NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಚಾಲಕ ಕಂ. ನಿರ್ವಾಹಕರು ಆಗಸ್ಟ್‌ 14ರೊಳಗೆ ಸಂಪೂರ್ಣ ನಿರ್ವಾಹಕರಾಗಿ ಬದಲಾಗಬೇಕು: ಸಿಟಿಎಂ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಎಲೆಕ್ಟ್ರಿಕ್ ಬಸ್‌ಗಳು ಬಂದ ಮೇಲೆ ಖಾಸಗಿ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಸಂಸ್ಥೆಯಲ್ಲಿ ಚಾಲಕ-ಕಂ-ನಿರ್ವಾಹಕರಾಗಿ ನೇಮಕಗೊಂಡಿರುವರಿಗೆ ತರಬೇತಿ ಕೊಟ್ಟು ಸಂಪೂರ್ಣ ನಿರ್ವಾಹಕ ಹುದ್ದೆಯಲ್ಲೇ ಮುಂದುವರಿಸಬೇಕು ಎಂದು  ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಇನ್ನು ಸಂಸ್ಥೆಗೆ ಎಲೆಕ್ಟ್ರಿಕ್ ಬಸ್‌ಗಳು ಬಂದ ಮೇಲೆ ಇಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ-ಕಂ-ನಿರ್ವಾಹಕರಿಗೆ ಕೆಲಸವಿಲ್ಲದಂತಾಗುತ್ತಿದೆ. ಈ ನಿಟ್ಟಿನಲ್ಲಿ ಚಾಲಕ-ಕಂ-ನಿರ್ವಾಹಕರಾಗಿ ನೇಮಕಗೊಂಡಿರುವರಿಗೆ ಆಗಸ್ಟ್‌ 14ರೊಳಗೆ ನಿರ್ವಾಹಕರ ತರಬೇತಿ ಕೊಟ್ಟು ಸಂಪೂರ್ಣ ನಿರ್ವಾಹಕರನ್ನಾಗಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ಮೂಲಕ ಸಂಸ್ಥೆಯ ಚಾಲಕ-ಕಂ-ನಿರ್ವಾಹಕರನ್ನು ಸಂಪೂರ್ಣ ಮತ್ತು ಸಮರ್ಪಕವಾಗಿ ನಿರ್ವಾಹಕ ಹುದ್ದೆಯಲ್ಲೇ ಬಳಸಿಕೊಂಡು, ಅನುಸೂಚಿಗಳನ್ನು ಹೆಚ್ಚಿಸುವತ್ತ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಎಲ್ಲ ವಲಯಮಟ್ಟದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದೂ ಕೂಡ ಆದೇಶದಲ್ಲಿ ತಾಕೀತು ಮಾಡಿದ್ದಾರೆ.

ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ: ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ, ಎಲ್ಲ ವಲಯಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು ಹಾಗೂ ಎಲ್ಲ ಘಟಕಗಳ ಹಿರಿಯ/ಘಟಕ ವ್ಯವಸ್ಥಾಪಕರ ಉಪಸ್ಥಿತಿಯಲ್ಲಿ 04.07.2024 ರಂದು ನಡೆದ ORC ಸಭೆಯಲ್ಲಿ ಘಟಕ ವ್ಯವಸ್ಥಾಪಕರಿಂದ ಪಡೆದ ಚಾಲನಾ ಸಿಬ್ಬಂದಿಗಳ ಮಾಹಿತಿಯನ್ನು ಪರಿಶೀಲಿಸಿದಾಗ, ಇನ್ನೂ ಕೆಲವೊಂದು ಘಟಕಗಳಲ್ಲಿ ಚಾಲಕ-ಕಂ-ನಿರ್ವಾಹಕರು, ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ.

ಹೀಗಾಗಿ ಘಟಕಗಳಲ್ಲಿ ಚಾಲಕ-ಕಂ-ನಿರ್ವಾಹಕರು, ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಇನ್ನು ಮುಂದೆ ಸಂಪೂರ್ಣವಾಗಿ ನಿರ್ವಾಹಕ ಹುದ್ದೆಯಲ್ಲೇ ಬಳಸಿಕೊಂಡು ಬಸ್‌ಗಳನ್ನು ಸಮರ್ಪಕವಾಗಿ ರಸ್ತೆಗಿಳಿಸಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇನ್ನು ಪ್ರಸ್ತುತ ಸಂಸ್ಥೆಯಲ್ಲಿ 6110 ವಾಹನ 5637 ಬಲದೊಂದಿಗೆ, ಅನುಸೂಚಿಗಳನ್ನು ಆಚರಣೆಗೊಳಿಸುತ್ತಿದ್ದು, ಅದರಲ್ಲಿ ಒಟ್ಟು 784 ಎಲೆಕ್ಟ್ರಿಕ್ ಅನುಸೂಚಿಗಳನ್ನು ಆಚರಣೆಗೊಳಿಸಲಾಗುತ್ತಿದೆ. ಟಾಟಾ ಎಲೆಕ್ಟ್ರಿಕ್ 921 ಬಸ್ಸುಗಳಲ್ಲಿ ಈಗಾಗಲೇ ಘಟಕ-3, 10, 29, 4 ಹಾಗೂ 27ರಿಂದ 394 ಬಸ್ಸುಗಳು ಓಡಾಡುತ್ತಿದ್ದು, 2024 ನೇ ಸಾಲಿನ ಅಂತ್ಯಕ್ಕೆ ಇನ್ನೂ ಒಟ್ಟು 527 ಟಾಟಾ ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗೆ ಇಳಿಸಬೇಕಿದೆ.

ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಗೊಳಿಸುವ ಘಟಕಗಳಲ್ಲಿನ ಚಾಲಕರನ್ನು ಇತರೆ ಘಟಕಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಚಾಲಕರು ಹೆಚ್ಚುವರಿಯಾಗುವ ಸಾಧ್ಯತೆಯಿರುವುದರಿಂದ, ಪ್ರಸ್ತುತ ತಮ್ಮ ವ್ಯಾಪ್ತಿಯ ಘಟಕಗಳಲ್ಲಿರುವ ಚಾಲಕ-ಕಂ-ನಿರ್ವಾಹಕರನ್ನು ಸಂಪೂರ್ಣ/ಸಮರ್ಪಕವಾಗಿ ನಿರ್ವಾಹಕ ಹುದ್ದೆಯಲ್ಲಿ ನಿಯೋಜಿಸುವುದು ಅನಿವಾರ್ಯವಾಗಿದೆ.

ಆದ್ದರಿಂದ ತಮ್ಮ ವ್ಯಾಪ್ತಿಯ ಘಟಕಗಳಲ್ಲಿ, ಚಾಲಕರಾಗಿಯೇ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ-ಕಂ-ನಿರ್ವಾಹಕರಿಗೆ, ನಿರ್ವಾಹಕ ಹುದ್ದೆ ನಿರ್ವಹಿಸಲು ಸೂಕ್ತ ತರಬೇತಿ ನೀಡಿ, 14.08.2024 ರೊಳಗಾಗಿ ಘಟಕವಾರು ಚಾಲಕ-ಕಂ-ನಿರ್ವಾಹಕರು, ನಿರ್ವಾಹಕರಾಗಿ/ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಸಂಪೂರ್ಣ ವಿವರವನ್ನು ಹಾಗೂ ಚಾಲನಾ ಸಿಬ್ಬಂದಿಗಳ ಲಭ್ಯತೆಗನುಗುತವಾಗಿ ಅನುಸೂಚಿಗಳನ್ನು ಹೆಚ್ಚಿಸಲು ಪ್ರಸ್ತಾವನೆಯನ್ನು ನೀಡುವಂತೆ ಮುಖ್ಯ ಸಂಚಾರ ವ್ಯವಸ್ಥಾಪಕರು ಕೋರಿದ್ದಾರೆ.

ಇನ್ನು ಈ ಎಲೆಕ್ಟ್ರಿಕ್ ಬಸ್‌ಗಳಿರುವ ಘಟಕ-3, 10, 29, 4 ಹಾಗೂ 27ರಿಂದ 394 ಬಸ್‌ಗಳು ಓಡಾಡುತ್ತಿದ್ದು, ಇವುಗಳನ್ನು ಪಾಳಿಲೆಕ್ಕದಲ್ಲಿ ರಸ್ತೆಗಿಳಿಸುವ ಚಿಂತನೆಯನ್ನು ಮಾಡಲಾಗುತ್ತಿದೆ. ಆದರೆ ಇದರಿಂದ ಎಲೆಕ್ಟ್ರಿಕ್ ಬಸ್‌ಗಳಿಗೆ ನೀಡಿರುವ ಎಲ್ಲ ಸುತ್ತುವಳಿಗಳನ್ನು ಪೂರ್ಣಗೊಳಿಸುವುದಕ್ಕೆ ಕೊಟ್ಟಿರುವ ಸಮಯ ಸಾಲುವುದಿಲ್ಲ. ಹೀಗಾಗಿ ಮೊದಲ ಪಾಳಿಯಲ್ಲಿ ತಡವಾದರೆ 2ನೇ ಪಾಳಿಯಲ್ಲೂ ತಡವಾಗುತ್ತದೆ. ಹೀಗಾಗಿ ಹೆಚ್ಚಿನ ಸಮಯಕ್ಕೆ ಒಟಿ ಕೊಡಬೇಕಾಗುತ್ತದೆ ಎಂದು ನೌಕರರು ಹೇಳುತ್ತಿದ್ದಾರೆ.

ಈ ನಡುವೆ ಎಲೆಕ್ಟ್ರಿಕ್ ಬಸ್‌ಗಳ ಚಾಲಕರು ಖಾಸಗಿಯಾಗಿ ನೇಮಕಗೊಂಡಿರುವುದರಿಂದ ಅವರಿಗೆ ಸರಿಯಾದ ವೇತನ ನೀಡದ ಕಾರಣದಕ್ಕೆ ಬಂದವರು ಕೆಲವೇ ದಿನಗಳಲ್ಲಿ ಕೆಲಸ ಬಿಟ್ಟು ಹೋಗುತ್ತಿರುವುದರಿಂದ ಚಾಲಕರಿಲ್ಲದೆ ಬಹುತೇಕ ಬಸ್‌ಗಳು ಡಿಪೋಗಳಲ್ಲೇ ನಿಲ್ಲುತ್ತಿದ್ದು, ಇದರಿಂದ ನಿರ್ವಾಹಕರು ಡ್ಯೂಟಿಗೆ ಬಂದರು ರಜೆಹಾಕಿ ವಾಪಸ್‌ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

1 Comment

  • ಕಾರ್ಮಿಕ ಔದ್ಯೋಗೀಕರಣ ಅಧಿನಿಯಮದ ನಿಯಮ 2KKK ಯಲ್ಲಿನ ನಿಯಮದಂತೆ ಡ್ಯೂಟಿ ದೊರಕದೇ ಕರ್ತವ್ಯ ಸ್ಥಳದಲ್ಲಿ ಹಾಜರಾಗಿ ಹಿಂತಿರುಗುತ್ತಿರುವ ಚಾಲನಾ ಸಿಬ್ಬಂದಿಗಳು ಕರ್ತವ್ಯನಿರತರಂತೆ ಹಾಜರಾತಿಗೆ ಒತ್ತಾಯಿಸಿ ವೇತನ ಪಡೆದು ಮುಂದಾಗುತ್ತಿಲ್ಲವೇಕೆ ?

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ