ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ನಗರದಲ್ಲಿ ಇಂದು ದೇವೇಗೌಡ ಅಭಿನಂದನಾ ಸಮಿತಿ ಆಯೋಜಿಸಿದ್ದ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಶ್ರೀಗಳು, ಸುತ್ತೂರು ಶ್ರೀಗಳು, ಮಾದಾರ ಚನ್ನಯ್ಯ ಶ್ರೀಗಳು, ನಂಜಾವಧೂತ ಶ್ರೀಗಳು ದೇವೇಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ವೇಳೆ, ದೇವೇಗೌಡರ ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಮಾತನಾಡಿದ ದೇವೇಗೌಡ ಅವರು, ಜೀವನದ ಕೊನೆ ಹಂತ ಇದು. ನಿಮ್ಮ ಆಶೀರ್ವಾದ ಈ ಹಂತದಲ್ಲಿ ಈ ಆತ್ಮಕ್ಕೆ ಸಮಾಧಾನ ತಂದಿದೆ. ನಾನು ಅನೇಕ ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ರಾಜಕೀಯದಲ್ಲಿ ಸೋಲು, ಗೆಲುವು ಯಾರು ತಲೆ ಕೆಡಿಸಿಕೊಳ್ಳಬಾರದು ಎಂದರು.
ಇನ್ನು ನನ್ನ ಶ್ರೀಮತಿ ಚನ್ನಮ್ಮ ಎಲ್ಲ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಅನೇಕ ಕಷ್ಟದಲ್ಲಿ ನನ್ನ ಗೌರವ ಉಳಿಸಿದ್ದಾರೆ. ನನ್ನ ಬೆಳವಣಿಗೆಗೆ ಅವರ ಕೊಡುಗೆ ಸಾಕಷ್ಟು ಇದೆ ಎಂದು ಚೆನ್ನಮ್ಮ ಅವರ ತ್ಯಾಗ ನೆನೆದು ಕಣ್ಣೀರು ಹಾಕಿದರು.
ಆದಿಚುಂಚನಗಿರಿ ಹಿಂದಿನ ಗುರುಗಳ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸ ಆಯ್ತು, ಸತ್ಯ ಹೇಳ್ತೀನಿ ಎಲ್ಲರ ಮಧ್ಯೆ ನಾವು ಏನಾದರೂ ಗೌರವ ಸಂಪಾದನೆ ಮಾಡಿದ್ದೇವೆ ಅಂದರೆ ಅದು ಬಾಲಗಂಗಾಧರನಾಥ ಸ್ವಾಮೀಜಿಗಳಿಂದ. ರಾಮಕೃಷ್ಣ ಆಶ್ರಮದಲ್ಲಿ ನನ್ನ ದೊಡ್ಡ ಮಗನನ್ನು ಹಾಸ್ಟೆಲ್‌ಗೆ ಸೇರಿಸಿದ್ದೆ. ಆಗ ಅಲ್ಲಿನ ಶ್ರೀಗಳು ಬಾಲಕೃಷ್ಣ ಹೆಸರಿನಲ್ಲಿ ಗೌಡ ಅನ್ನೋ ಹೆಸರು ತೆಗೆಸು ಎಂದು ಹೇಳಿದರು. ಗೌಡ ಎನ್ನುವ ಹೆಸರು ಇದ್ದರೆ ಡಿಗ್ರಿ ಮಾತ್ರ ಸಿಗುತ್ತೆ. ರ‍್ಯಾಂಕ್ ಸಿಗಲ್ಲ ಅಂದರು. ಬಾಲಗಂಗಾಧರನಾಥ ಸ್ವಾಮೀಜಿ ನಮ್ಮ ಸಮಾಜ ಗುರುತಿಸಲು ದುಡಿದರು. ಈಗ ನಮ್ಮ ಮುಂದೆ ಅವರು ಇಲ್ಲ. ನಿರ್ಮಲಾನಂದ ಶ್ರೀಗಳನ್ನ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರದ ಜನತೆಗೆ ನೀರು ಸಿಗದೆ ಬವಣೆ ಪಡುತ್ತಿರುವುದನ್ನ ನೋಡಿದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ. ನರ್ಮದಾ, ಬ್ರಹ್ಮ ಪುತ್ರ ಸೇರಿ ಹಲವು ನದಿ ಸೇರಿಸಿ ಒಂದು ಡ್ಯಾಮ್ ಮಾಡಿದೆ. ಗೋದಾವರಿ ನೀರು ತಮಿಳುನಾಡಿಗೆ ಕೊಡುತ್ತೇವೆ ಅಂತಾರೆ. ಶನಿವಾರ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ತಮಿಳುನಾಡು ಸರ್ ಪ್ಲಸ್ ಸ್ಟೇಟ್. ಇದನ್ನು ಟ್ರಿಬ್ಯೂನಲ್ ಹೇಳಿದೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಈಗ ಆಡಳಿತ ಮಾಡೋರ ಬಗ್ಗೆಯೂ ಟೀಕೆ ಮಾಡಲ್ಲ ಎಂದರು.
ಇನ್ನು ಕರ್ನಾಟಕದಲ್ಲಿ ಕುಡಿಯೋಕೆ ನೀರಿಲ್ಲ ಎಂದು ಹೇಳುತ್ತಾರೆ. ಆಂಧ್ರ ಸಿಎಂ ಬಂದು ಕೂತ್ಕೋ ಅಂತ ನನ್ನನ್ನ ಕೂರಿಸಿದ್ರು. ನಾನು ಯಾವುದೂ ಮರೆಯಲ್ಲ. ತುಂಗಭದ್ರಾದಿಂದ ಮಡಕಶಿರದ ಮೇಲೆ ತೆಗೆದುಕೊಂಡು ಹೋಗುತ್ತಾರೆ ಅಂತೆ. ಹೈಕೋರ್ಟ್‌ನಲ್ಲಿ ರಿಟ್ ಹಾಕಿಸ್ತಾರೆ. ಮಧುಗಿರಿ, ಶಿರಾಗೆ ನೀರು ಕೊಡಿ ಅಂತ ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಅಲ್ಲಿ ರದ್ದು ಮಾಡುತ್ತಾರೆ.
ಗೋದಾವರಿ ನೀರಿನ ಬಗ್ಗೆ ಶನಿವಾರ ಡಿಟೇಲ್ ಆಗಿ ಪತ್ರ ಬರೆದಿದ್ದೇನೆ. ನಾನು ಈಗಿನ ಪ್ರಧಾನಿಗಳನ್ನ ಹೊಗೊಳೋಕೆ ಬರಲ್ಲ. ವಾಜಪೇಯಿ ನನಗೆ ಸಹಕಾರ ಕೊಡ್ತೀನಿ ಅಂದರು ನಾನು ಬೇಡ ಅಂದೆ. ನನ್ನ ಜನ ನಾನು ಹೋದ ಮೇಲೆ ಈ ಬವಣೆಯಿಂದ ಪಟ್ಟ ನೋವನ್ನ ಈ ಆತ್ಮ ನೋಡುತ್ತದೆ. ನಾನು ನರಕ, ಸ್ವರ್ಗದಲ್ಲಿ ಇರುತ್ತೇನೋ ಗೊತ್ತಿಲ್ಲ. ಆದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ. ನರ್ಮದಾ ನೀರು ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರದ ಜನ ನೀರಿಗಾಗಿ ಏನು ಮಾಡಬೇಕು? ಇರೋ ಅವಧಿಯಲ್ಲಿ ರಾಜ್ಯಸಭೆಯಲ್ಲಿ ನನ್ನ ಹೋರಾಟ ಮಾಡುತ್ತೇನೆ. ನನಗೆ ಕಾಲಿಗೆ ನೋವು ಇರಬಹುದು. ಬುದ್ದಿಗೆ ನೋವಿಲ್ಲ. ಸಂಸತ್‌ನಲ್ಲಿ ಹೋರಾಟ ಮಾಡೋ ಶಕ್ತಿ ನನಗೆ ಇದೆ. ಪ್ರಧಾನಿಗಳಿಗೆ ಮನವರಿಕೆ ಮಾಡುತ್ತೇನೆ. 17 ಜನರನ್ನು ಕೊಟ್ಟಿದ್ದೇವೆ, ಕೈ ಬಿಡಬೇಡಿ ಅಂತ ಹೇಳುತ್ತೇನೆ ಎಂದರು.
ಇನ್ನು ನೀರಿನ ಸಮಸ್ಯೆ ಪರಿಹಾರ ಮಾಡೋಕೆ ಮೋದಿಯಿಂದ ಮಾತ್ರ ಸಾಧ್ಯ. ನನ್ನ ಜನಕ್ಕೆ ಆಗೋ ಅನ್ಯಾಯವನ್ನ ಈ ದೇಶದ ಪ್ರಧಾನಿ, ವಿಶ್ವವೇ ಗುರುತಿಸೋ ಮೋದಿ ಅವರಿಂದ ಈ ಸಮಸ್ಯೆ ಪರಿಹಾರ ಸಾಧ್ಯ. ಪಕ್ಷರಹಿತವಾಗಿ ನಾವು ಒಗ್ಗಟ್ಟಾಗಿ ನಮಗೆ ಆಗಿರೋ ಅನ್ಯಾಯ ಸರಿ ಮಾಡೋಣ ಎಂದು ಹೇಳಿದರು.
Related

You Might Also Like
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...