NEWSನಮ್ಮಜಿಲ್ಲೆಬೆಂಗಳೂರು

BMTC ನೌಕರರಿಗೆ 2022-23ನೇ ಸಾಲಿನ ಸಮವಸ್ತ್ರ ಬದಲಿಗೆ ನ.ವೇತನದೊಂದಿಗೆ ದುಡ್ಡು ಕೊಡಲು ನಿರ್ದೇಶಕರ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದರ್ಜೆ 3 ಮತ್ತು 4ರ ಸಿಬ್ಬಂದಿಗಳಿಗೆ 2022-23 ನೇ ಸಾಲಿನ ಸಮವಸ್ತ್ರದ ಬದಲಾಗಿ “ನಗದು” ಹಾಗೂ ಹೊಲಿಗೆ ವೆಚ್ಚ ಪಾವತಿಯನ್ನು ನಗದು ದೂಪದಲ್ಲಿ ನವೆಂಬರ್‌ ತಿಂಗಳ ವೇತನದೊಂದಿಗೆ ಸೇರಿ ಕೊಡಲು ಸಂಸ್ಥೆಯ (ಮಾ&ತಂ) ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ನ.29ರಂದು ಆದೇಶ ಹೊರಡಿಸಿದರುವ ನಿರ್ದೇಶಕರು ಸಕ್ಷಮ ಪ್ರಾಧಿಕಾರಿಯವರಾದ ವ್ಯವಸ್ಥಾಪಕ ನಿರ್ದೇಶಕರು 16.09.2025ರಲ್ಲಿ ಆದೇಶ ಮಾಡಿದ್ದರು. ಹೀಗಾಗಿ ನಿಗಮದ 3 ಮತ್ತು 4ನೇ ದರ್ಜೆಯ ತರಬೇತಿ ನೌಕರರು ಸೇರಿದಂತೆ ಅರ್ಹ ಸಿಬ್ಬಂದಿಗಳಿಗೆ ಆರ್ಥಿಕ ವರ್ಷ 2022-23ನೇ ಸಾಲಿಗೆ ಅನ್ವಯಿಸುವಂತೆ ಸಮವಸ್ತ್ರಕ್ಕೆ ಬದಲಾಗಿ “ನಗದು” ಹಾಗೂ ಹೊಲಿಗೆ ವೆಚ್ಚವನ್ನು ಪಾವತಿಸಲು ಬಾಕಿ ಇದೆ.

ಈ ಸಂಬಂಧ KSRTC ನಿಗಮದಿಂದ ಆದೇಶ ಹೊರಡಿಸಲಾಗಿದ್ದು, ಅದರಂತೆ ಬಿಎಂಟಿಸಿ ಸಂಸ್ಥೆಯಲ್ಲಿಯೂ ಸಹಾ 2022-23 ನೇ ಸಾಲಿಗೆ ಅನ್ವಯಿಸುವಂತೆ ಸಮವಸ್ತ್ರಕ್ಕೆ ಬದಲಾಗಿ “ನಗದು”ನ್ನು ಪಾವತಿಸಲು ವ್ಯವಸ್ಥಾಪಕ ನಿರ್ದೇಶಕರು ಅನುಮೋದನೆ ನೀಡಿದ್ದಾರೆ.

ಆದ್ದರಿಂದ ಅರ್ಹ ಸಿಬ್ಬಂದಿಗಳಿಗೆ 2022-23 ನೇ ಸಾಲಿನ ಸಮವಸ್ತ್ರಕ್ಕೆ ಬದಲಾಗಿ “ನಗದು” ಹಾಗೂ ಹೊಲಿಗೆ ವೆಚ್ಚವನ್ನು ನವಂಬರ್-2025ರ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಕರು ಆದೇಶಿಸಿದ್ದಾರೆ.

ಮಾಧ್ಯಮಗಳ ಚಾಟಿಗೆ ನಡುಗಿದ ಅಧಿಕಾರಿಗಳು: ಇನ್ನು ಈ ಸಮವಸ್ತ್ರಗಳಿಗೆ 700 ರೂ. ಹೊಲಿಗೆ ವೆಚ್ಚ 350 ರೂ. ಕೊಡುತ್ತಿದ್ದಾರೆ ಇದು ಯಾವುದಕ್ಕೆ ಸಾಲುತ್ತದೆ ಎಂದು ಮಾಧ್ಯಮಗಳ ಚಾಟಿ ಬೀಸಿದ್ದರಿಂದ ಭಯಗೊಂಡಿರುವ ಬಿಎಂಟಿಸಿ (ಮಾ&ತಂ) ನಿರ್ದೇಶಕರು ಈ ಬಾರಿ ಸಮವಸ್ತ್ರಗಳಿಗೆ ಎಷ್ಟು ಹಣ ಕೊಡಬೇಕು ಹಾಗೂ ಹೊಲಿಗೆ ವೆಚ್ಚ ಎಷ್ಟು ಕೊಡಬೇಕು ಎಂಬುದನ್ನು ತಿಳಿಸದೆ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿರುವಂತೆ ಕೊಡಬೇಕು ಎಂದು ಆದೇಶ ಮಾಡುವ ಮೂಲಕ ಜಾಣ್ಮೆ ಪ್ರದರ್ಶಿಸಿದ್ದಾರೆ.

ಈ ರೀತಿ ಯಾಮಾರಿಸುವ ಈ ಸಂಸ್ಥೆಯ ಆಡಳಿತ ಮಂಡಳಿಗೆ ಸ್ವಲ್ಪವೂ ನಾಚಿಕೆ ಅನ್ನೋದೇ ಆಗುವುದಿಲ್ಲವಾ? ಇನ್ನಾದರೂ ಸಂಸ್ಥೆಯಲ್ಲಿ ಸಾರ್ವಜನಿಕರೊಂದಿಗೆ ನಿತ್ಯ ಒಡನಾಟವಿರುವ ಸಿಬ್ಬಂದಿಗಳಿಗೆ ಸಮರ್ಪಕವಾದ ಒಳ್ಳೆ ಸಮವಸ್ತ್ರ ಖರೀದಿಸಲು ಬೇಕಾಗುವಷ್ಟು ಹಣವನ್ನು ಹಾಗೂ ಹೊಲಿಗೆ ವೆಚ್ಚ ಕೊಡುವ ಮೂಲಕ ಸಂಸ್ಥೆಯ ಮಾನ ಮರ್ಯಾದೆ ಉಳಿಸುವತ್ತ ಗಮನ ನೀಡಬೇಕು ಎಂದು ವಿಜಯಪಥ ಕಟು ಪದಗಳಿಂದ ಆಗ್ರಹಿಸುತ್ತದೆ.

ಸಿಬ್ಬಂದಿ ಏನು ಹೇಳುತ್ತಾರೆ?: ಸಮವಸ್ತ್ರ ಒಂದು ವರ್ಷಕ್ಕೆ ಎರಡು ಜೊತೆ ಕೂಡಬೇಕು. ಇವರು ಕೊಡೋ ಹಣಕ್ಕೆ ಒಂದು ಜೊತೆಯೂ ಬರುವುದಿಲ್ಲ ಮತ್ತು ಹೊಲಿಗೆ ಕೂಲಿಯೂ ಕೂಡ ಇವತ್ತು ಒಂದು ಚಡ್ಡಿ ಕೂಡ ಹೊಲಿಸುವುದಕ್ಕೂ ಆಗುವುದಿಲ್ಲ. ಅಷ್ಟು ಕಮ್ಮಿ ಹಣ ಕೊಡುತ್ತಾರೆ.

ಅದರಲ್ಲೂ 2022-23ನೇ ಸಾಲಿನದು ಕೊಡಲು ಆದೇಶ ಮಾಡಿದ್ದಾರೆ. ಇನ್ನೂ 2023-24 ಹಾಗೂ 2024-25ನೇ ಸಾಲಿನ ಹಣ ಯಾವಾಗ ಕೂಡುತ್ತಾರೆ ಇವರು ಎಂದು ಪ್ರಶ್ನಿಸಿದ್ದಾರೆ. ಇನ್ನು ಈ ಹಣವನ್ನು ಯಾವಾಗ ಕೊಡುತ್ತಾರೆ?

ಇವರು ಕೊಡುವ ಹಣಕ್ಕೆ ಸಮವಸ್ತ್ರ ಬರುವುದಿಲ್ಲ ಆಗಂತ ನಾವು ಸಮವಸ್ತ್ರ ಧರಿಸದೆ ಹೋದರೆ ದಂಡ ಹಾಕುತ್ತಾರೆ. ಇದನ್ನು ಯಾರಿಗೆ ಹೇಳೋಣ? ಯಾರನ್ನು ಕೇಳೋಣ. ಇದು ನಮ್ಮ ಒಂದು ಗೋಳು ಎಂದು ಸಂಸ್ಥೆಯಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

 

Megha
the authorMegha

Leave a Reply

error: Content is protected !!