ನ್ಯೂಡೆಲ್ಲಿ: ರೈಲ್ವೆ ನೌಕರರಿಗೆ ಕೇಂದ್ರ ಸರಕಾರ ದಸರಾ ಬಂಪರ್ ಕೊಡುಗೆ ನೀಡಿದೆ. ದೇಶದ ಸುಮಾರು 11.7 ಲಕ್ಷ ನೌಕರರಿಗೆ 78 ದಿನಗಳ ಸಂಬಳಕ್ಕೆ ಸಮಾನವಾದ ಬೋನಸ್ ಘೋಷಿಸಿದ್ದು, ಈ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.
ಲೋಕೊ ಪೈಲಟ್‌ಗಳು ಗಾರ್ಡ್‌ಗಳು, ಸ್ಟೇಷನ್ ಮಾಸ್ಟರ್, ತಾಂತ್ರಿಕ ಸಹಾಯಕರು, ರೈಲ್ವೆ ಸಚಿವಾಲಯದ ಸಿಬ್ಬಂದಿ ಸೇರಿದಂತೆ ಎಲ್ಲ ವಿಭಾಗದ ನೌಕರರಿಗೂ ಉತ್ಪಾದನೆ ಆಧರಿತ ಬೋನಸ್ ನೀಡಲು ನಿರ್ಧರಿಸಲಾಗಿದೆ.
ನೌಕರರಿಗೆ ಕನಿಷ್ಠ 17,951 ರೂ. ಬೋನಸ್ ದೊರೆಯಲಿದೆ. ಬೋನಸ್ ಪಾವತಿಗೆ ಒಟ್ಟು 2,028 ಕೋಟಿ ರೂ. ವೆಚ್ಚವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಇನ್ನು ರೈಲ್ವೆ ನೌಕರರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ ನೀಡಿದ್ದು ಇದು ನಮಗೂ ಬರುತ್ತಿತ್ತು ಆದರೆ, ಕೆಲವರಿಂದ ಇದು ನಿಂತು ಹೋಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕೆಲ ಸಂಘನೆಗಳ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.
78 ದಿನಗಳ ಸಂಬಳ ಬೋನಸ್ ರೂಪದಲ್ಲಿ ಕೊಡುತ್ತಿದೆ. ನೋಡ್ರೋ ಬ*ಟ್ ಸಂಘಟನೆಗಳ ನಾಲಾಯಕ್‌ಗಳೇ ಸಾರಿಗೆ ನೌಕರರ ಬಾಯಿಗೆ ಮಣ್ಣು ಹಾಕೋ ಕೆಲಸ ಮಾಡುತ್ತಿದ್ದೀರಲ್ಲೋ ಎಂದು ಸಂಘಟನೆಗಳ ಮುಖಂಡರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.