NEWSನಮ್ಮಜಿಲ್ಲೆಸಂಸ್ಕೃತಿ

ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಸೇರಿದಂತೆ ನಾಡಿನಾದ್ಯಂತ ಬೆಳಕಿನ ಹಬ್ಬದ ಮೆರುಗು ಭರ್ಜರಿಯಾಗಿ ನಡೆದಿದೆ. ಈ ನಡುವೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ದೀಪಾವಳಿಯ ರಂಗು ಹೆಚ್ಚಿಸುವಂತ ಹಣತೆ, ಹೂವು, ತರಕಾರಿ, ಹಣ್ಣುಗಳು, ಇತರ ವಸ್ತುಗಳ ವ್ಯಾಪಾರ ವಹಿವಾಟು ಜೋರಾಗಿಯೇ ನಡೆದಿದೆ.

ಯಾವುದೇ ಹಬ್ಬ ಬಂದರೂ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಫುಲ್ ಬ್ಯುಸಿ ಆಗುವುದು ಸಾಮಾನ್ಯ. ಆದರೆ, ದೀಪಾವಳಿ ಹಬ್ಬಕ್ಕೆ ಉಳಿದ ಎಲ್ಲ ಹಬ್ಬಕ್ಕಿಂತ ಹೆಚ್ಚು ಜನ ದಟ್ಟಣೆ ಆಗುತ್ತದೆ. ವಸ್ತುಗಳನ್ನು ಕೊಂಡುಕೊಳ್ಳಲು ನಾನು ಮುಂದು, ನೀ ಮುಂದು ಎಂದು ಮುಗಿ ಬೀಳುತ್ತಾರೆ. ಹೀಗಾಗಿ ಮಾರ್ಕೆಟ್​​ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದು ಇದರಿಂದ ಹಲವು ಕಡೆ ಟ್ರಾಫಿಕ್​ ಉಂಟಾಗಿತ್ತು.

ಗ್ರಾಹಕರು ಮಾರ್ಕೆಟ್​​ನಲ್ಲಿ ನವಿಲು ದೀಪ, ಪಂಚಮುಖಿ ದೀಪ, ಲಕ್ಷ್ಮಿ ದೇವಿ ದೀಪ ಸೇರಿ ಇತರೆ ಕೆಲ ವಿಧಧಲ್ಲಿರುವ ಮಣ್ಣಿನ ಹಣತೆಗಳನ್ನು ಖರೀದಿಗೆ ಮುಗಿಬೀಳುತ್ತಿದ್ದಾರೆ. ಪಟಾಕಿಗಳನ್ನು ಗ್ರಾಹಕರು ಖರೀದಿ ಮಾಡುತ್ತಿದ್ದು ರಾಕೆಟ್, ಭೂಚಕ್ರ, ಹೂ-ಕುಂಡ, ಸರ್‌ಸುರ್ ಬತ್ತಿ ಇತ್ಯಾದಿಗಳನ್ನ ತೆಗೆದುಕೊಳ್ಳುತ್ತಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳು, ತರಕಾರಿ, ದಿನಸಿಗಳು ಹೆಚ್ಚಿನ ಬೆಲೆ ಕುದುರಿಸಿಕೊಂಡಿವೆ. ನಿತ್ಯದ ಮಾರಾಟದ ಬೆಲೆಗಿಂತ ಇಂದು ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿವೆ. ಬೆಲೆ ಹೆಚ್ಚಾದರೂ ಹಬ್ಬಕ್ಕೆಂದು ಜನ ಖರೀದಿ ಮಾಡುತ್ತಿದ್ದಾರೆ. ಹೂವುಗಳು ಮಾತ್ರ ಭಾರೀ ಬೆಲೆಗೆ ಮಾರಾಟ ಆಗುತ್ತಿವೆ. ಇದರಿಂದ ಗ್ರಾಹಕರು ಫುಲ್ ಶಾಕ್ ಆಗಿದ್ದಾರೆ.

ಮಾರ್ಕೆಟ್​ನಲ್ಲಿ ಪ್ರತಿ ಕೆ.ಜಿ ಹೂವುಗಳ ಬೆಲೆ ಸುಮಾರು ಹೇಗಿದೆ..?: ಕನಕಾಂಬರ- ₹2,000. ಮಲ್ಲಿಗೆ- ₹1,500. ಗುಲಾಬಿ- ₹260. ಸೇವಂತಿಗೆ- ₹160. ಸುಗಂಧರಾಜ- ₹200. ಅಣಗಲು ಹೂ- ₹700. ಚೆಂಡೂ ಹೂ- ₹120. ಕಾಕಾಡ- ₹800. ದುಂಡು ಮಲ್ಲಿಗೆ- ₹1,500- ₹1800. ಜೋಡಿ ಕಲಮ- ₹100 ಆಗಿತ್ತು.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!