NEWSಆರೋಗ್ಯನಮ್ಮರಾಜ್ಯ

ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಆರೋಗ್ಯದಲ್ಲಿ ಚೇತರಿಕೆ -ಡಿಸ್ಮಾರ್ಜ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಮಾಜಿ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಅವರು ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.

ಸದ್ಯ ಅವರನ್ನು ಚಿಕಿತ್ಸೆಗಾಗಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇದೀಗ ಅವರ ಆರೋಗ್ಯದಲ್ಲಿ ಚೇತರಿಗೆ ಕಂಡು ಬಂದಿತ್ತು, ಆಸ್ಪತ್ರೆಯಿಂದ ಡಿಸ್ಮಾರ್ಜ್ ಆಗಿದ್ದಾರೆ.

ಬೆಂಗಳೂರಿನ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಭಾಗವಹಿಸಿದ್ದರು.

ಈ ವೇಳೇ ಸಂಜೆ ಸುಮಾರು 4.20 ಗಂಟೆ ಹೊತ್ತಿಗೆ ಅವರು ವೇದಿಕೆಯಲ್ಲಿದ್ದಾಗಲೇ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದರು. ಘಟನೆಯ ವೇಳೆ ಸಭಾಂಗಣದಲ್ಲಿದ್ದ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ತಕ್ಷಣವೇ ಸ್ಪಂದಿಸಿದರು.

ಆಂಬುಲೆನ್ಸ್ ಬರುವವರೆಗೆ ಕಾಯದೆ, ತಮ್ಮದೇ ಕಾರಿನಲ್ಲಿ ಸಂತೋಷ್ ಹೆಗಡೆ ಅವರನ್ನು ಕೂರಿಸಿಕೊಂಡು ಆಸ್ಪತ್ರೆಗೆ ಧಾವಿಸಿದರು. ಖಾದರ್ ಅವರೇ ಸ್ವತಃ ಜತೆಯಲ್ಲಿದ್ದು, ಹೆಗಡೆ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ಇದೀಗ ಅವರ ಆರೋಗ್ಯದಲ್ಲಿ ಚೇತರಿಗೆ ಕಂಡು ಬಂದಿತ್ತು, ಆಸ್ಪತ್ರೆಯಿಂದ ಡಿಸ್ಮಾರ್ಜ್ ಆಗಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC ಕೂಟದಿಂದ ಏ.8ರಿಂದ ಪಾದಯಾತ್ರೆ, 21ರಿಂದ ಆಮರಣಾಂತ ಉಪವಾಸ ನಾಳೆ ಇಪಿಎಸ್-95 ಪಿಂಚಣಿದಾರರ 99ನೇ ಮಾಸಿಕ ಸಭೆ: BMTC ‍& KSRTC ನಿವೃತ್ತ ನೌಕರರ ಸಂಫದ ಅಧ್ಯಕ್ಷ ನಂಜುಂಡೇಗೌಡ ದ್ವಿತೀಯ ಪಿಯುಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯ ಮುಕ್ತಾಯ: ಏ.7ರಂದು ಫಲಿತಾಂಶ ಪ್ರಕಟ ಸಾಧ್ಯತೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿದರೆ ದಂಡ: GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಆರೋಗ್ಯದಲ್ಲಿ ಚೇತರಿಕೆ -ಡಿಸ್ಮಾರ್ಜ್ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ: ನವ ವಿವಾಹಿತೆ ಸೇರಿ ಇಬ್ಬರು ಮೃತ ಓರ್ವನ ಸ್ಥಿತಿ ಗಂಭೀರ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಹಲವು ಪ್ರಯಾಣಿಕರಿಗೆ ಗಂಭೀರ ಗಾಯ BMTC ಮೆಜೆಸ್ಟಿಕ್: ಪ್ಲಾಟ್‌ಫಾರಂ-05ರಲ್ಲಿ ಸೂಪರ್‌ ಟಾಕೀಸ್‌ಆದ ಸುಜಾತಾ ಟಾಕೀಸ್‌; ಅತೀ ಚಿಕ್ಕದಾಗಿ ಕಾಣುವ ಅಕ್ಷರಗಳು ಸಾಂಸ್ಕೃತಿಕ ನಗರಿ ಮೈಸೂರು: ವಿದೇಶಿಗರ ಸೆಳೆಯುವ ಪ್ರವಾಸಿ ತಾಣಗಳ ಮಹತ್ವ..! ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು: ಚಾಲಕನಿಗೆ ಗಂಭೀರ ಗಾಯ