NEWSಕೃಷಿನಮ್ಮರಾಜ್ಯ

ರೈತ ಉತ್ಪಾದಕ ಸಂಸ್ಥೆಗಳು ರೈತರಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಲಿ: ನಬಾರ್ಡ್‌ ಬ್ಯಾಂಕ್‌ ಮುಖ್ಯಾಧಿಕಾರಿ ರಮೇಶ್

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಸಂಘಟನೆಯ ಕೊರತೆ ಇದ್ದಾಗ ರೈತರ ಶೋಷಣೆಗೆ ಗುರಿಯಾಗುತ್ತಾರೆ ಅದಕ್ಕಾಗಿ ರೈತ ಉತ್ಪಾದಕ ಸಂಸ್ಥೆಗಳು ರೈತರಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ನಬಾರ್ಡ್‌ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಟಿ. ರಮೇಶ್ ಕಿವಿ ಮಾತು ಹೇಳಿದರು.

ಮೈಸೂರಿನ ಬಂಡಿಪಾಳ್ಯದಲ್ಲಿರುವ ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯ ಆವರಣದಲ್ಲಿ ಇಂದು ನಡೆದ ಮೊಬೈಲ್ ವ್ಯಾನ್ ಮೂಲಕ ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಹಿಂದೆ ಕೃಷಿ ಕ್ಷೇತ್ರಕ್ಕೆ ನಬಾರ್ಡ್‌ ಸಂಸ್ಥೆಯು ಬಹಳಷ್ಟು ನೆರವು ನೀಡಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಅದೇ ರೀತಿಯಲ್ಲಿ ಮುಂದುವರೆದು ರೈತ ಉತ್ಪಾದಕ ಸಂಸ್ಥೆಗಳಿಗೆ ಹೆಚ್ಚಿನ ನೆರವು ನೀಡಿ ರೈತರು ಸ್ವಾವಲಂಬಿಗಳಾಗಲು ಪೂರಕವಾಗಿದೆ ಎಂದರು.

ರಾಜ್ಯದಲ್ಲಿ 381 ನಬಾರ್ಡ್ ಸಹಕಾರದ ರೈತ ಉತ್ಪಾದಕ ಸಂಸ್ಥೆಗಳು ರಾಜ್ಯ ಸರ್ಕಾರದ 800 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಹೆಚ್ಚು ವೈವಾಟು ನಡೆಸುವ ಸಂಸ್ಥೆಗಳು ಕೇವಲ ಐವತ್ತು ಮಾತ್ರ, ಅದರಲ್ಲಿ ರೈತ ಮಿತ್ರ ಉತ್ಪಾದಕ ಸಂಸ್ಥೆ ಹೆಗ್ಗಳಿಕೆಯ ಕಾರ್ಯ ನಡೆಸುತ್ತಿದೆ ಎಂದು ಪ್ರಶಂಸಿದ್ದರು.

ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ದಲ್ಲಾಳಿಗಳು ರೈತರಿಗೆ ಬಹಳಷ್ಟು ಶೋಷಣೆ ಮಾಡುತ್ತಿದ್ದಾರೆ. ರೈತರಿಗೆ ಬೆಲೆಯಲ್ಲಿ ಮೋಸ, ತೂಕದಲ್ಲಿ ಮೋಸದ ಮೂಲಕ ರೈತರನ್ನು ಶೋಷಣೆ ಮಾಡುತ್ತಿದ್ದಾರೆ.

ಹಾಗಾಗೀ ರೈತರು ಸ್ವಾವಲಂಬಿಗಳಾಗಲು, ಸಂಘಟಿತರಾಗಲು ರೈತ ಉತ್ಪಾದಕ ಸಂಸ್ಥೆಗಳಿಗೆ ನೆರವು ನೀಡಲಾಗುತ್ತಿದೆ ಮಣ್ಣಿನ ಫಲವತ್ತತೆ ಹೆಚ್ಚಿಸಲು ನೀರಿನ ಬಳಕೆ ರೂಪಿಸಲು ನಬಾರ್ಡ್ ಸಂಸ್ಥೆ ಕಾರ್ಯಕ್ರಮ ರೂಪಿಸುತ್ತಿದೆ ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ರೈತಮಿತ್ರ ರೈತ ಉದ್ಪಾದಕ ಸಂಸ್ಥೆಯ ಚೇರ್ಮನ್ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ 13,000 ರೈತ ಉತ್ಪಾದಕ ಸಂಸ್ಥೆಗಳು ಆರಂಭವಾಗಿ ಲಕ್ಷಾಂತರ ಕೋಟಿ ರೂಪಾಯಿ ಇದಕ್ಕಾಗಿ ವಿನಿಯೋಗಿಸಲಾಗುತ್ತಿದೆ. ಸಹಕಾರಿ ಕೃಷಿಯನ್ನೇ ಹೋಲುವ ರೈತ ಉತ್ಪಾದಕ ಸಂಸ್ಥೆಗಳ ಹಿಡಿತ ಹಾಗೂ ಪ್ರಾಯೋಜಕತ್ವಗಳು ದೊಡ್ಡ ದೊಡ್ಡ ಕಂಪನಿಗಳ ಹಿಡಿತಕ್ಕೆ ಸಿಲುಕಿ ಸಾಗಬಾರದು. ರೈತರು ಕೂಡ ಜಾತಿ, ಪಕ್ಷ ರಾಜಕಾರಣ ದೂರ ಇಟ್ಟು ಸೇವೆ ಎಂಬ ಗುರಿಯೊಂದಿಗೆ ಕಾರ್ಯನಿರ್ವಹಣೆ ಮಾಡಿದರೆ ರೈತರಿಗೆ ಹೆಚ್ಚು ಲಾಭವಾಗುತ್ತದೆ ಎಂದು ತಿಳಿಸಿದರು.

ಇಫ್ಕೋ ಸಂಸ್ಥೆಯ ಯಶಸ್ವಿಯಾದ ಬಗ್ಗೆ ಮಾತನಾಡಿ, ಅದೇ ರೀತಿ ನಾವು ಕೂಡಾ ರೈತ ಉತ್ಪಾದಕ ಸಂಸ್ಥೆಯನ್ನು ಪ್ರಾರಂಭಿಸಿ ರೈತರ ಶೋಷಣೆಯನ್ನು ತಪ್ಪಿಸಲು 2014ರಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಇದಕ್ಕೆ ಪೂರಕವಾಗಿ ನರ್ಬಾಡ್ ನಮ್ಮ ಸಂಸ್ಥೆಗೆ ಬೆನ್ನಲುಬಾಗಿ ನಿಂತು ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿದೆ ಎಂದರು.

ಮೈಸೂರು ಜಿಲ್ಲೆ ಸೇರಿದಂತೆ ಸುಮಾರು ಎಂಟು ಜಿಲ್ಲೆಗಳ ಸಹಕಾರದೊಡನೆ ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯನ್ನು ಪ್ರಾರಂಭಿಸಲಾಯಿತು. ಇದಕ್ಕೆ ನಬಾರ್ಡ್ ಸಂಸ್ಥೆಯು ನಮ್ಮ ಸಂಸ್ಥೆ ಕಂಪನಿಯ ಪ್ರಗತಿಗೆ ಬೆಂಬಲ ನೀಡಿದೆ ಎಂದರು.

ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯವರು ನಮ್ಮ ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಗೆ ಅತ್ಯುತ್ತಮ ಕಂಪನಿ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. ಸರ್ವ ಸದಸ್ಯರ ಮತ್ತು ರೈತರ ಬೆಂಬಲದಿಂದಾಗಿ ಈ ಪ್ರಶಸ್ತಿಯನ್ನು ಗಳಿಸಲು ಸಾಧ್ಯವಾಗಿದೆ ಎಂದರು.

ಕಳೆದ ಎರಡು ಮೂರು ವರ್ಷಗಳ ಹಿಂದೆ ಕರೋನ ಸಂಕಷ್ಟದಿಂದಾಗಿ ಮತ್ತು ಕೇರಳ ರಾಜ್ಯಕ್ಕೆ ತರಕಾರಿ ಪೂರೈಕೆಯಲ್ಲಿನ ಹಣದ ಮರುಪಾವತಿಯಿಂದ ಕಂಪನಿ ಸಂಕಷ್ಟದಲ್ಲಿದೆ. ಸರ್ಕಾರ ಕರೋನ ಸಂಕಷ್ಟದ ಸಮಯದಲ್ಲಿ ಶ್ರೀಮಂತ ಕಂಪನಿಗಳ ಸಾಲ ಮತ್ತು ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಆದರೆ, ರೈತ ಉತ್ಪಾದಕ ಕಂಪನಿಗಳ ಮೇಲಿನ ಸಾಲವನ್ನು ಮನ್ನಾ ಮಾಡಲು ಮನಸ್ಸು ಮಾಡಲಿಲ್ಲ. ಹೀಗಾಗಿ ರೈತರ ಸಂಸ್ಥೆಗಳು ಸ್ವಲ್ಪ ಸಂಕಷ್ಟಕ್ಕಿಡಾಗಿಗಿವೆ ಎಂದರು.

1970ರ ದಶಕದಲ್ಲಿ ಭಾರತವು ಗೋಧಿಗಾಗಿ ಬೇರೆ ಬೇರೆ ದೇಶಗಳ ಬಳಿ ಭಿಕ್ಷೆಯನ್ನು ಬೇಡುತ್ತಿದ್ದೇವು. ಅಂದು ಪ್ರಧಾನಿಯು ದೇಶದ ಜನತೆಗೆ ಒಂದು ಹೊತ್ತಿನ ಊಟವನ್ನು ತ್ಯಜಿಸಿ ಎಂದು ಕರೆ ನೀಡಿದ್ದರು. ಇಂದು ನಮ್ಮ ದೇಶದ ರೈತರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವಾವಲಂಬಿಯಾಗಿ ಹೆಚ್ಚು ಆಹಾರ ಉತ್ಪಾದನೆಯನ್ನು ಮಾಡುತ್ತಿದ್ದು, ನಮ್ಮ ದೇಶದಿಂದ ಉತ್ಕøಷ್ಟವಾದ ಆಹಾರ ವಿದೇಶಗಳಿಗೆ ರಫ್ತಾಗುತ್ತಿದೆ. ಇದೆಲ್ಲಾ ಸಾಧ್ಯವಾಗಿದ್ದು, ಕಂಪ್ಯೂಟರ್ ನಿಂದಲ್ಲ ಮತ್ತು ಮೊಬೈಲ್ ನಿಂದ ಸಾಧ್ಯವಾಗಿಲ್ಲ ಇದು ಸಾಧ್ಯವಾಗಿದ್ದು ಕೇವಲ ರೈತನ ಶ್ರಮದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಆರಂಭದಲ್ಲಿ ನಬಾರ್ಡ್ ಮುಖ್ಯಸ್ಥರಾದ ರಮೇಶ್ ಅವರು ರೈತರ ಉತ್ಪನ್ನಗಳನ್ನು ಮೊಬೈಲ್ ವ್ಯಾನ್ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವಾಹನಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥ ನಾಗೇಶ್, ನಬಾರ್ಡ್ ಜಿಲ್ಲಾ ಮುಖ್ಯಸ್ಥ ಶಾಂತವೀರ್, ಕಾವೇರಿ ಗ್ರಾಮೀಣ ಬ್ಯಾಂಕಿನ ಶಂಕರ್ ನಾರಾಯಣ್ ಮಾತನಾಡಿದರು.

ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸಂಸ್ಥೆಯ ಹಿರಿಯ ಟಿ.ವಿ.ಗೋಪಿನಾಥ್ ಹಾಗೂ ಸದಸ್ಯರು, ನಯನ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಾಲೀಕ ಕುಮಾರ್, ಚೇತನ್ ಗಾರ್ಡನ್ ಮಾಲೀಕ ಚೇತನ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜು, ಪಿ. ಸೋಮಶೇಖರ್, ಕಿರಗಸೂರು ಶಂಕರ್, ಎಸ್.ಬಿ. ಸಿದ್ನಾಳ್, ನಾಗರಾಜಮೂರ್ತಿ, ಕುರುಬೂರು ಸಿದ್ದೇಶ್, ಮಂಜು, ಪ್ರದೀಪ್ ಕುಮಾರ್, ಕೆ.ಜಿ. ಗುರುಸ್ವಾಮಿ, ಶಿವಪ್ರಸಾದ್, ಮಲ್ಲಿಕಾರ್ಜುನಸ್ವಾಮಿ, ಕೋಟೆ ಸುನೀಲ್, ನಿಜಗುಣಸ್ವಾಮಿ, ಪಟೇಲ್ ಶಿವಮೂರ್ತಿ, ಗೌರಿಶಂಕರ್, ಕಾಟೂರು ಮಹದೇವಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ, ಸಾತಗಳ್ಳಿ ಬಸವರಾಜು, ಉಡಿಗಾಲದ ರೇವಣ್ಣ, ಸುಂದ್ರಪ್ಪ, ದಯಾನಂದ, ಅಂಬಳೆ ಮಂಜುನಾಥ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ