NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ

ವಿಜಯಪಥ ಸಮಗ್ರ ಸುದ್ದಿ
  • ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ

ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು . ಯಾವುದೇ ಕಾರಣಕ್ಕೂ ವಾರದ ರಜೆ ರದ್ದುಪಡಿಸಬಾರದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕಾರ್ಮಿಕ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಎಲ್ಲ ಚಾಲಕ, ನಿರ್ವಾಹಕ ಮತ್ತು ಚಾಲಕ ಕಂ ನಿರ್ವಾಹಕರಿಗೆ ಕಡ್ಡಾಯವಾಗಿ ವಾರದ ರಜೆ ನೀಡಬೇಕು. ಯಾವುದೇ ಕಾರಣಕ್ಕೂ ವಾರದ ರಜೆ ರದ್ದುಪಡಿಸಬಾರದು ಎಂದು ಸಂಸ್ಥೆಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು 2010ರ ಏಪ್ರಿಲ್‌ 5ರಂದೇ ಆದೇಶ ಹೊರಡಿಸಿದ್ದಾರೆ.

ಇನ್ನು ಅನಿವಾರ್ಯ ಮತ್ತು ತುರ್ತು ಸಂದರ್ಭದಲ್ಲಿ ವಾರದ ರಜೆ ರದ್ದುಪಡಿಸಿದ್ದಲ್ಲಿ ನಿಯಮಾವಳಿಯಂತೆ 10 ದಿನಗಳೊಳಗಾಗಿ ಪರಿಹಾರ ರಜೆ ನೀಡಬೇಕು ಎಂದು ಆದೇಶದಲ್ಲಿ ಸ್ಪಷ್ಟ ಸೂಚನೆ ಕೂಡ ನೀಡಿದ್ದಾರೆ.

ಅದರಂತೆ, ಚಾಲಕ, ನಿರ್ವಾಹಕ, ಚಾಲಕ ಕಂ ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಎಲ್ಲ ವರ್ಗದ ನೌಕರರಿಗೆ ನಿಗದಿತ ದಿವಸದಂದು ವಾರದ ರಜೆಯನ್ನು ತಪ್ಪದೇ ನೀಡುವುದು ಮತ್ತು ಒಂದು ವೇಳೆ, ಅನಿವಾರ್ಯ ಸಂದರ್ಭಗಳಲ್ಲಿ ವಾರದ ರಜೆಯ ದಿವಸದಂದು ನೌಕರರಿಂದ ಕರ್ತವ್ಯ ನಿರ್ವಹಿಸಿಕೊಂಡ ಪಕ್ಷದಲ್ಲಿ ಮುಂದಿನ ಮೂರು ದಿವಸಗಳೊಳಗಾಗಿ ಪರಿಹಾರ ರಜೆಯನ್ನು ತಪ್ಪದೇ ನೀಡಬೇಕು ಎಂದು 2010ರಲ್ಲೇ ಆದೇಶ ಹೊರಡಿಸಲಾಗಿದೆ.

ಅದೇ ರೀತಿ “ತರಬೇತಿ ಚಾಲಕ, ನಿರ್ವಾಹಕ ಮತ್ತು ಚಾಲಕ ಕಂ ನಿರ್ವಾಹಕರು ತಿಂಗಳಲ್ಲಿ 22 ದಿನಗಳ ಕರ್ತವ್ಯ ನಿರ್ವಹಿಸಿದ್ದಲ್ಲಿ ಅವರಿಗೆ 1 ವಾರದ ರಜೆ, 1 ಪರಿಹಾರ ವಾರದ ರಜೆಯೊಂದಿಗೆ ಅವರ ಸ್ವಂತ ಸ್ಥಳದ ದೂರದ ಆಧಾರದ ಮೇಲೆ 3-4 ದಿನಗಳಿಗೆ ಮೀರದಂತೆ ಬಿಡುವು ನೀಡುವುದು. ‌

ಪುಸ್ತಕದಲ್ಲಿ ಈ ದಿನಗಳನ್ನು ಗೈರುಹಾಜರಿಯೆಂದು ನಮೂದಿಸಬಾರದು ಹಾಗು ಈ ದಿನಗಳಿಗೆ ಶಿಸ್ತಿನ ಕ್ರಮವಾಗಿ ಯಾವುದೇ ದಂಡ ವಿಧಿಸಬಾರದು ಎಂದು ಸೂಚನೆ ನೀಡಿದ್ದು, ಅದನ್ನು ಪರಿಷ್ಕರಿಸಲಾಗಿದೆ.

ಆಡಳಿತ ಇಲಾಖೆಯಿಂದ ಹೊರಡಿಸಲಾದ ಸುತ್ತೋಲೆ ಸಂಖ್ಯೆ 1394/01.04.2009ರನ್ವಯ ತಿಂಗಳಲ್ಲಿ ಕನಿಷ್ಠ 22 ದಿನಗಳ ಕರ್ತವ್ಯವನ್ನು ನಿರ್ವಹಿಸಿದ ತರಬೇತಿ ಚಾಲಕ, ನಿರ್ವಾಹಕ ಮತ್ತು ಚಾಲಕ ಕಂ ನಿರ್ವಾಹಕರು 1 ಸಾಂಧರ್ಭಿಕ ರಜೆಗೆ ಅರ್ಹರಿದ್ದು, ಜತೆಗೆ 1 ವಾರದ ರಜೆ ಮತ್ತು 2 ದಿವಸಗಳ ಅನುಮತಿಯು ಸೇರಿದಂತೆ ಗರಿಷ್ಠ 4 ದಿವಸಗಳ ಮಟ್ಟಿಗೆ ಅವರ ಸ್ವಂತ ಊರಿಗೆ ಹೋಗಿ ಬರಲು ಅವಕಾಶ ಮಾಡಿಕೊಡುವುದು ಹಾಗೂ ಹಾಜರಾತಿ ಪುಸ್ತಕದಲ್ಲಿ ಈ ಎರಡು ದಿವಸಗಳನ್ನು ಗೈರುಹಾಜರಿಯೆಂದು ನಮೂದಿಸಬಾರದು.

ಮೇಲ್ಕಂಡ ನಿರ್ದೇಶನಗಳು ತಕ್ಷಣದಿಂದ ಜಾರಿಗೆ ಬರುತ್ತದೆ ಮತ್ತು ಈ ನಿರ್ದೇಶನಗಳನ್ನು ತಪ್ಪದೇ ಅನುಷ್ಠಾನಗೊಳಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಬಳಿಕ ಅಂದರೆ ಪ್ರಸ್ತುತ ಕೆಲ ಬದಲಾವಣೆಗಳು ಕೂಡ ಮಾಡಲಾಗಿದೆ. ಆದರೆ, ವಾರದಲ್ಲಿ ಒಂದು ದಿನ ಗೈರಾದರೆ ವಾರದ ರಜೆ ಬರುವುದಿಲ್ಲ ಎಂದು ಕೆಲ ಡಿಪೋಗಳಲ್ಲಿ ಡಿಎಂಗಳು ಹೇಳಿ ಗೈರು ಹಾಜರಿ ತೋರಿಸುತ್ತಾರೆ. ಹೀಗೆ ಮಾಡುವುದಕ್ಕೆ ಡಿಎಂಗಳಿಗೆ ಯಾವುದೇ ಅಧಿಕಾರವಿಲ್ಲ.

ಅಂದರೆ ವಾರದ ರಜೆ ಇರುವ ಹಿಂದಿನ ಅಥವಾ ಮುಂದಿನ ದಿನ ಡ್ಯೂಟಿ ಮಾಡಿದರೆ ವಾರದ ರಜೆ ಜತೆಗೆ ಸಿಎಲ್‌, ಸಿಎಂಎಲ್‌, ಇಎಲ್‌ ಹೀಗೆ ಯಾವುದೇ ರಜೆ ಹಾಕಿದರು ಅನ್ನು ಮಂಜೂರು ಮಾಡಬೇಕು. ಒಂದು ವೇಳೆ ರಜೆ ಮಂಜೂರು ಮಾಡದರೆ ಗೈರುಹಾಜರಿ ತೋರಿಸಿದರೆ ಅಂಥ ಡಿಎಂಗಳ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಬಹುದುವುದು.

Megha
the authorMegha

Leave a Reply

error: Content is protected !!