ಅಂಗವಿಕಲರ ಬಸ್‌ಪಾಸ್ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳಿಂದ ವಂಚಿತ ಅಂಗವಿಕಲ ಭೀಮಪ್ಪನಿಗೆ ಬೇಕಿದೆ ಸರ್ಕಾರದ ಆಸರೆ !

ತುಮಕೂರು: ಜಿಲ್ಲೆ ಹೊಸಹಳ್ಳಿ ಗ್ರಾಮ, ರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಮಿಡಿಗೆಸಿ, ಮಧುಗಿರಿ ತಾಲೂಕಿನ ಅಂಗವಿಕಲ ಭೀಮಪ್ಪನಿಗೆ ಸರ್ಕಾರಿ ಸೌಲಭ್ಯ ಸಿಗಬೇಕಿದೆ.
ಪೋಲಿಯೋಗೆ ಒಳಗಾಗಿರುವ ಭೀಮಪ್ಪನಿಗೆ ಬೆರಳಿನ ಗುರುತು ಸಹ ಇಲ್ಲವಾಗಿದ್ದು, ಇವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗದಿರುವುದು ಭಾರಿ ನೋವಿನ ಸಂಗತಿಯಾಗಿದೆ. ಹೀಗಾಗಿ ಇನ್ನು ಮುಂದಾದರು ಈ ಬೀಮಪ್ಪನಿಗೆ ಅಧಿಕಾರಿಗಳು ಸರ್ಕಾರಿ ಸೌಲಭ್ಯಗಳನ್ನು ನೀಡಲು ಮುಂದಾಗಬೇಕು.
ಆದರೂ ಸ್ವಾಭಿಮಾನಿ ಭೀಮಪ್ಪ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸದಿರದು. ಏಕೆಂದರೆ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಲು ಬಂದ ಇವರು ತಾನು ತಲುಪಬೇಕಾದ ಸ್ಥಳಕ್ಕೆ ಆಗುವ ಟಿಕೆಟ್ ಚಾರ್ಜ್ 40 ರೂ.ಗಳನ್ನು ಕೊಟ್ಟು ಟಿಕೆಟ್ ಕರಿದಿಸಿದ್ದಾರೆ. ಆದರೆ ಇಂಥ ಅಂಗವಿಕಲರಿಗೆ ಸರ್ಕಾರ ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಂದರೆ ಅಂಗವಿಕಲರ ಬಸ್ ಪಾಸ್ ಪಡೆದು ಪ್ರಯಾಣ ಮಾಡಬೇಕು.
ಆದರೆ, ಇವರಿಗೆ ಈವರೆಗೂ ಸರ್ಕಾರದ ಸೌಲಭ್ಯಪಡೆಯುವುಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ ಇವರ ಕೈ ಬೆರಳಿನ ಗುರುತುಗಳು ಬರುವುದಿಲ್ಲ ಕಾರಣ ಈವರೆಗೂ ಇವರಿಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಇದು ತುಂಬಾ ನೋಡವಿನ ವಿಷಯ.
ಈ ಬಗ್ಗೆ ಸಾರಿಗೆ ಬಸ್ ಕಂಡಕ್ಟರ್ ಪಿ.ಎನ್.ಸೋಮ ಶಂಕರ್ ತಮ್ಮ ಬಸ್‌ಗೆ ಬಂದ ಈ ಭೀಮಪ್ಪನ ಬಗ್ಗೆ ವಿಚಾರಿಸಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ವಿವರವಾಗಿ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಸೋಮ ಶಂಕರ್ ಅವರೇ ಹೇಳಿರುವಂತೆ: “ಬಸ್ ಟಿಕೆಟ್ ಕೇಳಿದ ಅವರ ಕಣ್ಣುಗಳು – ನನಗೆ ಓರೆನಿಸುವಂತೆ ಮಾಡಿತು”

ನಾನು ಕರ್ತವ್ಯದಲ್ಲಿದ್ದಾಗ, ಹೊಸಹಳ್ಳಿ ಗ್ರಾಮದ ಭೀಮಪ್ಪ ನನ್ನ ಬಸ್‌ಗೆ ಒಬ್ಬ ವ್ಯಕ್ತಿ ಏರಿದರು. ಅವರು 40 ರೂ. ಟಿಕೆಟ್ ಕೇಳಿದಾಗ, ಅವರ ಸ್ಥಿತಿ ನೋಡಿ ಹೃದಯ ತಟ್ಟಿತು. ಅವರ ದೇಹದಲ್ಲಿ ಶಕ್ತಿ ಇಲ್ಲದಂತಿದ್ದರೂ, ಸ್ವಾಭಿಮಾನದಿಂದ ಬಸ್ ಟಿಕೆಟ್ ತೆಗೆದುಕೊಳ್ಳಲು ಮುಂದಾದರು. ಅವರ ಹೆಸರು ಭೀಮಪ್ಪ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಅವರ ವಿವರಗಳನ್ನು ಹಾಕಿದ್ದು-
ಹೆಸರು: ಭೀಮಪ್ಪ
ತಂದೆ: ಲೇಟ್ ಸಂಜೀವಪ್ಪ
ತಾಯಿ: ಬಿಮಕ್ಕ
ಊರು: ಹೊಸಹಳ್ಳಿ ಗ್ರಾಮ, ರೆಡ್ಡಿಹಳ್ಳಿ ಗ್ರಾಮಪಂಚಾಯತಿ ಮಿಡಿಗೆಸಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ
ಅಂಗವಿಕಲತೆ: ಪೋಲಿಯೋ – ಬೆರಳಿನ ಗುರುತು ಇಲ್ಲ
ಮೊಬೈಲ್ ಇಲ್ಲ, ಆಧಾರ್ ಇಲ್ಲ, ಪಿಂಚಣಿ ಇಲ್ಲ
“ಇವನ ಜೀವನಕ್ಕೆ ಒಂದು ದಾರಿ ಬೇಕು!”
ಪೋಲಿಯೋ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ
* ಆಧಾರ್ ಇಲ್ಲ
* ಮೊಬೈಲ್ ಇಲ್ಲ
* ಸರ್ಕಾರಿ ಪಿಂಚಣಿ ಇಲ್ಲ
* ಅಂಗವಿಕಲರ ಕಾರ್ಡ್ ಇಲ್ಲ
* ಇಂದಿಗೂ ಯಾವುದೇ ಸ್ಕೀಮ್ ಲಾಭವಿಲ್ಲ!
ಅವರ ಬಳಿ ತಿನ್ನುವುದಕ್ಕೂ ಸಾಧ್ಯವಿಲ್ಲ! ಎಂದು ತಿಳಿಸಿದ್ದಾರೆ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಸರ್ಕಾರದ ಅಧಿಕಾರಿಗಳು, ಸಚಿವರು ಗಮನಹರಿಸಬೇಕಿದೆ.
Related








