CRIMENEWSಬೆಂಗಳೂರು

ಕೆಲಸ ಸಿಗದಿದ್ದಕ್ಕೆ ಮನನೊಂದು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

446Views
ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೆಲಸ ಸಿಗದಿದ್ದಕ್ಕೆ ಮನನೊಂದು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ.

ಮೃತನನ್ನು ಬಿಹಾರ ಮೂಲದ ರಾಹುಲ್ ಕುಮಾರ್ ಯಾದವ್ (22) ಆತ್ಮಹತ್ಯೆ ಮಾಡಿಕೊಂಡವರು. ಈತ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು.

ಆದರೆ ಇತ್ತೀಚೆಗೆ ಆ ಕೆಲಸ ಕೂಡ ಸಿಗದೆ ನೊಂದು ಊರಿಗೆ ಬರಲು ನಿರ್ಧರಿಸಿದ್ದನು. ಪೋಷಕರು ಊರಿಗೆ ಬರಬೇಡ ಅಲ್ಲೇ ಇದ್ದು ಕೆಲಸ ಸರ್ಚ್‌ ಮಾಡು ಎಂದು ಹೇಳಿದ್ದರಂತೆ. ಆದರೆ ಇತ್ತ ಕೆಲಸವಿಲ್ಲದೆ ಮನನೊಂದ ಯುವಕ ಬಾಡಿಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತ ವಿಷಯ ತಿಳಿಯುತ್ತಿದ್ದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಇನ್ನು ಕೆಲಸ ಸಿಗಲಿಲ್ಲ ಎಂದು ಈ ರೀತಿ ಮಾಡಿಕೊಳ್ಳುವುದು ಮೀಕ್‌ ಮನಸ್ಥಿತಿಯನ್ನು ತೋರಿಸುತ್ತದೆ. ಯಾವ ಯುವಕರು ಈರೀತಿ ಮಾಡಿಕೊಳ್ಳದೆ ಒಂದಲ್ಲ ಒಂದು ಕೆಲಸ ಹುಡುಕಬೇಕು ಎಂದು ಮನೋವೈದ್ಯರು ಸಲಹೆ ನೀಡಿದ್ದಾರೆ.

ಅಲ್ಲದೆ ಈ ರೀತಿ ಮನಸ್ಸಿಗೆ ಬಂದರೆ ಕೂಡಲೇ ಸ್ನೇಹಿತ ಜತೆಗೆ ಹೆಚ್ಚು ಹೆಚ್ಚು ಕಾಲ ಕಳೆಯುವುದಕ್ಕೆ ಪ್ರಯತ್ನ ಮಾಡಬೇಕು. ಇಲ್ಲ ಇಷ್ಟವಾಗುವ ವ್ಯಕ್ತಿಗಳ ಜತೆ  ಸಮಯ ಕಳೆಯಬೇಕು. ಇದರಿಂದ ಕೆಟ್ಟ ಆಲೋಚನೆಗಳು ದೂರವಾಗುತ್ತವೆ ಎಂದು ತಿಳಿಸಿದ್ದಾರೆ.

Advertisement
Megha
the authorMegha

Leave a Reply

error: Content is protected !!