CRIMENEWSಸಿನಿಪಥ

ಎಲ್ಲವೂ ಕೋರ್ಟ್​ನಲ್ಲಿ ಇತ್ಯರ್ಥ ಆಗತ್ತೆ: 3.15 ಕೋಟಿ ರೂ. ವಂಚನೆ ಆರೋಪಕ್ಕೆ ಧ್ರುವ ಮ್ಯಾನೇಜರ್ ಸ್ಪಷ್ಟನೆ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ವಿರುದ್ಧ ಈಗ 3.15 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. 2016ರ ಜಗ್ಗು ದಾದ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ ಈ ಆರೋಪ ಮಾಡಿದ್ದು, ಈಗ ಈ ವಿಚಾರ ಸೆನ್ಸೇಷನ್ ಸೃಷ್ಟಿಸಿದೆ.

ಈ ಹೇಳಿಕೆ ಬಗ್ಗೆ ಧ್ರುವ ಸರ್ಜಾ ಅವರ ಮ್ಯಾನೇಜರ್ ಅಶ್ವಿನ್ ಸ್ಪಷ್ಟನೆ ನೀಡಿದ್ದು, ಈ ರಾಘವೇಂದ್ರ ಹೆಗ್ಡೆ ಮಾಡಿರುವ ಆರೋಪ ಸಂಪೂರ್ಣ ಸುಳ್ಳು. ಅವರು 2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು 3.15 ಕೋಟಿ ರೂಪಾಯಿ ಹಣ ನೀಡಿದ್ದರು.

ಅಂದರೆ ನಂದಿನಿ ಎಂಟರ್​ಟೇನ್​ಮೆಂಟ್​ನಿಂದ 20 ಲಕ್ಷ ರೂಪಾಯಿ ಹಾಗೂ ರಾಘವೇಂದ್ರ ಕಡೆಯಿಂದ 2.95 ಲಕ್ಷ ರೂಪಾಯಿ ಬಂದಿತ್ತು. ನಂದಿನಿ ಸಂಸ್ಥೆ ಹಾಗೂ ರಾಘವೇಂದ್ರ ಅವರಿಗೆ ಏನೋ ಸಮಸ್ಯೆ ಆಗಿದ್ದರಿಂದ 20 ಲಕ್ಷ ರೂಪಾಯಿ ಹಣವನ್ನು ನಾವು ಹಿಂದಿರುಗಿಸಿದ್ದೆವು. ಉಳಿದ ಹಣಕ್ಕೆ ಒಂದು ಸಿನಿಮಾ ಮಾಡಬೇಕಿತ್ತು. ಇದಕ್ಕಾಗಿ ಅವರು ಮೂರು ತಿಂಗಳು ಅವಕಾಶ ಕೇಳಿದ್ದರು ಎಂದು ಅಶ್ವಿನ್ ಹೇಳಿದ್ದಾರೆ.

ಇನ್ನು ಪ್ರತಿ ಬಾರಿ ನಾವೇ ಕಾಲ್ ಮಾಡಿದಾಗಲೂ ಅವರು ಬ್ಯುಸಿ ಇದ್ದಿದ್ದಾಗಿ ಹೇಳುತ್ತಲೇ ಬರುತ್ತಿದ್ದರು. ನಾಲ್ಕೂವರೆ ವರ್ಷ ಆದಮೇಲೆ ಸಿನಿಮಾ ಸ್ಕ್ರಿಪ್ಟ್​ನ ಮೊದಲಾರ್ಧ ಕಳುಹಿಸಿದರು. ದ್ವೀತಿಯಾರ್ಧ ಇನ್ನೂ ಬಂದಿರಲಿಲ್ಲ. ನಾವು ಅವರ ಜತೆ ನಿರಂತರವಾಗಿ ಮಾತುಕತೆ ಮಾಡುತ್ತಲೇ ಇದ್ದೆವು. ಒಂದು ದಿನ ಬಂದು ಸೋಲ್ಜರ್ ಸಿನಿಮಾ ಮಾಡೋದು ಬೇಡ, ಬಜೆಟ್ ಜಾಸ್ತಿ ಆಗುತ್ತದೆ. ಮಾಡಿದರೂ ಕನ್ನಡದಲ್ಲಿ ಬೇಡ, ತೆಲುಗು ಅಥವಾ ಹಿಂದಿಯಲ್ಲಿ ಮಾಡೋಣ ಎಂದು ಹೇಳಿದರು ಆದರೆ, ಈ ಬೇಡಿಕೆಗೆ ಧ್ರುವ ಒಪ್ಪಿಲ್ಲ ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.

ಜತೆಗೆ ಕನ್ನಡದಲ್ಲೇ ಸಿನಿಮಾ ಮಾಡಬೇಕು ಎಂದು ಪಟ್ಟು ಹಿಡಿದರು. ಕಳೆದ ಜೂನ್ 28ರಂದು ನಾವು ಭೇಟಿ ಆದೆವು. ಆಗ ರಾಘವೇಂದ್ರ ಅವರು ಈ ಚಿತ್ರವನ್ನು ತೆಲುಗು ಅಥವಾ ಹಿಂದಿಯಲ್ಲೇ ಮಾಡೋಣ ಎಂದು ಮತ್ತೆ ಹೇಳಿದ್ದರು. ಆದರೆ, ಇದಕ್ಕೆ ಧ್ರುವ ಒಪ್ಪಿಲ್ಲ. ಕೊನೆಗೆ ಕನ್ನಡದಲ್ಲೇ ಸಿನಿಮಾ ಮಾಡೋದು ಎಂಬ ತೀರ್ಮಾನ ಆಯಿತು. ಅಕ್ಟೋಬರ್​ನಿಂದ ಡೇಟ್ಸ್ ಬೇಕು ಎಂದು ರಾಘವೇಂದ್ರ ಕೇಳಿದರು. ನಾವು ಇದಕ್ಕೆ ರೆಡಿ ಇದ್ದೆವು ಎಂದು ಹೇಳಿದ್ದಾರೆ ಅಶ್ವಿನ್.

ಈ ನಡುವೆ ಕಳೆದ ಜುಲೈನಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾವು ಪ್ರತಿ ಸಿನಿಮಾ ಆದಾಗಲೂ ರೆಡಿನಾ ಎಂದು ಕೇಳುತ್ತಲೇ ಬರುತ್ತಿದ್ದೆವು. ಅವರೇ ಅದನ್ನು ಮುಂದಕ್ಕೆ ಹಾಕುತ್ತಿದ್ದರು. ನಮ್ಮ ಬಳಿ ಇಲ್ಲಿ ಒಂದು ರೀತಿ ಮಾತನಾಡೋದು, ಆಮೇಲೆ ಅಲ್ಲಿ ಬೇರೆ ರೀತಿ ನಡೆದುಕೊಳ್ಳೋದು ಮಾಡುತ್ತಿದ್ದರು.

Advertisement

ನಮಗೆ ಈ ಮೊದಲು ನೋಟಿಸ್ ಬಂದಿತ್ತು. ಆ ಬಳಿಕ 100 ಬಾರಿ ಕರೆ ಮಾಡಿದ್ದೇವೆ. ಆದರೆ, ಅವರು ಉತ್ತರಿಸಿಲ್ಲ. ಬೇಕೆಂದಲೇ ಈ ರೀತಿ ಮಾಡಿದ್ದಾರೆ. ನಾವು ಹಣ ಕೊಡೋದಿಲ್ಲ ಎಂದು ಯಾವಾಗಲೂ ಹೇಳಿಲ್ಲ. ಕುಳಿತು ಬಗೆಹರಿಸಿಕೊಳ್ಳುವುದಕ್ಕೆ ಕೋರ್ಟ್​ಗೆ ಹೋಗಿದ್ದಾರೆ. ಎಲ್ಲವೂ ಕೋರ್ಟ್​​ನಲ್ಲಿ ಇತ್ಯರ್ಥ ಆಗಲಿದೆ ಎಂದು ಧ್ರುವ ಮ್ಯಾನೇಜರ್ ಹೇಳಿದ್ದಾರೆ.

Megha
the authorMegha

Leave a Reply

error: Content is protected !!