NEWSನಮ್ಮಜಿಲ್ಲೆನಮ್ಮರಾಜ್ಯ

ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿಗಳು!

KSRTC ಚಾಮರಾಜನಗರ ಘಟಕದಲ್ಲಿ ಮಿತಿ ಮೀರಿದ ಕಿರುಕುಳ

ವಿಜಯಪಥ ಸಮಗ್ರ ಸುದ್ದಿ
  • ತಂದೆ ಸತ್ತರೂ ರಜೆ ಕೊಡದೆ ಕಾನೂನು, ಮಾನವೀಯತೆಯನ್ನೇ ಮರೆತ ಅಧಿಕಾರಿಗಳು 
  • ದೈಹಿಕ ಮಾನಸಿಕ ಒತ್ತಡದಲ್ಲೇ ಡ್ಯೂಟಿ ಮಾಡುತ್ತಿರುವ ನೌಕರರು

ಚಾಮರಾಜನಗರ: ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳ ಕುಟುಂಬಸ್ಥರು ಅಥವಾ ಸಂಬಂಧಿಕರು ಯಾರಾದರು ನಿಧನರಾದರೆ ಅವರ ಅಂತಿಮ ದರ್ಶನಕ್ಕೆ ಹೋಗುವುದಕ್ಕೂ ಬಿಡದೆ ಕಿರುಕುಳ ಕೊಡುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ಘಟಕ ವ್ಯವಸ್ಥಾಪಕರ ವಿರುದ್ಧ ನೌಕರರು ಇತ್ತೀಚೆಗೆ ಆರೋಪಿಸಿದ್ದರು.

ಈ ಬಗ್ಗೆ ಕಳೆದ ಆಗಸ್ಟ್‌ 23ರಂದು ವಿಜಯಪಥ  KSRTC ಚಾಮರಾಜನಗರ: ನೌಕರರ ಸಂಬಂಧಿಕರು ಸತ್ತರು ಅಂತಿಮ ದರ್ಶನಕ್ಕೂ ಹೋಗಲು ಬಿಡದ ಡಿಎಂ ಕುಮಾರ ನಾಯ್ಕ್‌ ! ಶೀರ್ಷಿಕೆಯಡಿ ವರದಿಕೂಡ ಮಾಡಿತ್ತು. ಇನ್ನು ಈ ಘಟಕ ವ್ಯವಸ್ಥಾಪಕ ಕುಮಾರ ನಾಯ್ಕನ ಜತೆಗೆ ಕಾರ್ಮಿಕ ಕಲ್ಯಾಣಾಧಿಕಾರಿ ರಶ್ಮಿ ಎಂಬುವರು ಸೇರಿಕೊಂಡು ನೌಕರರೊಬ್ಬರ ತಂದೆ ನಿಧನರಾಗಿದ್ದರೂ ಅವರಿಗೆ ರಜೆ ಮಂಜೂರು ಮಾಡದೆ ಗೈರಾಗಿರುವುದಕ್ಕೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ.

ಈ ವಿಷಯ ಸುಮಾರು 5ತಿಂಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಇತ್ತ ಸ್ವಂತ ತಂದೆಯನ್ನು ಕಳೆದುಕೊಂಡು ದುಃಖದಲ್ಲಿರುವ ನೌಕರನಿಗೆ ತಂದೆ ನಿಧನರಾಗಿರುವ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದರು ಅನುಮತಿ ಕೊಡದೆ ಡ್ಯೂಟಿಗೆ ಬರದೆ ಗೈರುಹಾಜರಾಗಿದ್ದೀಯ ಇದಕ್ಕೆ ಕಾರಣ ಕೊಡಬೇಕು ಎಂದು ಕಾರಣ ಏನು ಅಂತ ಗೊತ್ತಿದ್ದರೂ ಈ ರೀತಿ ನೋಟಿಸ್‌ ನೀಡುವುದು ನಿಜಕ್ಕೂ ಇವರು ಮನುಷ್ಯರೇ ಎನಿಸುತ್ತಿದೆ.

ಇಂತ ಕೀಳು ಮನೋಭಾವನೆಯುಳ್ಳ ಡಿಎಂ ಮತ್ತು ಕಾರ್ಮಿಕ ಕಲ್ಯಾಣಾಧಿಕಾರಿಗಳ ಕೆಳಗೆ ನೌಕರರು ಹೇಗೆತಾನೆ ಕೆಲಸ ಮಾಡಲು ಸಾಧ್ಯ? ಇವರ ಮನೆಯಲ್ಲೇ ಇಂಥ ಘಟನೆ ನಡೆದಿದ್ದರೆ ಇವರು ನಿಧನರಾಗಿರುವವರು ತಂದೆತಾನೆ ಯಾರಾದರೂ ಅಂತ್ಯಕ್ರಿಯೆ ಮಾಡುತ್ತಾರೆ ಬಿಡು ಎಂದು ಡ್ಯೂಟಿಗೆ ಬರುತ್ತಿದ್ದರಾ? ನಾಚಿಕೆ ಆಗೋದಿಲ್ಲವೇ ಈ ರೀತಿ ನೋಡಿಸ್‌ ನೀಡುವುದಕ್ಕೆ. ಎತ್ತ ಸಾಗುತ್ತಿದೆ ಸಾರಿಗೆ ನಿಗಮಗಳ ಅಧಿಕಾರಗಳ ಮನಸ್ಥಿತಿ ಎಂಬುವುದು ಗೊತ್ತಾಗಿತ್ತಿಲ್ಲ.

ನೈಜವಾಗಿ ನಡೆದಿರುವುದು ಏನು?: ಚಾಮರಾಜನಗರ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿರುವ ಚಂದ್ರಶೇಖರ್ ಎಸ್. ಎಂಬುವರು ಪೈಲ್ಸ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕಾರಣ 29.04.2024 ರಿಂದ 03.05.2024 ರವರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ರಜೆ ಪಡೆದುಕೊಂಡಿದ್ದರು. ಆದರೆ, ಇದೇ ಸಂದರ್ಭದಲ್ಲಿ ಚಂದ್ರಶೇಖರ್ ಅವರ ತಂದೆ 04.05.2024ರಂದು ನಿಧನರಾಗಿದ್ದು 05.05.204ರಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಚಂದ್ರಶೇಖರ್ ತಮ್ಮ ತಂದೆ ನಿಧನರಾಗಿರುವ ಬಗ್ಗೆ ಚಾಮರಾಜನಗರ ಘಟಕದ ಮೇಲಧಿಕಾರಿಗಳಿಗೆ ತಿಳಿಸಿದ್ದು ಅಪ್ಪನ ಎಲ್ಲ ಧಾರ್ಮಿಕ ಕಾರ್ಯಗಳನ್ನು ಮುಗಿಸಿಕೊಂಡು ಕರ್ತವ್ಯಕ್ಕೆ ಬರುವುದಾಗಿ ಅನುಮತಿ ಕೋರಿದ್ದಾರೆ. ಆದರೆ ಘಟಕದ ಮೇಲಧಿಕಾರಿಗಳು ಚಂದ್ರಶೇಖರ್ ಅವರಿಗೆ ರಜೆ ಮಂಜೂರು ಮಾಡದೆ ಈ ಸಮಯದಲ್ಲಿ ಗೈರುಹಾಜರಿ ಮಾಡಿದ್ದಾರೆ.

ಈ ಕಾರಣ ವಿಭಾಗದ ಕಾರ್ಮಿಕ ಕಲ್ಯಾಣಾಧಿಕಾರಿ ರಶ್ಮಿ ಅವರನ್ನು ಭೇಟಿ ಮಾಡಿ, ನಮ್ಮ ತಂದೆ ನಿಧನರಾಗಿದ್ದರಿಂದ ಘಟಕದ ಮೇಲಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ರಜೆ ಮಂಜೂರು ಮಾಡಿಕೊಡುವಂತೆ ಕೋರಿದ್ದೆ, ಆದಾಗ್ಯೂ ರಜೆ ಮಂಜೂರು ಮಾಡಿಲ್ಲ ಎಂಬ ತಮಗಾದ ಅನ್ಯಾಯದ ಬಗ್ಗೆ ಗಮನಕ್ಕೂ ತಂದಿದ್ದಾರೆ.

ಆದರೆ. ಕಾರ್ಮಿಕ ಕಲ್ಯಾಣಾಧಿಕಾರಿ ರಶ್ಮಿ ಅವರು ನೌಕರರ ಪರವಾಗಿ ನಿಲ್ಲಬೇಕಿರುವ ಈಕೆ ಚಂದ್ರಶೇಖರ್‌ ಅವರೀಗೆ ಕ್ಲಾಸ್‌ ತೆಗೆದುಕೊಂಡು ರಜೆ ಮಂಜೂರು ಮಾಡಲು ಬರುವುದಿಲ್ಲ ಎಂದು ಗದರಿ ವಾಪಸ್‌ ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಈಕೆ ಚಂದ್ರಶೇಖರ್‌ ಅವರಿಗೆ ಆರೋಪಣಾ ಪತ್ರವನ್ನು ಸಹ ಜಾರಿಗೊಳಿಸಿದ್ದಾರೆ.

ನೀನು ಬೇಕಂತಲೇ ರಜೆ ತೆಗೆದುಕೊಂಡಿದ್ದೀಯ ನಿಮ್ಮ ಘಟಕ ವ್ಯವಸ್ಥಾಪಕರು ನೀನು ಡ್ಯೂಟಿಗೆ ಬರದಿರುವುದಕ್ಕೆ ಬಸ್‌ ಮಾರ್ಗಕ್ಕೆ ಹೋಗದೆ ಸಂಸ್ಥೆಗೆ ಲಾಸ್‌ ಆಗಿದೆ ಇದಕ್ಕೆ ನೀನೆ ಕಾರಣ ಎಂಬಿತ್ಯಾದಿ ಆರೋಪ ಮಾಡಿದ್ದಾರೆ ಎಂದು ಆರೋಪ ಪತ್ರದಲ್ಲಿ ತಿಳಿಸಿದ್ದಾರೆ.

ಅಂದರೆ ಈ ಕಾರ್ಮಿಕ ಕಲ್ಯಾಣಾಧಿಕಾರಿ ರಶ್ಮಿ ಮತ್ತು ಚಾಮರಾಜನಗರ ಘಟಕ ವ್ಯವಸ್ಥಾಪಕ ಕುಮಾರ ನಾಯ್ಕ ಇಬ್ಬರಿಗೂ ನೌಕರನ ತಂದೆ ನಿಧನರಾಗಿದ್ದರೂ ಬಂದು ಡ್ಯೂಟ ಮಾಡಿ ಹೋಗಬೇಕಿತ್ತು! ಇವರ ಮನೆಯಲ್ಲಿ ಇದೇ ಸಂದರ್ಭ ಬಂದರೆ ಈ ರಶ್ಮಿ ಮತ್ತು ಡಿಎಂ ಇಬ್ಬರು ಬಂದು ಡ್ಯೂಟಿ ಮಾಡುತ್ತಾರೆ ಏಕೆಂದರೆ ಇವರಿಗೆ ಹೆತ್ತವರಿಗಿಂತ ಜನರ ಸೇವೆಯೇ ಮುಖ್ಯ ಆಗಿದೆ ಅದಕ್ಕೆ ಅಲ್ವಾ?

ಈ ರೀತಿ ತಂದೆ-ತಾಯಿ ಕುಟುಂಬಸ್ಥರು ನಿಧನರಾದರೂ ಸಹ ಈ ಅಧಿಕಾರಿಗಳಿಂದ ಕಿರುಕುಳ ಅನುಭವಿಸಬೇಕಾದ ಪರಿಸ್ಥಿತಿ ಚಾಲಕ ನಿರ್ವಾಹಕರಿಗೆ ಬಂದಿದ್ದರು ಇದನ್ನು ಕೇಳಬೇಕಾದ ಮೇಲಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸುಮಾರು 5 ತಿಂಗಳಿನಿಂದಲೂ ನೌಕರನನ್ನು ಪೀಡುತ್ತಿರುವ ಪೀಡಕರಿಗೆ ಸಹಕರಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟುಕೊಳ್ಳುತ್ತಿದೆ.

ಇಷ್ಟೇ ಅಲ್ಲದೆ ಈ ಕುಮಾರ ನಾಯ್ಕ ನೌಕರರಿಗೆ ಸರಿಯಾಗಿ ಡ್ಯೂಟಿ ಕೊಡುತ್ತಿಲ್ಲ. ರಜೆ ಮಂಜೂರು ಮಾಡುವುದಿಲ್ಲ. ಇವನಿಗೆ ಇಷ್ಟ ಬಂದ ಟೈಂನಲ್ಲಿ ಬಸ್‌ಕೊಟ್ಟು 400 ಕಿಲೋ ಮೀಟರ್‌ ಮಾಡಿಕೊಂಡು ಬರಬೇಕು ಎಂದು ತಾಕೀತು ಮಾಡುವ ಮೂಲಕ ಒಂದು ರೀತಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿ ವಿಡಿಯೋ ಕೂಡ ವಿಜಯಪಥ ಮೀಡಿಯಾಕ್ಕೆ ಲಭ್ಯವಾಗಿವೆ.

ಇನ್ನು ಕಾರ್ಮಿಕ ಕಲ್ಯಾಣಾಧಿಕಾರಿ ಆಗಿರುವ ಈ ರಶ್ಮಿ ಮೇಡಂ ಅವರು ಕಳೆದ 13 ವರ್ಷಗಳಿಂದಲೂ ಚಾಮರಾಜನಗರದಲ್ಲೇ ಭದ್ರವಾಗಿ ನೆಲೆಯೂರಿದ್ದು ಈವರೆಗೂ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಮೇಲಧಿಕಾರಿಗಳಿಗೆ ಸಾಧ್ಯವಾಗಿಲ್ಲವಂತೆ. ಅಂದರೆ ಈಕೆ ಎಷ್ಟು ಪ್ರಭಾವ ಬೀರಿ ಚಾಮರಾಜನಗರದಲ್ಲೇ ಇದ್ದು ನೌಕರರನ್ನು ಕಾಡುತ್ತಿದ್ದಾರೆ ಎಂಬುವುದು ಇದರಿಂದಲೇ ತಿಳಿಯುತ್ತಿದೆ.

ಇನ್ನಾದರೂ ಈ ರೀತಿ ನೌಕರರಿಗೆ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್‌ ಆವರು ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನೌಕರರು ಕಿರುಕುಳ ರಹಿತ ಡ್ಯೂಟಿ ಮಾಡುವುದಕ್ಕೆ ಅನುವು ಮಾಡಿಕೊಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!