ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಧಾರವಾಡ: ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದಲ್ಲಿ ನಡೆದ ಘಟನೆಯಲ್ಲಿ ಹುಬ್ಬಳ್ಳಿ ಧಾರವಾಡ ನಗರ ಸಾರಿಗೆಯ DME ಪ್ರವೀಣ್ ನಿಡೂರ ಅವರ ಹಸ್ತಕ್ಷೇಪವಿರುವದಿಲ್ಲ ಹಾಗೂ ಘಟನೆ ನಡೆದ ಸಮಯದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ DME ಅವರು ಧಾರವಾಡದಲ್ಲಿ ಇರಲಿಲ್ಲ ಎಂದು ನೌಕರರ ಕೂಟದ ಮುಖಂಡರು ಮಾಡಿದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
NWKRTC- ಬ್ರೇಕ್ ಹಿಡಿಯದ ಬಸ್‌ಕೊಟ್ಟು ತಪ್ಪುಮಾಡಿದ ನಾಲಾಯಕ್ ಡಿಸಿ, ಡಿಎಂಇ : ತಪ್ಪಿನಿಂದ ಪಾರಾಗಲು ಹಾರಹಾಕಿ ಚಾಲಕರ ಅವಮಾನಿಸಿ ದರ್ಪ ಮೆರೆದ ದುರಹಂಕಾರಿಗಳು ಎಂದು ಆರೋಪಿಸಿ ನೌಕರರ ಕೂಟದ ಮುಖಂಡರು ಇವರು ಸೇರಿದಂತೆ ಡಿಎಂ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದರು. ಆದರೆ, ಘಟನೆಯಲ್ಲಿ DME ಪ್ರವೀಣ್ ನಿಡೂರ ಅವರ ಹಸ್ತಕ್ಷೇಪವಿಲ್ಲ ನಾವು ಮಾಡಿದ ಆರೋಪಕ್ಕೆ ಕ್ಷೆಮೆ ಕೇಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
Related

Megha