NEWSಕೃಷಿನಮ್ಮಜಿಲ್ಲೆನಮ್ಮರಾಜ್ಯ

ರೈತರು ಭಿಕ್ಷೆ ಬೇಡುತ್ತಿಲ್ಲ, ಬೆಂಬಲ ಬೆಲೆ ಖಾತರಿ ಕಾನೂನು ಕೇಳುತ್ತಿದ್ದೇವೆ ಕೊಡಲೇಕೆ ಹಿಂದೇಟು: ಕುರುಬೂರ್ ಶಾಂತಕುಮಾರ್ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೆಹಲಿಯಲ್ಲಿ ರೈತರು ಭಿಕ್ಷೆ ಬೇಡುತ್ತಿಲ್ಲ, ಸರ್ಕಾರವೇ ನಿಗದಿ ಮಾಡುವ ಬೆಂಬಲ ಬೆಲೆ ಖಾತರಿ ಕಾನೂನು ಕೇಳುತ್ತಿದ್ದೇವೇ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ ) ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ಗುಡುಗಿದ್ದಾರೆ.

ಇಂದು ನಗರದ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 23 ಬೆಳೆಗಳಿಗೆ ಎಂಎಸ್‌ಪಿ ಬೆಲೆ ನಿಗದಿ ಮಾಡಿ ದೇಶದ ರೈತರನ್ನು ಕತ್ತಲಲ್ಲಿಟ್ಟಿದೆ. ಇನ್ನು ಈ ಸರ್ಕಾರವೇ ನಿಗದಿ ಮಾಡುವ ಬೆಲೆಗೆ ಶಾಸನಬದ್ಧ ಖಾತರಿ ನೀಡಬೇಕು ಎಂದು ಹೋರಾಟ ಮಾಡಿದರೆ, ನಮ್ಮ ರೈತರನ್ನು ಭಯೋತ್ಪಾದಕರು ದೇಶದ್ರೋಹಿಗಳು ಖಲಿಸ್ತಾನಿಗಳು ಎಂದು ಹೇಳಿ ದೆಹಲಿಗೆ ಚಳವಳಿಗೆ ಹೊರಟ ರೈತ ಹೋರಾಟಗಾರರ ಮೇಲೆ ರಬ್ಬರ್ ಬುಲೆಟ್ಗಳ ಬಾಂಬು ಹಾಕುವುದು, ಆಶ್ರುವಾಯು ಸಿಡಿಸುವುದು, ದಮನಕಾರಿ ನೀತಿಯಲ್ಲವೇ ಎಂದು ಕಿಡಿಕಾರಿದರು.

ಇನ್ನು ರೈತರು ಸರ್ಕಾರದ ಭಿಕ್ಷುಕರೇ ಅಥವಾ ದೇಶದ ಜನರಿಗೆ ಆಹಾರ ನೀಡುವ ಅನ್ನದಾತರೇ ಎಂಬುದನ್ನು ತಿಳಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತು ಕೊಳ್ಳಬೇಕು ಇಲ್ಲದಿದ್ದರೆ ಮುಂದೆ ನೇಏಗಿಲಯೋಗಿಗಳು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇತ್ತ ರೈತರ ಸಾಲ ಸಂಪೂರ್ಣ ಮನ್ನಾ, ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನೀಡಬೇಕು. ಜತೆಗೆ ಡಬ್ಲ್ಯೂಟಿಒ ಒಪ್ಪಂದದಿಂದ ಭಾರತ ಸರ್ಕಾರ ಹೊರಗೆ ಬರಬೇಕು, ರೈತರಿಗೆ ಪಿಂಚಣಿ ನೀಡುವ ಯೋಜನೆ, ಫಸಲ್ ಭೀಮಾ ಬೆಳೆ ವಿಮೆ ಪದ್ಧತಿ ಬದಲಾಗಬೇಕು. ಕಳೆದ ವರ್ಷ ದೆಹಲಿ ರೈತ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ಮತ್ತು ಕುಟುಂಬದ ಒಬ್ಬರಿಗೆ ನೌಕರಿ ನೀಡಬೇಕು ಎಂಬ ಒತ್ತಾಯಗಳನ್ನು ಮಂಡಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ವಿನಾಕಾರಣ ವಿಳಂಬ ನೀತಿ ಅನುಸರಿಸಿ ಚೌಕಾಸಿ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತದಲ್ಲಿ ಕಬ್ಬಿನ ಎಫ್‌ಆರ್‌ಪಿ ದರ ನಿಗದಿ ಮಾಡುವ ನೀತಿಯನ್ನು ಕೈ ಬಿಡಬೇಕು ಎಂದು ಅಮೇರಿಕ ಹಾಗೂ ಇನ್ನೂ ಕೆಲವು ರಾಷ್ಟ್ರಗಳು ಡಬ್ಲ್ಯೂಟಿಒನಲ್ಲಿ ಕೇಸ್ ದಾಖಲಿಸಿ ಒತ್ತಾಯ ಮಾಡುತ್ತಿವೆ. ಅದಕ್ಕಾಗಿ ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯ ಸಭೆ ಫೆ.26 ರಿಂದ 29ರ ತನಕ ಅಬುದಾಬಿಯಲ್ಲಿ ನಡೆಯುತ್ತಿದೆ.

ಡಬ್ಲ್ಯೂಟಿಒ ಒಪ್ಪಂದದಿಂದ ಆಗಿರುವ ಭಾರತ ದೇಶದ ರೈತರ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯಿಂದ ನಾನು (ಕುರುಬೂರ್ ಶಾಂತಕುಮಾರ್) ಸೇರಿದಂತೆ ಮೂರು ಜನ ರೈತ ಮುಖಂಡರಿಗೆ ಈ ಸಭೆಯಲ್ಲಿ ಭಾಗವಹಿಸಲು ಆಮಂತ್ರಣ ಬಂದಿದೆ ನಾವು ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ರೈತರ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ರೈತ ಮುಖಂಡರು ರಾಜಕೀಯ ಪಕ್ಷಗಳ ಅಡಿಯಾಳುಗಳಾಗಿ ಕಾರ್ಯನಿರ್ವಹಿಸುವ ಬದಲು ರೈತರ ಸಂಕಷ್ಟ ನಿವಾರಣೆಯ ಸಮಯ ಬಂದಿದೆ. ಈಗಲಾದರೂ ರೈತರ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಹೋರಾಟಕ್ಕೆ ಬೀದಿಗೆ ಬನ್ನಿ ಎಂದು ಸಂಘಟನೆಗಳಿಗೆ ಕರೆ ನೀಡಿದರು.

ಇನ್ನು ರಾಜಕೀಯ ಪಕ್ಷದ ಹಲವು ಕಾರ್ಯಕರ್ತರು ನಾವು ರೈತರ ಮಕ್ಕಳು ರೈತರ ಅನ್ನ ತಿನ್ನುತ್ತೇವೆ ನಮ್ಮ ಬಾಯಿಗೆ ನಾವೇ ಮಣ್ಣು ಹಾಕಿಕೊಳ್ಳಬಾರದು ಎಂಬುದನ್ನು ಅರಿತುಕೊಳ್ಳದೆ, ದೆಹಲಿಯ ರೈತ ಹೋರಾಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಗುರವಾಗಿ ಚಳವಳಿಯನ್ನು ಟೀಕಿಸಿ ಮಾತನಾಡಿಸುವುದನ್ನು ನಿಲ್ಲಿಸಿ. ರೈತರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಆಗ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಕುಟುಕಿದರು.

ಕೇಂದ್ರ ಸರ್ಕಾರದ ಜೊತೆ ಈಗ ನಾಲ್ಕನೇ ಸುತ್ತಿನ ಮಾತುಕತೆ ನಡೆದಿದೆ. ಆದರೆ, ಮಾತುಕತೆ ನೆಪದಲ್ಲಿ ವಿಳಂಬ ಧೋರಣೆ ಅನುಸರಿಸುವುದನ್ನು ಬಿಟ್ಟು ಸಮಸ್ಯೆ ಬಗೆರಿಸಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ್ ರಾಜಸ್ಥಾನ್‌ನಿಂದ ಲಕ್ಷಾಂತರ ರೈತರು ಇಂದು ಶಾಂತಿಯುತವಾಗಿ ದೆಹಲಿ ಚಲೋ ನಡೆಸುತ್ತಿದ್ದಾರೆ ಸಮಸ್ಯೆ ಬಗೆಹರಿಯುವ ತನಕ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

ದೆಹಲಿ ಹೋರಾಟದ ಜತೆ ಸಾಗಲು ರಾಜ್ಯದಲ್ಲಿಯೂ ಪ್ರಬಲ ಹೋರಾಟ ರೂಪಿಸಲು ನಾಳೆ ರೈತ ಸಂಘಟನೆಗಳ ಮುಖಂಡರ ಜತೆ ಗೂಗಲ್ ಸಭೆ ನಡೆಸಿ ತೀರ್ಮಾನಿಸಿ ಏಕಕಾಲದಲ್ಲಿ ರಾಜ್ಯಾದ್ಯಂತ ರೈತರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ನೆಲಮಂಗಲ ತಾಲೂಕು ಘಟಕದ ಅಧ್ಯಕ್ಷ ರಾಜೇಶ್, ಹಾರೋಹಳ್ಳಿ ಗಜೇಂದ್ರಸಿಂಗ್, ಕನಕಪುರ ಶಿವಕುಮಾರ್, ನರಸಿಂಹಯ್ಯ, ಕೊಳ್ಳೇಗಾಲ ತಾಲೂಕು ಮಾದೇಶ್, ವೆಂಕಟೇಶ್ ಮುಂತಾದವರು ಇದ್ದರು.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ