NEWSಕ್ರೀಡೆ

ಕೆಕೆಆರ್‌ ವಿರುದ್ಧ ಆರ್‌ಸಿಬಿ ಸೋತರೂ ಬೌಲಿಂಗ್​ನಲ್ಲಿ ಮಿಂಚಿದ ಕನ್ನಡಿಗ ವೈಶಾಕ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ತಂಡ ಕೋಲ್ಕತ್ತ ನೈಟ್​ ರೈಡರ್ಸ್​ ವಿರುದ್ಧ ಹೀನಾಯವಾಗಿ ಸೋತಿದೆ. ಆರ್​ಸಿಬಿ ಸೋಲಿಗೆ ಬೌಲಿಂಗ್ ವಿಭಾಗವೇ ಪ್ರಮುಖ ಕಾರಣ. ನಂಬುಗೆಯ ಬೌಲರ್ಸ್​ ತುಂಬಾನೇ ದುಬಾರಿಯಾದರು. ಪರಿಣಾಮ ಕೆಕೆಆರ್ ತಂಡದ ಮುಂದೆ ಆರ್​ಸಿಬಿ ತಲೆ ಬಾಗಬೇಕಾಯಿತು.

ಮೊಹ್ಮದ್ ಸಿರಾಜ್, ಜೋಸೆಫ್, ಯಶ್ ದಯಾಳ್ ತುಂಬಾನೇ ದುಬಾರಿಯಾದರು. ಸಿರಾಜ್ ಮೂರು ಓವರ್​ ಮಾಡಿ ಯಾವುದೇ ವಿಕೆಟ್ ಪಡೆಯದೇ 46 ರನ್​ಗಳನ್ನು ನೀಡಿದರು. ಅದೇ ರೀತಿ ಯಶ್ ದಯಾಳ್ ಕೂಡ 4 ಓವರ್ ಮಾಡಿ 46 ರನ್​ ನೀಡಿದರು. ಇನ್ನು, ಜೋಸೆಫ್ ಕೇವಲ 2 ಓವರ್ ಮಾಡಿ 34 ರನ್​​ ನೀಡಿದರು.

ವಿಶೇಷ ಅಂದರೆ ಕನ್ನಡಿಗ ವಿಜಯಕುಮಾರ್ ವೈಶಾಕ್‌ 4 ಓವರ್​ ಮಾಡಿ 23 ರನ್​​ಗಳನ್ನು ಮಾತ್ರ ನೀಡಿ ಒಂದು ವಿಕೆಟ್ ಪಡೆದರು. ಹಾಗೆಯೇ ಮಯಾಂಕ್ ಡಗರ್​ ಅವರು 2.5 ಓವರ್ ಮಾಡಿ ಒಂದು ವಿಕೆಟ್ ಪಡೆದು 23 ರನ್​​ ಕೊಟ್ಟರು. ವಿಶೇಷ ಅಂದರೆ ಕಮರೂನ್ ಗ್ರೀನ್ ಕೇವಲ ಒಂದು ಓವರ್ ಮಾಡಿ 7 ರನ್​ ಮಾತ್ರ ನೀಡಿದ್ದರು.

ಎಲ್ಲ ಬೌಲರ್​ಗಳಿಂತ ಗ್ರೀನ್ ಬೆಟರ್​​ ಬೌಲಿಂಗ್ ಮಾಡಿ ಗಮನ ಸೆಳೆದರು. ಇನ್ನು ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ ಕೊಹ್ಲಿ ಅವರ 86 ರನ್​ಗಳ ಅಜೆಯ ಆಟದಿಂದ 6 ವಿಕೆಟ್ ಕಳೆದುಕೊಂಡು 182 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಕೆಕೆಆರ್, ಮೂರು ವಿಕೆಟ್ ಕಳೆದುಕೊಂಡು 186 ರನ್​ಗಳಿಸಿ ಸಂಭ್ರಮಿಸಿತು.

Leave a Reply

error: Content is protected !!
LATEST
ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿಗೆ ಜೈ ಎಂದ ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮ : ಎಚ್‌ಡಿಕೆ ಪ್ರಜ್ವಲ್ ರೇವಣ್ಣನ ಪಕ್ಷದಿಂದ ಅಮಾನತು ಮಾಡಿ: ಎಚ್‌ಡಿಡಿಗೆ ಶಾಸಕ ಶರಣಗೌಡ ಕಂದಕೂರ ಒತ್ತಾಯ ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಮಾಜಿ ಸಿಎಂ ಎಚ್‌ಡಿಕೆ ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು ಲೈಂಗಿಕ ಪ್ರಕರಣ: ಶಾಸಕ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್ ವಿರುದ್ಧ ಎಸ್‌ಐಟಿ ತನಿಖೆ ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಇನ್ನಿಲ್ಲ ಕಾಲೇಜು ಸಹಪಾಠಿಗಳ ಮೇಲೆ ಹಲ್ಲೆ ಪ್ರಕರಣ: ಏ.28ರಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ KKRTC: ಎಲ್ಲ ಸಿಬ್ಬಂದಿಗಳು ಸಮವಸ್ತ್ರ ಧರಿಸುವುದು ಕಡ್ಡಾಯ - ವಿಜಯಪುರ ಡಿಸಿ ಸ್ಪಷ್ಟನೆ ಕರ್ತವ್ಯ ನಿರತ ಸರ್ಕಾರಿ ಬಸ್‌ ನಿರ್ವಾಹಕರ ಮೇಲೆ ಹಲ್ಲೆ: ಮೂವರ ವಿರುದ್ಧ ದೂರು ದಾಖಲು