
ಬೆಂಗಳೂರು ಗ್ರಾಮಾಂತರ: 2025-26 ನೇ ಸಾಲಿನ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಮೂಲಕ ದೇವನಹಳ್ಳಿ ತಾಲೂಕಿನಲ್ಲಿರುವ ಸವಿತಾ ಸಮಾಜದ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆ: ಹಿಂದುಳಿದ ವರ್ಗಗಳ 1) ಪ್ರವರ್ಗ-2(ಎ)ರಲ್ಲಿ ಬರುವ ಸವಿತಾ ಸಮಾಜ ಅಥವಾ ಅದರ ಉಪಜಾತಿಗಳಿಗೆ ಸೇರಿದರಾಗಿರಬೇಕು.
2) ಕನಿಷ್ಠ ವಯೋಮಿತಿ 10 ವರ್ಷ ಹಾಗೂ ಗರಿಷ್ಠ ವಯೋಮಿತಿ 15 ವರ್ಷ (ಒಂದು ವೇಳೆ ಅಧ್ಯಯನ ಮಾಡುತ್ತಿರುವ 15 ವರ್ಷದೊಳಗಿನ ವಿದ್ಯಾರ್ಥಿಗಳು ದೊರೆಯದ ಪಕ್ಷದಲ್ಲಿ ಮಾತ್ರ 18 ವರ್ಷದವರನ್ನು ಅರ್ಜಿ ಹಾಕಲು ಅವಕಾಶವಿದೆ).
3)ಅರ್ಜಿಯನ್ನು ಸಲ್ಲಿಸಲು ಕುಟುಂಬದ ವಾರ್ಷಿಕ ಆದಾಯದ ₹2 ಲಕ್ಷ ಮೀರಬಾರದು. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನ ಜೂನ್ 20. ಕಚೇರಿಯ ಸಮಯ 5 ಗಂಟೆಯ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಮಿನಿ ವಿಧಾನಸೌಧದ ಹಿಂಭಾಗ, ಡಿ.ವಿ.ಎಂ ಕಾಲೋನಿ, ದೇವನಹಳ್ಳಿ ತಾಲ್ಲೂಕಿಗೆ ಹಾಗೂ ಸಹಾಯವಾಣಿ ಸಂಖ್ಯೆ: 080-22449999 ಗೆ ಕರೆ ಮಾಡಿ ಅಥವಾ ನೇರವಾಗಿ ಹೋಗಿ ಮಾಹಿತಿಯನ್ನು ಪಡೆಯಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
Related









