NEWSಕೃಷಿನಮ್ಮರಾಜ್ಯ

ಬಜೆಟ್‌ ಪೂರ್ವ ಸಭೆ- ರೈತರ ಸಮಸ್ಯೆ ಬಜೆಟ್‌ನಲ್ಲಿ ಗಂಭೀರವಾಗಿ ಪರಿಗಣಿಸಿ: ಸಿಎಂ ಸಿದ್ದರಾಮಯ್ಯಗೆ ರೈತ ಮುಖಂಡರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರ ರೈತರು ಹಾಗೂ ಇತರೆ ರೈತರ ಸಮಸ್ಯೆಗಳನ್ನು ಬಜೆಟ್‌ನಲ್ಲಿ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯದ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ರಾಜ್ಯದ ರೈತ ಸಂಘ ಸಂಸ್ಥೆಗಳ ಸುಮಾರು 218 ಮಂದಿ ಪ್ರತಿನಿಧಿಗಳು ಹಾಗೂ ರೈತ ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಇಂದು 2024- 25 ನೇ ಸಾಲಿನ ಆಯವ್ಯಯ ಪೂರ್ವಭಾವಿ ಚರ್ಚೆ ನಡೆಸಿದರು.

ಈ ವೇಳೆ ಬರಗಾಲದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಆಗಬೇಕು. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವೇ ರೈತರ ಸಾಲ ಮನ್ನಾ ಮಾಡಿರುವ ರೀತಿ ಮಾಡಬೇಕು. ಕಬ್ಬಿನ ಎಫ್.ಆರ್.ಪಿ. ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಈಗಾಗಲೇ ಕಬ್ಬು ಕಟಾವು ಸಾಗಣಿಕೆ ದರ ಸಕ್ಕರೆ ಕಾರ್ಖಾನೆಗಳು ಮನಬಂದಂತೆ ಕಡಿತ ಮಾಡಿರುವ ಹೆಚ್ಚುವರಿ ಹಣ ರೈತರಿಗೆ ವಾಪಸ್ ಕೊಡಿಸಬೇಕು.

2022-23ರ ಸಾಲಿನಲ್ಲಿ ಕಬ್ಬಿಗೆ ಟನ್‌ಗೆ 150 ಹೆಚ್ಚುವರಿ ದರ ಕೂಡಲೇ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವೇ ಸರ್ಕಾರವೇ ರೈತರಿಗೆ ಪಾವತಿಸಬೇಕು. ಸರ್ಕಾರ ಹಲವು ಸಭೆಗಳನ್ನು ನಡೆಸಿದರು ಯಾವುದೇ ಪ್ರಯೋಜನ ಆಗಿಲ್ಲ.

ತೆಲಂಗಾಣ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರವೇ ವಿಮಾ ಕಂತು ಪಾವತಿಸಿ 5 ಲಕ್ಷ ಜೀವ ವಿಮೆ ಪಾಲಿಸಿ ನೀಡಲಾಗಿದೆ. ಆಕಸ್ಮಿಕ, ಅಪಘಾತ ಸಾವು, ಆತ್ಮಹತ್ಯೆಗೆ ಒಳಗಾದ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಸಿಗುತ್ತದೆ. ಇದೇ ರೀತಿ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಬೇಕು.

ರೈತರ ಎಲ್ಲ ಕೃಷಿ ಉತ್ಪನ್ನಗಳನ್ನ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಪಂಜಾಬ್, ಹರಿಯಾಣ, ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಎಂ.ಎಸ್.ಪಿ. ಖರೀದಿ ಕೇಂದ್ರ ತೆರೆದು. ರೈತರಿಂದ ಖರೀದಿಸುವ ಮಿತಿಯನ್ನ ರದ್ದುಗೊಳಿಸಿ. ಮೇಲಿನ ರಾಜ್ಯಗಳಲ್ಲಿ ಇರುವಂತೆ ಜಾರಿ ಮಾಡಬೇಕು.

ಬರಗಾಲ ಪೀಡಿತ ಪ್ರದೇಶದ ರೈತರಿಗೆ, ತಮಿಳುನಾಡಿಗೆ ನೀರು ಹರಿಸಿ ಕಾವೇರಿ ಅಚ್ಚುಕಟ್ಟು ರೈತರಿಗೆ ವಂಚನೆ ಮಾಡಿರುವ ಸರ್ಕಾರ ರೈತರಿಗೆ ಕೂಡಲೇ ಎಕರೆಗೆ 25,000 ರೂಪಾಯಿ ಪರಿಹಾರ ನೀಡಬೇಕು.

ರೈತರು ಬೆಳೆದ ಎಲ್ಲ ಸಿರಿಧಾನ್ಯಗಳನ್ನು ಉತ್ಪಾದನಾ ವೆಚ್ಚಕ್ಕೆ ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರವೇ ಕಡ್ಡಾಯವಾಗಿ ಖರೀದಿಸುವಂಥ ವ್ಯವಸ್ಥೆ ಜಾರಿಗೆ ಬರಬೇಕು ಅಥವಾ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಖರೀದಿಸಿ, ಸರ್ಕಾರದ ಅಂಗಸಂಸ್ಥೆಗಳಾದ ಆಸ್ಪತ್ರೆ ವಿದ್ಯಾರ್ಥಿ ನಿಲಯ, ಜೈಲುಗಳಿಗೆ, ಪೂರೈಸುವ ವ್ಯವಸ್ಥೆ ಮಾಡಬೇಕು.

ರೈತರ ಎಲ್ಲ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು. ಬೆಳೆವಿಮೆ ಪದ್ದತಿ ಕೆಲವು ನೀತಿಗಳು ಬದಲಾಗಬೇಕು. ಅತಿವೃಷ್ಟಿ ಪ್ರಕೃತಿ ವಿಕೋಪ ಬೆಳೆನಷ್ಟಕ್ಕೆ ಪರಿಹಾರ ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಸಿಗುವಂತಾಗಬೇಕು.

ಕೃಷಿ ಸಾಲ ನೀತಿ ಬದಲಾಗಬೇಕು. ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ನೀಡುವಂತೆ ಆಗಬೇಕು ಎಲ್ಲ ರೈತರಿಗೂ ಕೇವಲ ಪಹಣಿ ಪತ್ರ ಆಧರಿಸಿ ಕನಿಷ್ಠ 5 ಲಕ್ಷ ರೂ. ಆಧಾರರಹಿತ ಬಡ್ಡಿ ಇಲ್ಲದ ಸಾಲ ಕೊಡಿಸುವ ಯೋಜನೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜಾರಿಯಾಗಬೇಕು.

ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಮೇಳಗಳನ್ನು ರಾಷ್ಟ್ರೀಯ ರೈತ ದಿನದಂದು ಡಿಸೆಂಬರ್ 23 ರಂದು ದಿವಂಗತ ಎಂ.ಡಿ.ಎನ್ ಹೆಸರಿನಲ್ಲಿ ರೈತ ಸಂಘಟನೆಗಳ ಸಹಕಾರದೊಂದಿಗೆ ಆಚರಿಸಲು ಕ್ರಮಕೈಗೊಳ್ಳಬೇಕು.

ಕಬ್ಬು ಕಟಾವು ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು, ಕಬ್ಬು ಕಟಾವು ಹಾಗೂ ಬಿತ್ತನೆಗೆ ಬಳಸಿಕೊಳ್ಳಲು ಎನ್.ಆರ್.ಇ.ಜಿ ಯೋಜನೆಗೆ ಸೇರಿಸಬೇಕು ಬಾಳೆ ಬೆಳೆಗೆ ಪ್ರೋತ್ಸಾಹ ಧನ ನೀಡುವ ರೀತಿ. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುವ ಮಾನದಂಡ ಬದಲಾಗಬೇಕು ಇಳುವರಿ ಮೋಸ ತಪ್ಪಿಸಲು ವೈಜ್ಞಾನಿಕ ಮಾನದಂಡ ಅಳವಡಿಸಬೇಕು.

ಕಬ್ಬಿನಿಂದ ಉತ್ಪಾದಿಸುವ ಎಥನಾಲ್ ಉತ್ಪಾದನಾ ಲಾಭದ ಆದಾಯವನ್ನು ಕಬ್ಬು ದರ ನಿಗದಿಯಲ್ಲಿ ಪರಿಗಣಿಸಬೇಕು. ಕಬ್ಬಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಅನಾಹುತವಾದಾಗ ಸುಟ್ಟು ಹೋದ ಕಬ್ಬಿಗೆ ಯಾವುದೇ ಮಾನದಂಡವಿಲ್ಲದೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇಕಡ 25ರಷ್ಟು ಕಡಿತ ಮಾಡುವುದನ್ನು ಕೈ ಬಿಟ್ಟು ಎಫ್.ಆರ್.ಪಿ ಹಣ ರೈತರಿಗೆ ಪೂರ್ತಿ ಪಾವತಿ ಆಗಬೇಕು.

ಕೃಷಿ ಉತ್ಪನ್ನಗಳಿಗೆ ಎಪಿಎಂಸಿಯಲ್ಲಿ ಅಡಮಾನ ಸಾಲ ಯೋಜನೆ ಸದೃಢಗೊಳಿಸಬೇಕು. ರೈತರಿಗೆ ಅನುಕೂಲವಾಗುವ ಈ ಯೋಜನೆಗೆ ಹೆಚ್ಚು ಅನುದಾನ ಮೀಸಲಿಡಬೇಕು. ಕೃಷಿಗೆ ಬಳಸುವ ಕೀಟನಾಶಕ ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು ಟ್ಯಾಕ್ಟರ್ ಬಿಡಿಭಾಗಗಳ ಜಿ.ಎಸ್‌ಟಿ ತೆರಿಗೆ ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು.

ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ರೈತರ ಜೀವನ ನಾಶವಾಗುತ್ತಿರುವುದನ್ನು ತಪ್ಪಿಸಲು ಸ್ಥಳೀಯ ಜನರ ಸಹಕಾರದೊಂದಿಗೆ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಗ್ರಾಮ ಪಂಚಾಯಿತಿಗಳಿಗೆ ತಡೆಗಟ್ಟುವ ಅಧಿಕಾರ ನೀಡಿ ಯೋಜನೆ ರೂಪಿಸಬೇಕು ಪರಿಹಾರ ಮನದಂಡ ಹೆಚ್ಚಳ ಮಾಡಬೇಕು.

ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ 8 ಲಕ್ಷಕ್ಕೂ ಹೆಚ್ಚು ಬಗರ್ ಹುಕ್ಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರಾಜ್ಯದಲ್ಲಿ ರದ್ದಾಗಬೇಕು.ಹಾಸನ ಜಿಲ್ಲೆಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ, ಎಚ್.ಆರ್.ಪಿ ಭೂಮಿ ಪದ ತೆಗೆದುಹಾಕಿ ರೈತರಿಗೆ ಸಾಗುವಳಿ ಪತ್ರ ನೀಡಬೇಕು.

60 ವರ್ಷ ತುಂಬಿದ ರೈತರಿಗೆ ಮಾಸಿಕ ಭತ್ಯ ಕನಿಷ್ಠ 10,000 ರೂ. ಪಿಂಚಣಿ ಯೋಜನೆ ಜಾರಿಗೆ ತರಬೇಕು. ತೆಲಂಗಾಣ ಸರ್ಕಾರ ನೀಡುವ ರೀತಿಯಲ್ಲಿ. ಕೃಷಿ ಜಮೀನು ಅಭಿವೃದ್ಧಿ ಯೋಜನೆಗಳಿಗೆ ರೈತರಿಂದ ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಅವಶ್ಯಕತೆ ಸಂದರ್ಭದಲ್ಲಿ ರೈತರನ್ನ ಪಾಲುದಾರರನ್ನಾಗಿ ಮಾಡಬೇಕು.

ಗ್ರೀನ್ ಬರ್ಡ್ಸ್ ಆಗೋ ಕಂಪನಿ ಠೇವಣಿ ಹಣ ವಂಚಿತ ಒಂದೂವರೆ ಲಕ್ಷ ಬಡ ಜನರಿಗೆ ಈಗಾಗಲೇ ಮುಟ್ಟು ಗೋಲು ಹಾಕಿರುವ ಕಂಪನಿ ಆಸ್ತಿ ಹರಾಜು ಬೇಗ ಮುಗಿಸಿ ಹಣ ಕೊಡಿಸಬೇಕು.

ರಾಜ್ಯ ಬಜೆಟ್ ಮಂಡನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು. ರೈತರ ಅಭಿವೃದ್ಧಿ ಪೂರ್ವಕವಾದ ಯೋಜನೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಇದೇ ಫೆ.6 ರಂದು ಬೆಂಗಳೂರು ಚಲೋ ನಡೆಸಿ ತಮಗೆ ಒತ್ತಾಯ ಪತ್ರ ಸಲ್ಲಿಸಲಾಗಿದೆ. ಅದರಂತೆ ಈ ಬಗ್ಗೆ ತಾವೂ ಸೂಕ್ತ ಕ್ರಮ ತೆಗೆದುಕೊಂಡು ರೈತ ಪರ ಬಜೆಟ್‌ ಮಂಡನೆ ಮಾಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಪಶುಸಂಗೋಪನೆ ಸಚಿವ ವೆಂಕಟೇಶ್ ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘಟನೆಗಳ ಮುಖಂಡರಾದ ರಾಜ್ಯದ ಕಬ್ಬು ಬೆಳೆಗಾರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ರಾಜ್ಯ ಕಾರ್ಯಾಧ್ಯಕ್ಷ ವೀರನಗೌಡ ಕೋ ಪಾಟೀಲ್, ಚಾಮರಾಜನಗರ ತಾಲೂಕು ಅಧ್ಯಕ್ಷ ಸತೀಶ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಸುಂದ್ರಪ್ಪ, ಬಡಗಲಾಪುರ ನಾಗೇಂದ್ರ, ಎಚ್.ಆರ್ .ಬಸವರಾಜಪ್ಪ, ವೀರಸಂಗಯ್ಯ, ಚುಕ್ಕಿ ನಂಜುಂಡಸ್ವಾಮಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರಾದ ಸುನಂದಾ ಜಯರಾಂ ಸೇರಿದಂತೆ ವಿವಿಧ ರೈತ ಸಂಘಟನೆಗಳ 218 ಮಂದಿ ಮುಖಂಡರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTCಯ 4ನಿಗಮಗಳ ಸಾರಿಗೆ ನೌಕರರಿಗೆ ಶೇ.45ರಷ್ಟು ವೇತನ ಹೆಚ್ಚಳಕ್ಕೆ ವೇದಿಕೆ ಆಗ್ರಹ NWKRTC: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲಕನ ಕಾಲು ಮುರಿತ ಸಾರಿಗೆ ನೌಕರರು ಕರ್ತವ್ಯದ ವೇಳೆ ರೀಲ್ಸ್​ ಮಾಡಿದರೆ ಕೆಲಸದಿಂದ ವಜಾ: ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ಜು.22ರಂದು ಬೆಂವಿವಿಯ ಸಂವಹನ ವಿಭಾಗದ ಸುವರ್ಣ ಮಹೋತ್ಸವ- ರಾಷ್ಟ್ರೀಯ ಸಮ್ಮೇಳನ ಕಿರಿಯ ವಕೀಲರಿಗೆ ಗೌರವಾನ್ವಿತ ಸಂಬಳ ಕೊಡಿ: ಹಿರಿಯ ವಕೀಲರಿಗೆ ಸುಪ್ರೀಂ ಕೋರ್ಟ್‌ ಸಿಜೆ ಚಂದ್ರಚೂಡ್ ಕಿವಿ ಮಾತು ಬದಲಿ ಜಾಗದಲ್ಲಿ ಮನೆ ಕಟ್ಟಿಕೊಡ್ತೇವೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ 24 ಗಂಟೆ ಉಚಿತ ವಿದ್ಯುತ್‌, ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ, ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ ಮಹಿಳೆಯರಿಗೆ ತಿ... ಮಳೆ ಹಾನಿ ಪ್ರದೇಶಗಳಿಗೆ ಸಚಿವ ಕೆ.ವೆಂಕಟೇಶ್ ಭೇಟಿ: ಮೃತ ಕುಟುಂಬಕ್ಕೆ ಸಾಂತ್ವನ ಪರಿಹಾರ ಧನ ವಿತರಣೆ ಗೊರೂರು ಜಲಾಶಯದಿಂದ 25ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ: ಇಂಜಿನಿಯರ್ ಆನಂದ್ ಶೈಕ್ಷಣಿಕ ಸಂಸ್ಥೆಗಳು ಶೇ. 25 ರಷ್ಟು ಸೇವಾ ಶುಲ್ಕ ಪಾವತಿಸಿ ಲಾಭ ಪಡೆಯಿರಿ: ತುಷಾರ್  ಗಿರಿನಾಥ್