ಸಿಕ್ಕಿಲ್ಲ.
KSRTC ನೌಕರರಿಗೆ ದುಡಿಮೆಗೆ ಸರಿಯಾಗಿ ವೇತನ ಕೊಡುವುದರಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಕೇಳದೇ ಇದ್ದರೂ ಎಲ್ಲ ರೀತಿಯ ಉಚಿತ ಭಾಗ್ಯಗಳನ್ನುಕೊಟ್ಟಿರುವ ಸರ್ಕಾರ, ಬೇಕುಬೇಕು ಎಂದು ಹೇಳಿ ಬೇಡಿ ಕೊಂಡರೂ ಕೊಡುತ್ತಿಲ್ಲ,
ಇನ್ನಾದರೂ ಇದಕ್ಕೆ ಕೊನೆಯಾಡಿ ನಮಗೆ ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಾಳೆ (ಅ.9) ನಡೆಯುವ ಸಭೆಯಲ್ಲಾದರೂ ಪರಿಹಾರ ನೀಡಲು ಸರ್ಕಾರ ಅಸಮರ್ಥವಾಗಿದೆ ಎಂದು ತಿಳಿಸಿ. ಈ ಮೂಲಕ ಸಾರಿಗೆ ಸಚಿವರು, CM, DCM ಅವರು ಈ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.