ಪಿರಿಯಾಪಟ್ಟಣ: ದೇಶ ಸೇವೆಯ ಕನಸ್ಸು ಹೊತ್ತು ಸೇನಾಪಡೆಗೆ ಸೇರ ಬಯಸುವ ಯುವಕ/ಯುವತಿಯರಿಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಶಿವು ಸೈನಿಕ್ ಅಕಾಡೆಮಿ ಅಧ್ಯಕ್ಷ ಶಿವು ತಿಳಿಸಿದರು.
ಪಟ್ಟಣದ ಹರವೆ ಮಲ್ಲರಾಜಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಉಚಿತ ವೃತ್ತಿ ತರಬೇತಿ, ಮಾರ್ಗದರ್ಶನ ಕಾರ್ಯಾಗಾರ ಡೆಮೋ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಇದೇ ಜೂನ್ 28 ರಂದು ಕೊಡಗಿನ ಮಡಿಕೇರಿಯಲ್ಲಿ ಭಾರತೀಯ ಸೇನೆಯ ರ್ಯಾಲಿ ನಡೆಯಲಿದ್ದು, ಈ ರ್ಯಾಲಿಯಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಡೆಮೋ ರ್ಯಾಲಿ ನೀಡಲಾಗುತ್ತಿದೆ. ಈ ರ್ಯಾಲಿಯಲ್ಲಿ ಭಾಗಿಯಾಗಲು ವಿದ್ಯಾರ್ಥಿಗಳು ಧೈರ್ಯ ಹಾಗೂ ಸ್ಥೈರ್ಯವನ್ನು ಮೈಗೂಡಿಸಿಕೊಂಡಿರಬೇಕು ಎಂದರು.
ಈ ಎಲ್ಲ ವಿಚಾರಗಳನ್ನು ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡುತ್ತಿದ್ದೇವೆ. ಸೇನಾಪಡೆಯತ್ತ ಯುವಕರನ್ನು ಆಕರ್ಷಿಸುವ ಉದ್ದೇಶದಿಂದ ನಮ್ಮ ಸಂಸ್ಥೆ ಅನೇಕ ಯೋಜನೆಗಳನ್ನು ಆರಂಭಿಸಿದೆ. ಸೇನಾ ನೇಮಕಾತಿ ರ್ಯಾಲಿಯ ಪರೀಕ್ಷೆ ಎದುರಿಸಲು ಅಭ್ಯರ್ಥಿಗಳನ್ನು ಸಜ್ಜುಗೊಳಿಸಲಾಗುತ್ತದೆ ಎಂದು ವಿವರಿಸಿದರು.
ಈ ತರಬೇತಿ ಶಿಬಿರಕ್ಕೆ ನೆರೆ ಜಿಲ್ಲೆ ಮತ್ತು ತಾಲೂಕುಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದು ಅವರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ ಯುವಕರಲ್ಲಿ ಇದೆ ಎಂದರು.
ಶಿವು ಸೈನಿಕ್ ಅಕಾಡೆಮಿ ಕಾರ್ಯದರ್ಶಿ ಸ್ವಾಮಿ, ಸದಸ್ಯರಾದ ಮಹಾದೇವ್, ರವಿ, ಗಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.