NEWSನಮ್ಮಜಿಲ್ಲೆನಮ್ಮರಾಜ್ಯ

ಸರ್ಕಾರಿ ಬಸ್‌ ಚಾಲಕ-ನಿರ್ವಾಹಕರು ಎಲ್ಲದಕ್ಕೂ ಹೊಣೆಯಲ್ಲ: ಸುಜಯ ಆರ್‌.ಕಣ್ಣೂರ

ವಿಜಯಪಥ ಸಮಗ್ರ ಸುದ್ದಿ

ಬಿಎಂಟಿಸಿ ವಿರುದ್ಧ 10 ಸಾವಿರ ದೂರು’ ಮುಖಪುಟ ವರದಿ ತಿಳಿಸುವ ಸಲುವಾಗಿ ಈ ಬರಹ. ನಾನು ಬಿಂಎಂಟಿಸಿ ಬಸ್‌ನಲ್ಲಿ 35 ವರ್ಷಗಳಿಂದ ಪ್ರಯಾಣಿಸುತ್ತಿದ್ದೇನೆ. ಇದರಲ್ಲಿ ಯಾರದು ತಪ್ಪು, ಯಾರದು ಸರಿ ಎಂಬುದನ್ನು ಖಚಿತವಾಗಿ ವಿಶ್ಲೇಷಿಸುವಷ್ಟು ವಿಷಯಗಳು ನನ್ನಲ್ಲಿವೆ ಎಂದು ಲೇಖಕಿ ಹವ್ಯಾಸಿ ಬರಹಗಾರ್ತಿ ಸುಜಯ ಆರ್‌.ಕಣ್ಣೂರ ವಿಶ್ವವಾಣಿ ಪ್ರತಿಸ್ಪಂದನದಲ್ಲಿ ವಿವರವಾಗಿ ತಿಳಿಸಿದ್ದಾರೆ.

ಈಗ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಇರುವು ದರಿಂದ ಬಸ್ಸುಗಳಲ್ಲಿ ಅವರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದ ನಿಂದಾಗಿ ನಿರ್ವಾಹಕರಿಗೆ ‘ಶೂನ್ಯ ಟಿಕೆಟ್’ ಕೊಡಲು ಸಮಯ ಸಾಲುತ್ತಿಲ್ಲ. ಅಷ್ಟರಲ್ಲಿ ಇನ್ನೊಂದು ಸ್ಟೇಜ್ ಬಂದುಬಿಡುತ್ತದೆ. ಕೆಲ ಹೆಣ್ಣು ಮಕ್ಕಳೂ ಆಧಾರ್‌ಕಾರ್ಡ್ ಅಥ ಅಥವಾ ಮತದಾರರ ಚೀಟಿ ತೋರಿಸುವ ತಮ್ಮ ಹೊಣೆಗಾರಿಕೆಯ ನಿರ್ವಹಣೆಯನ್ನು ನಿರ್ಲಕ್ಷ್ಯ, ಮಾಡುತ್ತಾರೆ. ಕೆಲವೊಮ್ಮೆ ಮೊಬೈಲ್‌ನಲ್ಲೇ ಮುಳುಗಿರುತ್ತಾರೆ.

ಟಿಕೆಟ್ ಕೊಡುವ/ ಪಡೆಯುವ ಪ್ರಕ್ರಿಯೆ ತಡವಾದಲ್ಲಿ ಮುಂದಿನ ಸ್ಟೇಜ್‌ನಲ್ಲಿ ಚೆಕಿಂಗ್ ಸ್ಟಾಡ್ ಬಂದಾಗ, ನಿರ್ವಾಹಕರು ಮೆಮೋ ಪಡೆಯಬೇಕಾಗುತ್ತದೆ ಅಥವಾ ದಂಡವನ್ನು ಪೀಕಬೇಕಾಗುತ್ತದೆ. ಇದನ್ನು ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ, ಪಡೆದ ಉದ್ದೇಶಿತ ನಿಲ್ದಾಣಗ ಭಲ್ಲಿ ಇಳಿಯದೇ, ತಮ್ಮ ಅನುಕೂಲಕ್ಕೆ ಇನ್ನೆಲ್ಲೋ ಇಳಿಯುತ್ತಾರೆ ಕೇಳಿದರೆ, ಫ್ರೀ ತಾನೆ ನಿಮಗೇನು ಕಷ್ಟ? ನಾವು ಎಲ್ಲಾದರೂ ಇಳಿಯಬಹುದು’ ಎಂಬ ಉಡಾಫೆಯ ಉತ್ತರ ಬರುತ್ತದೆ. ಅವರಿಗೆ ಅರ್ಥಮಾಡಿಸಲು ನಿರ್ವಾಹಕರು ಹೆಣಗುತ್ತಿರುತ್ತಾರೆ. ಇದನ್ನು ಚೆಕಿಂಗ್ ಅಧಿಕಾರಿಗಳೂ ಅರ್ಥಮಾಡಿಕೊಳ್ಳಬೇಕು, ಪ್ರತಿಬಾರಿಯೂ ನಿರ್ವಾಹಕರದ್ದೇ ತಪ್ಪಿರುವುದಿಲ್ಲ.

‘ಶಕ್ತಿ’ ಯೋಜನೆಯಿಂದಾಗಿ ಬಸ್ಸಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿ, ಎಲ್ಲಾ ಆಸನಗಳನ್ನೂ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಗಂಡಸರು ನಿಂತು ಪಯಣಿಸುವಂತಾಗಿದೆ ಹಾಗೂ ಬಸ್ಸುಗಳಲ್ಲಿ ಜಗಳ ಹೆಚ್ಚಾಗಿದೆ. ಇದನ್ನು ಸುಧಾರಿಸುವ ಹೊಣೆಯೂ ನಿರ್ವಾಹಕರ ಮೇಲೆಯೇ.

ಎಷ್ಟೋ ಕಡೆ ಬಹಳ ಹಳೆಯ ಬಸ್ ಗಳಿವೆ, ಅದರಲ್ಲಿನ ಸಮಸ್ಯೆಗಳನ್ನೆಲ್ಲಾ ಸುಧಾರಿಸಿಕೊಂಡು ಚಾಲಕರು ಕಾರ್ಯನಿರ್ವಹಿಸುತ್ತಾರೆ. ಸಂಚಾರ ದಟ್ಟಣೆಯಿಂದಾಗಿ ಎಷ್ಟೋ ಬಾರಿ ಚಾಲಕ-ನಿರ್ವಾಹಕರಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡಲೂ ಆಗುವುದಿಲ್ಲ, ಏಕೆಂದರೆ, ಸಕಾಲಕ್ಕೆ ನಿರ್ದಿಷ್ಟ ನಿಲ್ದಾಣ ವನ್ನು ತಲುಪದಿದ್ದರೆ ಅದಕ್ಕೂ ಪ್ರಯಾಣಿಕರು ದೂರು ಕೊಡು ತಾರಲ್ಲಾ! ಹೀಗೆ ಚಾಲಕರು-ನಿರ್ವಾಹಕರ ಕಷ್ಟಗಳನ್ನೂ ನಾವು ಅರ್ಥಮಾಡಿಕೊಳ್ಳಬೇಕು.

ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು, ಅದನ್ನು ತಪ್ಪಿಸಲು ಇದ್ದಕ್ಕಿದ್ದಂತೆ ಪಕ್ಕಕ್ಕೆ ಸರಿಯುತ್ತಾರೆ. ಆಗ ಹಿಂದೆ ಬರುತ್ತಿರುವ ಬಸುಗಳ ಚಾಲಕರಿಗೆ ಕಂಟ್ರೋಲ್ ಮಾಡುವುದು ಕಷ್ಟವಾಗುತ್ತದೆ, ಅಪಘಾತಗಳಾಗುತ್ತವೆ. ಹೀಗಾಗಿ ಮೊದಲು ರಸ್ತೆಗಳು ಸರಿಯಾಗಬೇಕು. ಇನ್ನು, ರಾತ್ರಿ ವೇಳೆ ಬಸ್ಸುಗಳಲ್ಲಿ ಮಲಗುವ ಚಾಲಕ-ನಿರ್ವಾಹಕರಿಗೆ ಸರಿಯಾದ ವ್ಯವಸೆಯಾಗಲೀ ಭದ್ರತೆಯಾಗಲೀ ಇರುವುದಿಲ್ಲ, ತಮಗಿರುವ ಕೆಲಸದ ಒತ್ತಡ ದಿಂದಾಗಿ ಇಂಥ ಎಷ್ಟೋ ಸಿಬ್ಬಂದಿ ಆರೋಗ್ಯ ಸಮಸ್ಯೆಗಳಿಗೆ ಬಲಿ ಯಾಗಿದ್ದಾರೆ.

Advertisement

ಕೆಲವು ಸೂಕ್ತ ವಿಷಯಗಳು ಎಲ್ಲರಿಗೂ ಅರ್ಥವಾ ಗುವುದಿಲ್ಲ, ಹೀಗಾಗಿ, ಯಾರೇ ಆಗಲಿ ಸಾರಿಗೆ ಸಿಬ್ಬಂದಿಯ ಮೇಲೆ ದೂರು ನೀಡುವ ಮೊದಲು ಸ್ವಲ್ಪ ಯೋಚಿಸಬೇಕು. ಕೈಯಲ್ಲಿ ಮೊಬೈಲಿದೆ, ನಂಬರ್ ಸಿಗುತ್ತದೆ ಎಂಬ ಘಮಂಡಿತನದಲ್ಲಿ ದೂರು ನೀಡುವುದು ತರವೇ?

ಮೇಲೆ ಉಲ್ಲೇಖಿಸಿದ ವ್ಯವಸ್ಥೆಗಳು ಮೊದಲು ಸರಿಯಾಗಬೇಕು. ಯಾರೇ ದೂರು ನೀಡಿದರೂ. ಅಧಿಕಾರಿಗಳು ಅದನ್ನು ಸರಿಯಾದ ರೀತಿಯಲ್ಲಿ ವಿವೇಚಿಸಿ, ತನಿಖೆ ಮಾಡಿ ಯಥೋಚಿತ ಕ್ರಮ ಕೈಗೊಳ್ಳಬೇಕೇ ಹೊರತು, ಎಲ್ಲಾ ದೂರುಗಳಿಗೂ ಚಾಲಕ-ನಿರ್ವಾಹಕರನ್ನು ಹೊಣೆಮಾಡುವುದು ಸರಿಯಲ್ಲ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!