NEWSನಮ್ಮಜಿಲ್ಲೆನಮ್ಮರಾಜ್ಯ

BMTC ಚಾಲನಾ ಸಿಬ್ಬಂದಿಗಳ ವಿರುದ್ಧ ವಜಾ, ಅಮಾನತು ಕ್ರಮ- ಗುಬ್ಬಿ ಮೇಲೆ ಬ್ರಹ್ಮಾಸ್ತ್ರ!

ವಿಜಯಪಥ ಸಮಗ್ರ ಸುದ್ದಿ
  • ಎಲ್ಲ ಬಸ್‌ ಅಪಘಾತಗಳಿಗೂ ಚಾಲಕ-ನಿರ್ವಾಹಕರೇ ಹೊಣೆಯಲ್ಲ..!?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಾಗುವ ಎಲ್ಲ ಅಪಘಾತಗಳಿಗೂ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರನ್ನೇ ಹೊಣೆ ಮಾಡಬೇಡಿ, ಇಂದು ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ನೌಕರರು ಹೇಳಿದ್ದಾರೆ.

ನಮಗೆ ಸರಿಯಾದ ಅಂದರೆ ಫಿಟ್‌ನೆಸ್‌ ಇರುವ ಬಸ್‌ಗಳನ್ನು ಕೊಡುತ್ತಿಲ್ಲ. ಜತೆಗೆ ಪ್ರಮುಖವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರು ನಿರ್ವಾಹಕರು ದಿನಕ್ಕೆ ಇಂತಿಷ್ಟು ಟ್ರಿಪ್‌ಗಳು ಹಾಗೂ ಕಿಲೋಮೀಟರ್ ಮಾಡಲೇ ಬೇಕು ಎಂದು ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ.

ಈಗ ಇರುವ ಟ್ರಾಫಿಕ್‌ನಲ್ಲಿ ಹೇಗೆ ಅಧಿಕಾರಿಗಳು ಹೇಳಿದಷ್ಟು ಟ್ರಿಪ್‌ಗಳು – ಕಿಲೋಮೀಟರ್‌ಗಳನ್ನು ಮಾಡಲು ಸಾಧ್ಯ? ನಮ್ಮ ಸಮಸ್ಯೆಯನ್ನು ಹೇಳಿದರೆ ಈ ಅಧಿಕಾರಿಗಳು ಕೇಳುತ್ತಿಲ್ಲ. ಹಾಗಾಗಿ ಈ ಬಗ್ಗೆ ಬಸ್‌ನಲ್ಲೇ ಪ್ರಯಾಣಿಸಿ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ತಿದುಕೊಳ್ಳಬೇಖು.

ಆ ಬಳಿಕ ಫಾರಂ 4 ಅನ್ನು ಸಿದ್ದಪಡಿಸಬೇಕು. ಅನ್ನು ಬಿಟ್ಟು ಎಸಿ ಕಚೇರಿಯಲ್ಲಿ ಅಥವಾ ಫ್ಯಾನ್‌ ಕೆಳಗೆ ಕುಳಿತು ತಮಗನಿಸಿದಂತೆ ಫಾರಂ-4 ಮಾಡಿ ಅದನ್ನು ಚಾಲನಾ ಸಿಬ್ಬಂದಿಗಳ ಮೇಲೆ ಹೇರಿದರೆ ಅವರು ಹೇಗೆ ಕೆಲಸ ಮಾಡಬೇಕು ಎಂದು ಸಂಘಟನೆಗಳ ಮುಖಂಡರು ಪ್ರಶ್ನಿಸಿದ್ದಾರೆ.

ಇನ್ನು ಇದು ಬರಿ ಬಿಎಂಟಿಸಿ ಸಂಸ್ಥೆಗೆ ಮಾತ್ರ ಸೀಮಿತವಾಗಿಲ್ಲ ಎಲ್ಲ 4ನಿಗಮಗಳಲ್ಲೂ ಇದೇ ಸಮಸ್ಯೆ. ಇದರ ಜತೆಗೆ ಡಿಪೋಗಳಲ್ಲಿ ಬಸ್‌ಗಳ ನಿರ್ವಾಹಣೆಯನ್ನು (Maintenance) ಸರಿಯಾಗಿ ಮಾಡುತ್ತಿಲ್ಲ. ಸರಿಯಾಗಿ ಬ್ರೇಕ್‌ ಹಿಡಿಯದ ಪಿಕಪ್‌ ಇಲ್ಲದ ಬಸ್‌ಗಳನ್ನು ಚಾಲಕರಿಗೆ ಕೊಟ್ಟು ಇಷ್ಟೇ ಟ್ರಿಪ್‌ ಮಾಡಬೇಕು ಎಂದು ಒತ್ತಡ ಹೇರಿದರೆ ಅವರು ಹೇಗೆ ಡ್ಯೂಟಿ ಮಾಡಬೇಕು ಹೇಳಿ?

ಇನ್ನು ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್ ಆದರೆ ಮುಗಿಯಿತು. ವಾಹನಗಳು ಕಿಲೋಮೀಟರ್‌ಗಟ್ಟೆಲೆ ನಿಂತಿರುತ್ತವೆ. ಈ ನಡುವೆ ಟ್ರಿಪ್‌ಗಳು ರದ್ದಾಗುತ್ತವೆ. ಈ ಟ್ರಿಪ್‌ಗಳು ರದ್ದಾದರೆ OT ಹೋಗುತ್ತದೆ ಕಿಲೋಮೀಟರ್ ರದ್ದಾಗುತ್ತದೆ ಅನ್ನೋ ಆತುರದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಇಂಥ ಒತ್ತಡಗಳನ್ನು ಚಾಲಕರ ಮೇಲೆ ಹಾಕದೆ ಡ್ಯೂಟಿ ಮಾಡುವುದಕ್ಕೆ ಪ್ರೇರಣೆ ನೀಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

ಇದರ ಜತೆಗೆ ಉನ್ನತ ಮಟ್ಟದ ಅಧಿಕಾರಿಗಳು ಕೂಡ ಕೆಳಹಂತದ ಕೆಲ ಅಧಿಕಾರಿಗಳು ನೀಡುವ ಸಲಹೆಗಳಂತೆ ನಡೆದುಕೊಳ್ಳದೆ ನೈಜ ಸ್ಥಿತಿಯನ್ನು ತಾವೇ ಖುದ್ದಾಗಿ ತಿಳಿದುಕೊಂಡು ಬಳಿಕ ನಿರ್ದೇಶನ ನೀಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.

ಇನ್ನು ನಾಲ್ಕೂ ನಿಗಮಗಳ ಅಧಿಕಾರಿಗಳಲ್ಲಿ ವಿನಂತಿಸಿ ಕೊಳ್ಳುವುದೇನೆಂದರೆ ದಿನೇದಿನೆ ನಿಲ್ದಾಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜತೆಗೆ ವಾಹನಗಳು ಹೆಚ್ಚಾಗುತ್ತಿವೆ. ಅಲ್ಲಲ್ಲಿ ರಸ್ತೆ ರಿಪೇರಿಯಿಂದ ಸಮಯ ಸಾಕಾಗುತ್ತಿಲ್ಲ ಸಮಯ ಪರಿಷ್ಕರಣೆ ಮಾಡಿ ಟ್ರಿಪ್‌ಗಳನ್ನ ನಿಗದಿಮಾಡಿ ಇದರಿಂದ ಸ್ವಲ್ಪಮಟ್ಟಿಗಾದರೂ ಒತ್ತಡ ರಹಿತವಾಗಿ ನೌಕರರು ಡ್ಯೂಟಿ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅಪಘಾತಗಳ ಸಂಖ್ಯೆಯೂ ತಗ್ಗುತದೆ ಎಂದು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!