NEWSನಮ್ಮಜಿಲ್ಲೆನಮ್ಮರಾಜ್ಯ

BMTC ಅಧ್ಯಕ್ಷ -ಉಪಾಧ್ಯಕ್ಷರ ಅದಲು ಬದಲು ಮಾಡಿ ಆದೇಶ ಹೊರಡಿಸಿದ ಸರ್ಕಾರ

ನಿಕೇತ್ ರಾಜ್ ಮೌರ್ಯ
ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಬೆಂಗಳೂರು: ರಾಜ್ಯ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ನೇಮಕದಲ್ಲಿ ಗೊಂದಲ ಮುಂದುವರಿದಿದೆ. ಅಳೆದು ತೂಗಿ ಇತ್ತೀಚಿಗಷ್ಟೇ ನಿಗಮ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರನ್ನು ಸರ್ಕಾರ ನೇಮಿಸಿತ್ತು. ಆದರೆ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅದಲು ಬದಲು ಮಾಡಿ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ.

ಬಿಎಂಟಿಸಿ ಅಧ್ಯಕ್ಷರಾಗಿ ನೇಮಕಗೊಂಡು ಅಧಿಕಾರವನ್ನು ಸ್ವೀಕರಿಸಿದವರಿಗೆ ಉಪಾಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದವವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ!

ಬಿಎಂಟಿಸಿ ಅಧ್ಯಕ್ಷ, ಉಪಾಧ್ಯಕ್ಷರೇ ಅದಲು ಬದಲು!
ನಿಕೇತ್ ರಾಜ್ ಮೌರ್ಯ ಈ ಮೊದಲು ಬಿಎಂಟಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಇದೀಗ ಅವರನ್ನು ಬಿಎಂಟಿಸಿ ಉಪಾಧ್ಯಕ್ಷರನ್ನಾಗಿ ಮರು ನೇಮಿಸಿ ಸರ್ಕಾರ ಆದೇಶಿಸಿದೆ. ಇನ್ನು ಬಿಎಂಟಿಸಿ ಉಪಾಧ್ಯಕ್ಷರಾಗಿದ್ದ ವಿ.ಎಸ್. ಆರಾಧ್ಯ ಎಂಬುವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮರು ನೇಮಿಸಿ ಸರ್ಕಾರ ಆದೇಶಿಸಿದೆ.

ವಿ.ಎಸ್. ಆರಾಧ್ಯ ಬಿಎಂಟಿಸಿ ಅಧ್ಯಕ್ಷ

ಬಾಕಿ ಇರುವ 5 ನಿಗಮಕ್ಕೆ ಅಧ್ಯಕ್ಷರ ನೇಮಕ: ಇನ್ನು ಬಾಕಿ ಉಳಿದ 5 ನಿಗಮ ಮಂಡಳಿಗಳಿಗೂ ಅಧ್ಯಕ್ಷರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ – ಸೈಯದ್ ಮೆಹಮೂದ್ ಚಿಸ್ಟಿ- ಅಧ್ಯಕ್ಷ
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ – ಶರಣಪ್ಪ ಸಲಾದ್ ಪುರ್ – ಅಧ್ಯಕ್ಷ
ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ – ಆಂಜನಪ್ಪ- ಅಧ್ಯಕ್ಷ
ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ – ನೀಲಕಂಠರಾವ್ ಎಸ್ ಮೂಲಗೆ, ಅಧ್ಯಕ್ಷ
ಜವಾಹರ ಬಾಲಭವನ ಸೊಸೈಟಿ – ಅನಿಲ್ ಕುಮಾರ್ ಜಮಾದಾರ್- ಉಪಾಧ್ಯಕ್ಷ

ಪಿ.ರಘು: ಸಫಾಯಿ ಕರ್ಮಚಾರಿ ಆಯೋಗ
ಅಗಾ ಸುಲ್ತಾನ್‌: ಕೇಂದ್ರ ಪರಿಹಾರ ಸಮಿತಿ
ಅರುಣ್‌ ಪಾಟೀಲ್‌: ಕೆಕೆಆರ್‌ಟಿಸಿ
ಎಂ.ಎ.ಗಫೂರ್‌: ಕರಾವಳಿ ಅಭಿವೃದ್ಧಿ ಪ್ರಾಧಿಕಾರ
ಎಂ.ಎಸ್‌. ಮುತ್ತುರಾಜ್‌: ಸವಿತಾ ಸಮಾಜ ಅಭಿವೃದ್ಧಿ ನಿಗಮ
ಎನ್‌. ಸಂಪಂಗಿ: ಕರ್ನಾಟಕ ವೇರ್‌ಹೌಸಿಂಗ್‌ ಕಾರ್ಪೊರೇಷನ್‌
ಎಸ್‌.ಜಿ. ನಂಜಯ್ಯನಮಠ: ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
ಕೆ. ಹರೀಶ್‌ ಕುಮಾರ್‌: ಮೆಸ್ಕಾಂ

Advertisement

ಗಂಗಾಧರ್‌: ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್‌
ಚೇತನ್‌ ಕೆ. ಗೌಡ: ಕೈಮಗ್ಗ ಅಭಿವೃದ್ಧಿ (ಪವರ್‌ಲೂಮ್‌) ಮಂಡಳಿ
ಟಿ.ಎಂ. ಶಹೀದ್‌ ಥೆಕ್ಕಿಲ್‌: ರಾಜ್ಯ ಕನಿಷ್ಠ ವೇತನ ಮಂಡಳಿ
ಡಾ. ಶ್ರೀನಿವಾಸ ವೇಲು: ಕುಂಬಾರ ಅಭಿವೃದ್ಧಿ ನಿಗಮ
ಡಾ.ಬಿ.ಸಿ.ಮುದ್ದುಗಂಗಾಧರ್‌: ಮಾವು ಅಭಿವೃದ್ಧಿ ನಿಗಮ

ಡಾ.ಮೂರ್ತಿ: ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ
ಧರ್ಮಣ್ಣ ಉಪ್ಪಾರ: ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
ನಂಜಪ್ಪ: ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
ಪ್ರವೀಣ್‌ ಹರ್ವಾಲ್‌: ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ)
ಬಾಬು ಹೊನ್ನಾ ನಾಯ್ಕ್‌: ಕಾಡಾ, ಭೀಮರಾಯನಗುಡಿ, ಕಲಬುರಗಿ
ಮಂಜಪ್ಪ: ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ
ಮಂಜುನಾಥ ಪೂಜಾರಿ: ನಾರಾಯಣ ಗುರು ಅಭಿವೃದ್ಧಿ ನಿಗಮ
ಮರಿಯೋಜಿ ರಾವ್‌: ಮರಾಠ ಅಭಿವೃದ್ಧಿ ನಿಗಮ

ಮಲ್ಲಿಕಾರ್ಜುನ್‌: ಮಾಜಿ ಸೈನಿಕರ ಕಲ್ಯಾಣ ಮಂಡಳಿ
ಮಹೇಶ್‌: ಕಾಡುಗೊಲ್ಲ ಅಭಿವೃದ್ಧಿ ನಿಗಮ
ಮುರಳಿ ಅಶೋಕ್‌: ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಯುವರಾಜ್‌ ಕದಂ: ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ, ಬೆಳಗಾವಿ
ಲಾವಣ್ಯ ಬಲ್ಲಾಳ್‌: ಜೈನ್‌ ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆ
ವಡ್ನಾಳ್‌ ಜಗದೀಶ್‌: ಜೀವವೈವಿಧ್ಯ ಮಂಡಳಿ

ವಿಶ್ವಾಸ್‌ ದಾಸ್‌: ಗಾಣಿಗ ಅಭಿವೃದ್ಧಿ ನಿಗಮ
ವೈ. ಸಯೀದ್‌ ಅಹ್ಮದ್‌: ದೇವರಾಜ ಅರಸು ಟ್ರಕ್‌ ಟರ್ಮಿನಲ್‌
ಶರ್ಲೆಟ್‌ ಪಿಂಟೋ: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಶಿವಪ್ಪ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ
ಶಿವಲೀಲಾ ವಿನಯ್‌ ಕುಲಕರ್ಣಿ: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ರಘು ಪದಗ್ರಹಣ: ರಾಜ್ಯ ಸಪಾಯಿ ಕರ್ಮಚಾರಿಗಳ ಆಯೋಗದ ನೂತನ ಅಧ್ಯಕ್ಷರಾಗಿ ಪಿ ರಘು ಪದಗ್ರಹಣ ಮಾಡಿದರು. ಬೆಂಗಳೂರು ನಗರದ ಕಾರ್ಪೋರೇಷನ್ ಸರ್ಕಲ್ ಬಳಿ ಇರುವ ಸಪಾಯಿ ಕರ್ಮಚಾರಿಗಳ ಆಯೋಗದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಂವಿಧಾನದ ಪೀಠಿಕೆ ಹಿಡಿದು ನೂತನ ಅಧ್ಯಕ್ಷ ರಘು ಅಧಿಕಾರವಹಿಸಿಕೊಂಡಿದ್ದಾರೆ.

Megha
the authorMegha

Leave a Reply

error: Content is protected !!