ಹಾವೇರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಹಾಯಕ ಯಾಂತ್ರಿಕ ಅಭಿಯಂತರರು ಹಾಗೂ ಪ್ರಸ್ತುತ ಹಾನಗಲ್ ಡಿಪೋನಲ್ಲಿ ಘಟಕ ವ್ಯವಸ್ಥಾಪಕರಾಗಿದ್ದ ಹನುಮಂತಪ್ಪ ಡಿ.ಜಾವೂರ್ ಅವರು ಸೇವಾ ನಿವೃತ್ತಿಯಾಗಿದ್ದರಿಂದ ಅವರಿಗೆ ಬೀಳ್ಕೊಡಲಾಯಿತು.

ಹಾವೇರಿ ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ್ ರು.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಇಂದು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹನುಮಂತಪ್ಪ ಡಿ.ಜಾವೂರ್ ಅವನ್ನು ಸನ್ಮಾನಿಸುವ ಮೂಲಕ ನಿವೃತ್ತಿ ಜೀವನ ಸುಖಕರವಾಗಿರಲಿದೆ ಎಂದು ಹಾರೈಸಲಾಯಿತು.
ಈ ವೇಳೆ ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ್ ರು.ಪಾಟೀಲ್ ಮಾತನಾಡಿ, ಹನುಮಂತಪ್ಪ ಡಿ. ಜಾವೂರ್ ಅವರು ಸಂಸ್ಥೆಯಲ್ಲಿ ಒಟ್ಟು 30 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಇಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ. ಸರಳ ಸಜ್ಜನಿಕೆ ಸಹನಾ ಶೀಲರು ಹಾಗೂ ಯಾಂತ್ರಿಕ ವಿಷಯದಲ್ಲಿ ಅಪಾರ ಅನುಭವ ಹೊಂದಿದ ಅಧಿಕಾರಿಯಾಗಿದ್ದರು ಎಂದು ಹೇಳಿದರು.

ಇನ್ನು ಹಾವೇರಿ ವಿಭಾಗದ ಶ್ರೇಯೋಭಿವೃದ್ಧಿಗೆ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಇವರಿಗೆ 60 ವಸಂತಗಳು ತುಂಬಿದ್ದರಿಂದ ನಾವು ಸಂಸ್ಥೆ ಸೇವೆಯಿಂದ ನಿವೃತ್ತರಾಗುತ್ತಿರುವ ಇವರ ಮುಂದಿನ ನಿವೃತ್ತಿ ಜೀವನ ಒತ್ತಡರಹಿತವಾಗಿರಲಿ. ದೇವರು ಆಯುರ್ ಆರೋಗ್ಯ ಐಶ್ವರ್ಯ ಸಂಪತ್ತನ್ನು ಇನ್ನಷ್ಟು ಕರುಣಿಸಲಿ ಹಾಗೂ ನಿವೃತ್ತಿ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿಭಾಗಿಯ ತಾಂತ್ರಿಕ ಶಿಲ್ಪಿ ಕೆ.ಆರ್. ನಾಯ್ಕ್, ಆಡಳಿತ ಅಧಿಕಾರಿ ಸುಮಂಗಲ ಹೊಂಗಲ್, ಉಗ್ರಾಣಾಧಿಕಾರಿ ಮಂಜುಳಾ ದಂಡಿಗದಾಸರ, ಸಹಾಯಕ ಭದ್ರತಾ ಅಧಿಕಾರಿ, ಮಂಜುನಾಥ ಕಡ್ಲಿಕೊಪ್ಪ, ಸಹಾಯಕ ಲೆಕ್ಕಾಧಿಕಾರಿ ಅತ್ತಾರ್, ಘಟಕ ವ್ಯವಸ್ಥಾಪಕ ಪ್ರಶಾಂತ್ ಸಂಗ್ರೇಶಿ ಉಪಸ್ಥಿತರಿದ್ದರು. ಐ. ಐ ಕಡ್ಲಿಮಟ್ಟಿ ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿಗಳು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಚೌಡಕಿ ಸಹಾಯಕ ಅವರು ವಂದಿಸಿದರು.
Related










