NEWSನಮ್ಮಜಿಲ್ಲೆನಮ್ಮರಾಜ್ಯ

ಫೆ.20ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ KSRTC ನಿವೃತ್ತ ನೌಕರರ ಅಹೋರಾತ್ರಿ ಧರಣಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮುಂಬರು ಫೆಬ್ರವರಿ 20 ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ಕೆಎಸ್‌ಆರ್‌ಟಿಸಿಯ ನಾಲ್ಕೂ ಸಾರಿಗೆ ನಿಗಮಗಳ ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ ತೀರ್ಮಾನಿಸಿದೆ.

ನಗರದ ವಿಲ್ಸನ್ ಗಾರ್ಡನ್‌ನಲ್ಲಿರುವ ಕನ್ನಡ ಯುವಜನ ಭವನದಲ್ಲಿ ನಡೆದ ಸಭೆಯಲ್ಲಿ 1.1.2020 ರಿಂದ 28.02.2023 ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನೌಕರರಿಗೆ ಶೇ. 15 ವೆತನ ಹೆಚ್ಚಳ, ಶೇ. 45.25 BDA ಮರ್ಜ್, ಇಂಕ್ರಿಮೆಂಟ್ ಹೆಚ್ಚಳ ಸೇರಿಸಿ ಪೇ ಪಿಕ್ಸೇಷನ್ ಮಾಡಿಲ್ಲ. ಈ ವಿಳಂಬಧೋರಣೆ ಖಂಡಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವೇದಿಕೆಯ ಮುಖಂಡರು ತಿಳಿಸಿದ್ದಾರೆ.

ಪ್ರಮುಖವಾಗಿ 1.1.2020 ರಿಂದ ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುವ 4 ನಿಗಮಗಳ ನೌಕರರು ಹಾಗೂ ಅಧಿಕಾರಿಗಳಿಗೆ 31.12.2019 ರಲ್ಲಿ ಇದ್ದ ಬೇಸಿಕ್‌ಗೆ ಶೇ. 15 ಹೆಚ್ಚಳ, ಅಂದು ಇದ್ದ ಶೇ. 45.25 BDA ಮರ್ಜ್ ಮಾಡಿ ಹಾಗೂ ಇಂಕ್ರಿಮೆಂಟ್ ಹೆಚ್ಚಳವನ್ನು ಸೇರಿಸಿ 1.1.2020 ರಿಂದ ಕೆಲಸ ಮಾಡುತ್ತಿರುವ ಎಲ್ಲ ಸಿಬ್ಬಂದಿಗಳಿಗೂ ವೇತನ ಹೆಚ್ಚಳ ಮಾಡಿ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಆಡಳಿತ ವರ್ಗ ಆದೇಶ ಮಾಡಿದೆ.

ಆದರಂತೆ ಕರ್ತವ್ಯ ನಿರತ ಎಲ್ಲ ನೌಕರರಿಗೂ ವೇತನ ನೀಡಲಾಗುತ್ತಿದೆ. ಆದರೆ 1.1.2020 ರಿಂದ 28.02.2023 ರ ನಡುವೆ 4 ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ, ಅಧಿಕಾರಿಗಳು ಮತ್ತು ನೌಕರರಿಗೆ ಶೇ. 15 ವೆತನ ಹೆಚ್ಚಳ, ಶೇ. 45.25 BDA ಮರ್ಜ್, ಇಂಕ್ರಿಮೆಂಟ್ ಹೆಚ್ಚಳ ಸೇರಿಸಿ ಪೇ ಪಿಕ್ಸೇಷನ್ ಮಾಡಿ ಕೊಟ್ಟಿಲ್ಲ. ಇದು ಮಾರ್ಚಿ ಬಂದರೆ ಒಂದು ವರ್ಷವಾಗುತ್ತದೆ.

ಇದು 1.1.2020 ರಿಂದ 28.02.2023 ರವರೆಗೆ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ ಕೊಡುವ ಸ್ಟ್ಯಾಚುಟರಿ ಸೌಲಭ್ಯವಾಗಿದೆ. ಈ ಸೌಲಭ್ಯವನ್ನು ನಿವೃತ್ತ ನೌಕರರು ಕೇಳಬೇಕಾಗಿಯೇ ಇಲ್ಲ. ಆಡಳಿತ ವರ್ಗವೇ ಎಲ್ಲರೊಟ್ಟಿಗೆ ಆದೇಶ ಮಾಡಿ ನೀಡಬೇಕಿತ್ತು.

ಆದರೆ ಈ ಬಗ್ಗೆ ಆದೇಶ ನೀಡದೆ ಇದ್ದ ಬಗ್ಗೆ ನಿವೃತ್ತ ನೌಕರರು ಸಭೆ ನಡೆಸಿ ಆಡಳಿತ ವರ್ಗಕ್ಕೆ 17.09.2023 ರಂದು ಬೆಂಗಳೂರಿನ KSRTC ಕೇಂದ್ರ ಕಚೇರಿ ಮುಂದೆ ಸೇರಿ ಅಂದು ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಕೂಡಲೇ ಆದೇಶ ಮಾಡಿ ಆರ್ಥಿಕ ಸೌಲಭ್ಯಗಳನ್ನು ಜಾರಿಗೆ ಕೊಡುವಂತೆ ಒತ್ತಾಯಿಸಲಾಗಿತ್ತು. ಆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ನಂತರವೂ ಆದೇಶ ಬರದ ಕಾರಣ 19.10.2023 ರಂದು ಸ್ವಾತಂತ್ರ್ಯ ಯೋಧರ ಪಾರ್ಕ್‌ನಲ್ಲಿ ಒಂದು ದಿನ ಧರಣಿ ನಡೆಸಲಾಯಿತು. ಅಂದು ಇದೇ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಧರಣಿ ಸ್ಥಳಕ್ಕೆ ಬಂದು ಕೂಡಲೇ ಆದೇಶ ನೀಡುವುದಾಗಿ ಭರವಸೆ ನೀಡಿದ್ದರು. ಆನಂತರ ಹಲವು ಬಾರಿ ಈ ಬಗ್ಗೆ ಸಾರಿಗೆ ಸಚಿವರು ಮತ್ತು ಇದೇ ವ್ಯವಸ್ಥಾಪಕರ ಬಳಿ ಸಭೆ ನಡೆಸಿ ಆದೇಶ ಜಾರಿ ಮಾಡಲು ಒತ್ತಾಯಿಸಿದೆವು. ಆದರೂ ಪ್ರಯೋಜನವಾಗಿಲ್ಲ.

ಇನ್ನು ಆದೇಶ ಹೊರಡಿಸುವುದಾಗಿ ಸಕಾರಾತ್ಮವಾಗಿ ಮಾತನಾಡಿದರೂ ಸಹ ಈವರೆಗೂ ಆದೇಶ ಮಾಡದಿರುವುದು ನಿವೃತ್ತ ನೌಕರರಿಗೆ ತೋರುತ್ತಿರುವ ಅಗೌರವವಾಗಿದೆ. ಆದ್ದರಿಂದ ಇಂದಿನ (ಜ.17) ಸಭೆಯಲ್ಲಿ ಈ ಬಗ್ಗೆ ನಿವೃತ್ತ ನೌಕರರಲ್ಲಿ ಅತೃಪ್ತಿ ಹೆಚ್ಚಳವಾಗಿರುವುದು ಮನಗಂಡು ಬೇಡಿಕೆ ಈಡೇರುವವರೆಗೂ ಫೆಬ್ರವರಿ 20ರಿಂದ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ.

ಬೇಡಿಕೆಗಳು: * 1.1.2020 ರಿಂದ 28.02.2023 ರವರೆಗೆ ನಿವೃತ್ತಿ ಹೊಂದಿದ ಎಲ್ಲಾ ಅಧಿಕಾರಿಗಳು/ ನೌಕರರಿಗೂ ಶೇ. 15 ಹೆಚ್ಚಳವನ್ನು ಸೇರಸಿ, ಶೇ.45.25 BDA ಮರ್ಜ್ ಮಾಡಿ. ಇಂಕ್ರಿಮೆಂಟ್ ಹೆಚ್ಚಳ ಸೇರಿಸಿ ವೇತನ ಪರಿಷ್ಕರಣೆ ಮಾಡಬೇಕು. * 01.01.2020 ರಿಂದ 28.02.2023 ರವರೆಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು.

ನಿಗಮಗಳ ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆಯ ಜಯದೆವರಾಜೇ ಅರಸು, ಕೆ.ಎಲ್‌.ಮಂಜುನಾಥ್, ಎಚ್‌.ಎಸ್‌. ಮಂಜುನಾಥ್, ವೆಂಕಟರವಣಪ್ಪ ಸೇರಿದಂತೆ ನಾಲ್ಕೂ ನಿಗಮಗಳ ನೂರಾರು  ನಿವೃತ್ತ ನೌಕರರು ಭಾಗವಹಿಸಿದ್ದರು.

Leave a Reply

error: Content is protected !!
LATEST
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು 15 ದಿನದ ಹಸುಳೆಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ - ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಸ್ತ್ರ: ಅಪರ ಸಿವಿಲ್ ನ್ಯಾಯಾಧೀಶೆ ಶಕುಂತಲಾ ಯೋಗ ಮಾಡಿ ಸಮೃದ್ಧ ಆರೋಗ್ಯವಂತ ಜೀವನ ನಡೆಸಿ: ಡಾ. ದಿವ್ಯಾ ಸಲಹೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ: ಎಎಪಿ ಆಕ್ರೋಶ KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ