NEWSನಮ್ಮಜಿಲ್ಲೆಬೆಂಗಳೂರು

ಜಿಬಿಎ: 9 ಸಾವಿರ ಕೆಜಿ ಏಕ ಬಳಕೆ ಪ್ಲಾಸ್ಟಿಕ್ ವಶ, 7.38 ಲಕ್ಷ ರೂ. ದಂಡ ವಸೂಲಿ- ಕರೀಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 9 ಸಾವಿರ ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು 7.38 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬಿ.ಎಸ್.ಡಬ್ಲ್ಯೂ.ಎಂ.ಎಲ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕರೀಗೌಡ ತಿಳಿಸಿದ್ದಾರೆ‌.

ನಗರದಾದ್ಯಂತ ಏಕ ಬಳಕೆ ಪ್ಲಾಸ್ಟಿಕ್‌ಅನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಕೂಡ, ಅಕ್ರಮವಾಗಿ ಏಕ ಬಳಕೆ ಪ್ಲಾಸ್ಟಿಕ್ ಕವರ್‌ಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಅಧಿಕಾರಿಗಳು ಉತ್ಪಾದಕರು ಹಾಗೂ ದಾಸ್ತಾನುದಾರರ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪ್ಲಾಸ್ಟಿಕ್ ವಶಕ್ಕೆ ಪಡೆದು, ಕೆ.ಆರ್.ಮಾರುಕಟ್ಟೆಯಲ್ಲಿ ಒಂದು ಗೋಡೌನ್ ಸೀಜ್ ಮಾಡಲಾಗಿದೆ.

 ಎಲ್ಲೆಲ್ಲಿ ದಂಡ  ಸಂಗ್ರಹಣೆ- ಕೆ.ಆರ್. ಮಾರುಕಟ್ಟೆ: ಕೆ.ಆರ್ ಮಾರುಕಟ್ಟೆ ವ್ಯಾಪ್ತಿಯ ಎ ಬ್ಲಾಕ್ ನಲ್ಲಿ 3 ಪ್ರಕರಣಗಳಿಂದ 29 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 30,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ. ಜೊತೆಗೆ ವೆಂಡರ್ಸ್ ಸಿ ಬ್ಲಾಕ್ ನಲ್ಲಿ 22 ಪ್ರಕರಣಗಳಿಂದ 6310 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 3500/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಅವೆನ್ಯೂ ರಸ್ತೆ: ಅವೆನ್ಯೂ ರಸ್ತೆ ವ್ಯಾಪ್ತಿಯ ಬಿ ಬ್ಲಾಕ್ ನಲ್ಲಿ 17 ಪ್ರಕರಣಗಳಿಂದ 300 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 40,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಕಲಾಸಿಪಾಳ್ಯ: ಕಲಾಸಿಪಾಳ್ಯದಲ್ಲಿ 24 ಪ್ರಕರಣಗಳಿಂದ 150 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 45,900/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಯಶವಂತಪುರ ಮಾರುಕಟ್ಟೆ: ಯಶವಂತಪುರ ಮಾರುಕಟ್ಟೆಯಲ್ಲಿ 27 ಪ್ರಕರಣಗಳಿಂದ 110 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 61,800/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

Advertisement

ಪೀಣ್ಯ ಕೈಗಾರಿಕಾ ಪ್ರದೇಶ: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 27 ಪ್ರಕರಣಗಳಿಂದ 450 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 1,00,500/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ದಾಸರಹಳ್ಳಿ (ಮ್ಯಾನುಪಾಕ್ಚರಿಂಗ್) ಪ್ರದೇಶ: ದಾಸರಹಳ್ಳಿ (ಮ್ಯಾನುಪಾಕ್ಚರಿಂಗ್) ಪ್ರದೇಶದಲ್ಲಿ 01 ಪ್ರಕರಣಗಳಿಂದ 218 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 50,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಚಾಮರಾಜಪೇಟೆ ಹಾಗೂ ಇತರೆ ಪ್ರದೇಶ: ಚಾಮರಾಜಪೇಟೆ-ಮಕ್ಕಳಕೂಟ, ಅಕ್ಕಿಪೇಟೆ, ಬಳೆಪೇಟೆ ಪ್ರದೇಶದಲ್ಲಿ 37 ಪ್ರಕರಣಗಳಿಂದ 2,000 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 4,07,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಒಟ್ಟಾರೆಯಾಗಿ 158 ಪ್ರಕರಣಗಳಿಂದ 9,567 ಕೆಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದು ರೂ. 7,38,700 ಗಳ ದಂಡದ ಮೊತ್ತವನ್ನು ವಸೂಲಿ ಮಾಡಿ, ಸಾರ್ವಜನಿಕರು ಹಾಗೂ ಮಾರಾಟಗಾರರು ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಹಾಗೂ ಬಟ್ಟೆಯ ಚೀಲಗಳನ್ನು ಬಳಸಿ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!