ಸಿಂಧನೂರು: ರೈತರ ಕೃಷಿ ಉತ್ಪನ್ನಗಳಿಗೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರೂ ಖರ್ಚಿಗೆ ಅನುಗುಣವಾಗಿ ಯೋಗ್ಯ ಬೆಲೆ ಸಿಗದೆ, ಕನಿಷ್ಠ ಬೆಂಬಲ ಬೆಲೆ ಕೂಡ ಸಿಗದೇ ರೈತರು ಕೃಷಿಗೆ ಮಾಡಿದ ಸಾಲ ತೀರಿಸಲಾಗದೆ ಬ್ಯಾಂಕ್‌ಗಳ ಫೈನಾನ್ಸರ್‌ಗಳ ಕಿರುಕುಳ ತಾಳಲಾರದೆ ಪ್ರತಿನಿತ್ಯ ಒಂದಿಲ್ಲೊಂದು ಕಡೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಈ ಆತ್ಮಹತ್ಯೆಗಳನ್ನು ತಪ್ಪಿಸಲು ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತೆ ವರ್ತಕರಿಗೆ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಬೇಕು ಎಂದು ರೈತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಸೋಮವಾರ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ರೈತರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ಉಳಿವಿಗಾಗಿ ಬೃಹತ್ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಜಾಗೃತಿ ಸಮಾವೇಶದಲ್ಲಿ ಜಿಲ್ಲಾ ಪದಾಧಿಕಾರಿಗಳು ತಾಲೂಕು ಪದಾಧಿಕಾರಿಗಳು ಮಾತನಾಡಿದರು.
ಕೃಷಿ ಪಂಪ್ ಸೆಟ್‌ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಸಿದ್ಧರಾಗಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು. ಅದೇ ರೀತಿ ಮಹಿಳೆಯರು, ವೃದ್ಧರು, ಮಕ್ಕಳ ನೆಮ್ಮದಿ ಗೋಸ್ಕರ ಮದ್ಯಪಾನ, ಗುಟ್ಕಾ, ಮಟ್ಕಾ, ಇಸ್ಪೀಟ್ ಈವುಗಳ ಮೇಲೆ ನಿಷೇಧ ಹೇರಬೇಕು.
ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಕೆಲಸ ಕೊಡಬೇಡಬೇಕು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಅನುಗುಣವಾಗಿ ವಿಷಯವಾರು ಶಿಕ್ಷಕರನ್ನು ಭರ್ತಿ ಮಾಡಬೇಕು. ಕೂಲಿ ಕಾರ್ಮಿಕರ ನಿರುದ್ಯೋಗ ನಿವಾರಣೆ ಮಾಡಲು ಕೈಗಾರಿಕೆಗಳಲ್ಲಿ ನೂರಕ್ಕೆ ನೂರರಷ್ಟು ನಮ್ಮ ರಾಜ್ಯದವರಿಗೆ ಅವಕಾಶ ಕಲ್ಪಿಸಿಕೊಡಬೇಕು.
ಸರ್ಕಾರಗಳ ಅನೀತಿ ಪದ್ಧತಿಯಿಂದ ಇಲ್ಲಿಯ ತನಕ ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಇಲ್ಲದ ಕಾರಣ ರೈತರ ಎಲ್ಲ ಬ್ಯಾಂಕ್‌ಗಳಲ್ಲಿರುವ ಎಲ್ಲ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ನದಿ ನೀರಿನ ಅನುಗುಣವಾಗಿ ನದಿ ಜೋಡಣೆ ಮತ್ತು ಅಲ್ಲಲ್ಲಿ ಏತ ನೀರಾವರಿಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು.
ಈ ಎಲ್ಲ ನಿರ್ಣಯಗಳನ್ನು ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಇದಕ್ಕೆ ಸರ್ಕಾರಗಳು ಸ್ಪಂದಿಸದಿದ್ದರೆ ಪ್ರತಿ ಹಳ್ಳಿಗಳನ್ನು ತಲುಪಿ ರೈತರನ್ನು ಜಾಗೃತಿಗೊಳಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿರ್ಣಯವನ್ನು ಇಂದಿನಿಂದಲೇ ಪ್ರಾರಂಭ ಮಾಡಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ ಸುಲ್ತಾನಪುರ, ಜಿಲ್ಲಾ ಉಪಾಧ್ಯಕ್ಷ ರಾಮಯ್ಯ ಜವಳಗೆರ, ತಿಮ್ಮಣ್ಣ ಬೋವಿ, ಸಿಂಧನೂರು ತಾಲೂಕ ಅಧ್ಯಕ್ಷ ಬೀರಲಿಂಗಯ್ಯ ಚಿತ್ರಾಲಿ, ಮಸ್ಕಿ ತಾಲೂಕ ಅಧ್ಯಕ್ಷ ವೆಂಕಟೇಶ ರತ್ನಾಪುರ ಹಟ್ಟಿ, ರಾಯಚೂರು ತಾಲೂಕು ಅಧ್ಯಕ್ಷ ಚೆನ್ನಪ್ಪ ಹುಣಸಿಹಾಳ ಹುಡಾ, ಲಿಂಗಸುಗೂರು ತಾಲೂಕ ಅಧ್ಯಕ್ಷ ವೆಂಕಟೇಶ ಕೋಠಾ, ಮಾನವಿ ತಾಲೂಕ ಅಧ್ಯಕ್ಷ ಶಿವರಾಜ ಆಲ್ದಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಪ್ಪ ದೇವಸ್ಗೂರ, ಕಾರಟಗಿ ತಾಲೂಕ ಅಧ್ಯಕ್ಷ ಭೀಮನಗೌಡ PP.
ಕೊಪ್ಪಳ ಜಿಲ್ಲಾ ರೈತ ಮುಖಂಡ ಆನಂದ್ ಬಾಬು ಗುಂಡೂರ, ಜಿಲ್ಲಾ ಕೋಶ್ಯಾಧ್ಯಕ್ಷ ನರಿಯಪ್ಪ ಪೂಜಾರಿ, ಮಸ್ಕಿ ತಾಲೂಕು ಗೌರವಾಧ್ಯಕ್ಷ ಲಾಲಸಾಬ ನಾಡಗೌಡ, ಜಿಲ್ಲಾ ವರದಿಗಾರ ಮಾನಯ್ಯ ಅಂಕುಶದೊಡ್ಡಿ, ಸಿಂಧನೂರು ತಾಲೂಕು ಗೌರವ ಅಧ್ಯಕ್ಷ ನಾಗಪ್ಪ ಬೂದಿಹಾಳ, ಕಾರ್ಯಾಧ್ಯಕ್ಷ ಕೊಠಾರಿ ಜಯ ರಾಘವೇಂದ್ರ ಗಾಂಧಿನಗರ, ರಾಯಚೂರು ತಾಲೂಕು ಪ್ರಧಾನ ಕಾರ್ಯದರ್ಶಿ ನಿಂಗಪ್ಪ ವಡ್ಲೂರ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು ನೂರಾರು ಗ್ರಾಮಗಳ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.