ಮಧುರೈ: ಕಿರಿಯವ ಕೀಲರು ವೃತ್ತಿಯಲ್ಲಿ ಕಲಿಕೆಗಾಗಿ, ಅನುಭವ ಹೆಚ್ಚಿಸಿಕೊಳ್ಳಲು ಮತ್ತು ಮಾನ್ಯತೆ ಪಡೆಯಲು ಹಿರಿಯ ವಕೀಲರ ಬಳಿ ಬರುತ್ತಾರೆ. ಹೀಗಾಗಿ ಅವರ ಮೇಲೆ ನಿಮ್ಮ ಹಕ್ಕು ಚಲಾಯಿಸುವ ಮನೋಭಾವನೆಯನ್ನು ಬಿಟ್ಟು ಮಾರ್ಗದರ್ಶನ ನೀಡಿ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಕಿವಿ ಮಾತು ಹೇಳಿದರು.
ಮಧುರೈನಲ್ಲಿ ಮದ್ರಾಸ್ ಉಚ್ಚನ್ಯಾಯಾಲಯದ ಪೀಠ ಸ್ಥಾಪನೆಯ 20ನೇ ವಾರ್ಷಿಕೋತ್ಸವದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ವಕೀಲರು ತಮ್ಮ ಕಿರಿಯ ವೃತ್ತಿ ಬಾಂಧವರಿಗೆ 5000 ರೂ. ವೇತನ ನೀಡುವ ಪ್ರವೃತ್ತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇಂತಹ ಪ್ರವೃತ್ತಿಯಿಂದ ಯುವ ವಕೀಲರು ವೃತ್ತಿಯಿಂದಲೇ ಶಾಶ್ವತವಾಗಿ ದೂರ ಸರಿಯುವಂತಾಗಬಹುದು ಎಂದು ಆತಂಕ ವ್ಯ ಕ್ತಪಡಿಸಿದರು.
ನೋಡಿ ಕಿರಿಯರಿಂದಲೂ ಹಿರಿಯ ವಕೀಲರು ಕಲಿಯಬೇಕಾದದ್ದು ಬಹಳಷ್ಟಿದೆ. ಕಿರಿಯ ವಕೀಲರು ಸಮಕಾಲೀನ ವಾಸ್ತವಗಳ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿದ್ದಾರೆ. ಅವರ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಗೌರವಾನ್ವಿತ ಮೊತ್ತವನ್ನು ನೀಡಿ. ಸಾಕಷ್ಟು ಸಂಬಳವಿಲ್ಲದೆ ಕೆಲಸಮಾಡುವುದು ಸರಿಯಲ್ಲ ಎಂದು ಹೇಳಿದರು.
ಇದು ಜನರು ಕಡಿಮೆ ಹಣಕ್ಕಾಗಿ ನಿದ್ರೆ ಮತ್ತು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ನಿರೀಕ್ಷೆಯಾಗಿದೆ ಎಂದ ಚಂದ್ರಚೂಡ್ ಅವರು, ಸಾಮಾಜಿಕ ಹಾಗೂ ಕಠಿಣ ಆರ್ಥಿಕ ಹಿನ್ನೆಲೆಯಿಂದ ಬಂದವರೂ ಸಮರ್ಥ ವಕೀಲರಾಗಿ ರೂಪುಗೊಳ್ಳುತ್ತಾರೆ. ಆ ನಿಟ್ಟಿನಲ್ಲಿ ನೀವು ಅವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಬೇಕು ಎಂದು ತಿಳಿಸಿದರು.