- ಎಚ್‌ಡಿಡಿ ಅವರ ಹುಟ್ಟುಹಬ್ಬ ವೃದ್ಧಾಶ್ರಮದಲ್ಲಿ ಅಭಿಮಾನಿಗಳಿಂದ ಸೇವಾ ಕಾರ್ಯ
ಮೈಸೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹುಟ್ಟುಹಬ್ಬವನ್ನು ಅರವಿಂದ್ ನಗರದ ಜೆಎಸ್ಎಸ್ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.
ಎಚ್.ಡಿ.ದೇವೇಗೌಡರ ಅಭಿಮಾನಿ ಬಳಗ ಹಾಗೂ ಎಸ್.ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ದೇವೇಗೌಡರ 93ನೇ ಹುಟ್ಟು ಹಬ್ಬದ ಅಂಗವಾಗಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಸೀರೆ ಹಾಗೂ ಪಂಚೆ ಮತ್ತು ದಿನಸಿ ಸಾಮಗ್ರಿ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಲಾಯಿತು
ಬಳಿಕ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ದೇಶ ಕಂಡ ಅಪ್ರತಿಮ ರೈತ ನಾಯಕ ಹಾಸನ ಜಿಲ್ಲೆಯಿಂದ ಗೆದ್ದು ಕರ್ನಾಟಕ ರಾಜ್ಯದಿಂದ ಏಕ ಮಾತ್ರ ಪ್ರಧಾನ ಮಂತ್ರಿಯಾಗಿ ಆಡಳಿತ ಮಾಡಿದ ದೇವೇಗೌಡ ಅವರ ಜನ್ಮದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ನೂರಾರು ವರ್ಷ ಆರೋಗ್ಯವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಇನ್ನು ದೇವೇಗೌಡರ ಗರಡಿಯಲ್ಲಿ ಬೆಳೆದ ಸಾಕಷ್ಟು ಜನ ಮುಖ್ಯಮಂತ್ರಿಗಳಾಗಿ ಸಚಿವರಾಗಿ ಕೇಂದ್ರ ಮಂತ್ರಿಗಳಾಗಿ ಅಧಿಕಾರ ವಹಿಸಿದ್ದಾರೆ ದೇವೇಗೌಡರ ಆಶೀರ್ವಾದ ಇನ್ನು ನಮಗೆಲ್ಲರಿಗೂ ಅಗತ್ಯವಿದೆ ದೇವೇಗೌಡರೇ ಒಂದು ಶಕ್ತಿ ಎಂದು ಹೇಳಿದರು.

ಕರ್ನಾಟಕದ ಸರ್ದಾರ್ ಪಟೇಲ್ ಎಚ್‌ಡಿಡಿ: ಹಿರಿಯ ಸಮಾಜಸೇವಕ ಕೆ.ರಘುರಾಮ ವಾಜಪೇಯಿ ಮಾತನಾಡಿ, ಭಾರತ ಕಂಡಂತಹ ಉತ್ತಮ ಪ್ರಧಾನಿಗಳಲ್ಲಿ ನಮ್ಮ ಕನ್ನಡಿಗರೇ ಆದ ದೇವೇಗೌಡ ಅವರು ಒಬ್ಬರು ಎಂಬುದು ಹೆಮ್ಮೆಯ ವಿಷಯ. ರೈತಾಪಿ ಹಿನ್ನೆಲೆಯಿಂದ ಬಂದ ಕರ್ನಾಟಕದ ಸರ್ದಾರ್ ಪಟೇಲ್ ಎಂದೆ ಖ್ಯಾತಿ, ಇಂದು ಅವರ 93ನೇ ಹಬ್ಬದ ಆಚರಣೆಯನ್ನು ನಾವು ಜೆಎಸ್ಎಸ್ ವೃದ್ಧಾಶ್ರಮದಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಅವರು ಇನ್ನೂ 100 ಕಾಲ ಆರೋಗ್ಯವಾಗಿ ಬಾಳಲಿ ಎಂಬುವುದು ಅಭಿಮಾನಿಗಳ ಅಪೇಕ್ಷೆ ಆಗಿದೆ ಎಂದರು.

ಹಿರಿಯ ನಾಗರಿಕರಿಂದ ಹಾರೈಕೆ: ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮೈಸೂರು ನಗರ ಜೆಡಿಎಸ್ ಕಾರ್ಯ ಅಧ್ಯಕ್ಷ ಎಸ್.ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಗಾಯಕ ಯಶವಂತ್ ಕುಮಾರ್, ಛಾಯಾ, ಪಿಂಕಿ ಕುಮಾರಿ ರಾಜೇಶ್ ಕುಮಾರ್ ವೀರಭದ್ರ ಸ್ವಾಮಿ ಸುಬ್ರಮಣಿ ರಮೇಶ್ ರಾಮಪ್ಪ, ಗಗನ್, ಶ್ರೀಧರ್ ಜೆಡಿಎಸ್ ಮುಖಂಡ ಹರ್ಷ ಎಲ್ಐಸಿ ವೆಂಕಟೇಶ್ ಶ್ರೀಧರ್ ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್ ಹರ್ಷಿತ್ ಎಸ್ ನಾಗೇಶ್, ದತ್ತ ಇನ್ನಿತರರು ಇದ್ದರು.
Related

 










