NEWSನಮ್ಮಜಿಲ್ಲೆನಮ್ಮರಾಜ್ಯ

ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿ ರಚನೆ: ಪ್ರಶಸ್ತಿ ನಾಮ ನಿರ್ದೇಶನಗಳ ಆಹ್ವಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 2019ನೇ ಕ್ಯಾಲೆಂಡರ್ ವರ್ಷದಿಂದ 2023ನೇ ಕ್ಯಾಲೆಂಡರ್ ವರ್ಷಗಳಿಗೆ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿ ರಚಿಸಲಾಗಿದ್ದು, ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

ಆಯ್ಕೆ ಸಮಿತಿ: ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ,ಶಾಂತಲಾ ಧರ್ಮರಾಜ್ ಹಾಗೂ ಎಂ.ಎಸ್.ಮಣಿ ಸದಸ್ಯರಾಗಿದ್ದಾರೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ: ಕನ್ನಡದ ಹಿರಿಯ ಪರ್ತಕರ್ತ ಟಿ.ಎಸ್. ರಾಮಚಂದ್ರರಾವ್ ಅವರ ನೆನಪಿನಲ್ಲಿ ಸರ್ಕಾರ ಟಿಯೆಸ್ಸಾರ್ ನಿಡುತ್ತಾ ಬಂದಿದೆ. ಪ್ರಶಸ್ತಿಯ ಮೊತ್ತ 2 ಲಕ್ಷ ರೂ ಆಗಿದ್ದು, ಕನ್ನಡ ಪತ್ರಿಕೋದ್ಯಮ, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಅಥವಾ ಎರಡರಲ್ಲೂ ಒಟ್ಟಿಗೆ ಕನಿಷ್ಠ 30 ವರ್ಷಗಳ ಸೇವೆ ಸಲ್ಲಿಸಿರಬೇಕು. ಜೊತೆಗೆ ಕನ್ನಡ ಕ್ಷೇತ್ರಕ್ಕೆ ಭಾಷೆಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರುವವರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರತಿ ಕ್ಯಾಲೆಂಡರ್ ವರ್ಷಕ್ಕೆ ಒಬ್ಬರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುವುದು.

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ: ಪತ್ರಿಕಾ ರಂಗದ ಭೀಷ್ಮರೆಂದೇ ಹೆಸರಾದ ಮೊಹರೆ ಹಣಮಂತರಾಯ ಅವರ ನೆನಪಿನಲ್ಲಿ ಸರ್ಕಾರವು ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರಶಸ್ತಿಯ ಮೊತ್ತವು 2 ಲಕ್ಷ ರೂ ಆಗಿದ್ದು, ಕನ್ನಡದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಾವುದೇ ಪತ್ರಿಕೆಯನ್ನು ಅಥವಾ ಪತ್ರಿಕಾ ಸಮೂಹವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ ಹಾಗೂ ಪ್ರವೃತ್ತಿಯಲ್ಲಿ ಪತ್ರಕರ್ತರಾಗಿ, ವೃತ್ತಿಯಲ್ಲಿ ಪತ್ರಿಕಾಲಯದ ಮಾಲೀಕರು, ಆಡಳಿತಗಾರರಾಗಿ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿರಬೇಕು.

ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು, ಮಾಧ್ಯಮ ಸಂಸ್ಥೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪೂರ್ಣ ದಾಖಲೆಗಳೊಂದಿಗೆ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾಸೌಧ, ನಂ. 17, ಭಗವಾನ್ ಮಹಾವೀರರಸ್ತೆ, ಬೆಂಗಳೂರು – 560 001 ಇಲ್ಲಿಗೆ 2024ನೇ ಜುಲೈ 25ರ ಸಂಜೆ 5.30 ಗಂಟೆ ಒಳಗಾಗಿ ಕಳುಹಿಸಿಕೊಡಬಹುದಾಗಿದೆ. ಅಥವಾ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿ ಮೂಲಕ ಇಲ್ಲವೇ [email protected] ಇಮೇಲ್ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಕಳುಹಿಸಿಕೊಡಬಹುದಾಗಿದೆ.

Vijayapatha - ವಿಜಯಪಥ

Leave a Reply

error: Content is protected !!
LATEST
KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪ್ರಣಾಪಾಯದಿಂದ ಪತ್ನಿ ಪಾರು 600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ ಮಾಡಲು ಹೊರಟಿರುವುದು ನ್ಯಾಯವೇ? KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರಿಗೆ ಸಮಾನ ವೇತನ ಲಾಭವೋ-ನಷ್ಟವೋ..!?? ಹರಿಯಾಣದಲ್ಲಿ ಸಮಾವೇಶ: ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಅನ್ನದಾತರ ಪಟ್ಟು ಪ್ರಜಾಪ್ರಭುತ್ವದ ಉಳಿವಿಗಾಗಿ ಮಾನವ ಸರಪಳಿ : ಉಸ್ತುವಾರಿ ಸಚಿವ ಮುನಿಯಪ್ಪ BMTC ಅಧಿಕಾರಿಗಳ ವಾಹನಗಳಿಗೂ ಖಾಸಗಿ ಚಾಲಕರ ನೇಮಕಕ್ಕೆ ಟೆಂಡರ್‌ ಕರೆದ ಸಂಸ್ಥೆ KSRTC ಮಡಿಕೇರಿ: ವೇತನ ಬಿಡುಗಡೆ ಆಗ್ರಹಿಸಿ ಪ್ರತಿಭಟನೆಗೆ ಇಳಿದ ಗುತ್ತಿಗೆ ಚಾಲಕರು KSRTC ನೌಕರರ ನಂಬಿಸಲು ಹೋದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಂದಲೇ ಅವರ ಊಸರವಳ್ಳಿ ಬಣ್ಣ ಬಯಲು..! KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ