NEWSನಮ್ಮರಾಜ್ಯಮೈಸೂರುರಾಜಕೀಯ

ಅಮಿತ್ ಶಾ ಆಗಮನ ವೇಳೆ ಸಂಸದ ಪ್ರತಾಪ್ ಸಿಂಹ- ಮಾಜಿ ಶಾಸಕ ಪ್ರೀತಂ ಗೌಡ ನಡುವೆ ಕಿತ್ತಾಟ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕೇಂದ್ರ ಸಚಿವರ ಆಗಮನ ವೇಳೆ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಕಿತ್ತಾಡಿಕೊಂಡಿರುವ ಪ್ರಸಂಗ ನಡೆದಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದು, ಈಗಾಗಲೇ ಮೈಸೂರಿಗೆ ಬಂದಿಳಿದಿರುವ ಅಮಿತ್ ಶಾ, ವಿವಿಧ ಕಾರ್ಯಕ್ರಮಗಳಲ್ಲಿ ಬಿಸಿ ಆಗಿದ್ದಾರೆ. ಆದರೆ, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಶಾ ಬರುತ್ತಿದಂತೆ ಪ್ರತಾಪ್ ಸಿಂಹ ಹಾಗೂ ಪ್ರೀತಂ ಗೌಡ ಪರಸ್ಪರ ಮಾತಿಗೆ ಮಾತು ಬೆಳೆಸಿಕೊಂಡು ಕಿತ್ತಾಡಿದ್ದಾರೆ.

ಕೇಂದ್ರ ಗೃಹ ಸಚಿವರ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರು, ಈ ವೇಳೆ ಪೊಲೀಸರ ಅನುಮತಿಯನ್ವಯ ಇಬ್ಬರಿಗೂ ನಿಲ್ಲುವಂತೆ ಮನವಿ ಮಾಡಲಾಗಿತ್ತು. ಅದಕ್ಕೆ ಪ್ರೀತಮ್ ಗೌಡ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಇದೆಲ್ಲವನ್ನೂ ಹಾಸನದಲ್ಲಿ ಇಟ್ಕೋ, ನಮ್ಮಲ್ಲಿ ನಡೆಯಲ್ಲ ಎಂದು ಟಾಂಗ್ ಕೊಟ್ಟರು.

ಪ್ರತಾಪ್ ಸಿಂಹರ ಮಾತು ಕೇಳಿ ಪ್ರೀತಂ ಗೌಡ ಕೋಪಿಸಿಕೊಂಡರು. ಇಬ್ಬರ ನಡುವಿನ ಮಾತಿನ ಚಕಮಕಿ ಶುರುವಾಗುತ್ತಿದ್ದಂತೆಯೇ ಸ್ಥಳೀಯ ನಾಯಕರು ಮಧ್ಯ ಪ್ರವೇಶ ಮಾಡಿ ತಣ್ಣಗಾಗಿಸಿದರು.

ಸುತ್ತೂರು ಮಠದ ಕಾರ್ಯಕ್ರಮ ಬಂದರು: ಲೋಕಸಭಾ ಚುನಾವಣೆಗೆ ಇನ್ನೇನು ತಿಂಗಳೇ ಬಾಕಿ ಇದೆ. ಈ ಸಮಯದಲ್ಲೇ ಅಮಿತ್ ಶಾ ಮೈಸೂರು ಭಾಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ತವರೂರಿನಿಂದಲೇ ಕರ್ನಾಟಕದ ಲೋಕಸಭಾ ಚುನಾವಣೆಯ ಸಿದ್ಧತೆ ಆರಂಭಿಸಲಿದ್ದಾರೆ.

ಸುತ್ತೂರು ಮಠದ ಕಾರ್ಯಕ್ರಮಕ್ಕಾಗಿ ಅಮಿತ್ ಶಾ ಮೈಸೂರಿಗೆ ಬಂದಿದ್ದರು ಕೂಡ ಈ ಕಾರ್ಯಕ್ರಮ ಮುಗಿಸಿ ಹಾಗೇಯೆ ವಾಪಸ್ ಹೋಗುತ್ತಿಲ್ಲ. ಬದಲಾಗಿ ಕರ್ನಾಟಕ ಲೋಕಸಭಾ ಕ್ಷೇತ್ರಗಳ ವಿಚಾರದಲ್ಲಿ ರಣ ತಂತ್ರ ಹಣೆಯುವ ಕಾರ್ಯ ಮಾಡಲಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಹಳೆ ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕ್ಷೇತ್ರಗಳ ಪಿಚ್ ಸ್ಟಡಿ ಮಾಡಲಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಮೈಸೂರು ಭಾಗವೆ ತಮ್ಮ ಫಸ್ಟ್ ಟಾರ್ಗೆಟ್ ಎಂಬ ಸಂದೇಶ ರವಾನಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರ ಬಿಜೆಪಿಯ ಗೆಲುವಿನ ಮಂದಹಾಸ ಬೀರಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸಿತ್ತು. ಹೀಗಾಗಿ ಈ ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿ ಗೆಲ್ಲಿಸಿ ಸಿಎಂಗೆ ತವರು ಭಾಗದಲ್ಲೇ ಮುಖಭಂಗ ಮಾಡುವ ನಿಟ್ಟಿನಲ್ಲಿ ಈ ರಣತಂತ್ರ ತಯಾರಿಗಾಗಿ ಸಭೆ ಮಾಡಲಿದ್ದಾರೆ. ಮೈಸೂರು ಭಾಗದ ಅದರಲ್ಲೂ ಮೈಸೂರು- ಕೊಡಗು ಕ್ಷೇತ್ರದ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ.

Leave a Reply

error: Content is protected !!
LATEST
KSRTCಯ 4ನಿಗಮಗಳ ಸಾರಿಗೆ ನೌಕರರಿಗೆ ಶೇ.45ರಷ್ಟು ವೇತನ ಹೆಚ್ಚಳಕ್ಕೆ ವೇದಿಕೆ ಆಗ್ರಹ NWKRTC: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲಕನ ಕಾಲು ಮುರಿತ ಸಾರಿಗೆ ನೌಕರರು ಕರ್ತವ್ಯದ ವೇಳೆ ರೀಲ್ಸ್​ ಮಾಡಿದರೆ ಕೆಲಸದಿಂದ ವಜಾ: ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ಜು.22ರಂದು ಬೆಂವಿವಿಯ ಸಂವಹನ ವಿಭಾಗದ ಸುವರ್ಣ ಮಹೋತ್ಸವ- ರಾಷ್ಟ್ರೀಯ ಸಮ್ಮೇಳನ ಕಿರಿಯ ವಕೀಲರಿಗೆ ಗೌರವಾನ್ವಿತ ಸಂಬಳ ಕೊಡಿ: ಹಿರಿಯ ವಕೀಲರಿಗೆ ಸುಪ್ರೀಂ ಕೋರ್ಟ್‌ ಸಿಜೆ ಚಂದ್ರಚೂಡ್ ಕಿವಿ ಮಾತು ಬದಲಿ ಜಾಗದಲ್ಲಿ ಮನೆ ಕಟ್ಟಿಕೊಡ್ತೇವೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ 24 ಗಂಟೆ ಉಚಿತ ವಿದ್ಯುತ್‌, ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ, ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ ಮಹಿಳೆಯರಿಗೆ ತಿ... ಮಳೆ ಹಾನಿ ಪ್ರದೇಶಗಳಿಗೆ ಸಚಿವ ಕೆ.ವೆಂಕಟೇಶ್ ಭೇಟಿ: ಮೃತ ಕುಟುಂಬಕ್ಕೆ ಸಾಂತ್ವನ ಪರಿಹಾರ ಧನ ವಿತರಣೆ ಗೊರೂರು ಜಲಾಶಯದಿಂದ 25ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ: ಇಂಜಿನಿಯರ್ ಆನಂದ್ ಶೈಕ್ಷಣಿಕ ಸಂಸ್ಥೆಗಳು ಶೇ. 25 ರಷ್ಟು ಸೇವಾ ಶುಲ್ಕ ಪಾವತಿಸಿ ಲಾಭ ಪಡೆಯಿರಿ: ತುಷಾರ್  ಗಿರಿನಾಥ್