NEWSಕೃಷಿನಮ್ಮರಾಜ್ಯಸಿನಿಪಥ

ಹೋರಾಟಗಾರರ ಆತ್ಮಸ್ಥೈರ್ಯ ಕುಗ್ಗಿಸುವ ಸರ್ಕಾರದ ಧೋರಣೆ ಖಂಡನೀಯ: ರೈತ- ಕನ್ನಡಪರ ಸಂಘಟನೆಗಳ ಮುಖಂಡರು

ವಿಜಯಪಥ ಸಮಗ್ರ ಸುದ್ದಿ

ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಈ ಬಗೆಯ ಕ್ರಮಗಳನ್ನು ತಡೆಯಬೇಕು ಹಾಗೂ ಹೋರಾಟಗಾರರ ಮೇಲೆ ಹೂಡಲಾಗಿರುವ ಎಲ್ಲ ಸುಳ್ಳು, ಅನಗತ್ಯ ಮೊಕದ್ದೊಮ್ಮೆಗಳನ್ನು ಹಿಂಪಡೆಯಬೇಕೆಂದು ನಾವು ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ. ಅಲ್ಲದೆ ಈ ಸಂಬಂಧ ಚರ್ಚಿಸಲು ತಕ್ಷಣ ಮುಖ್ಯಮಂತ್ರಿಗಳು ಗೃಹ ಮಂತ್ರಿಗಳ ಸಮ್ಮುಖದಲ್ಲಿ ಎಲ್ಲ ಸಂಘಟನೆಗಳ ಹೋರಾಟಗಾರರ ಸಭೆ ಕರೆಯಬೇಕು

ಬೆಂಗಳೂರು: ಭಾಷೆ, ನೆಲ ಹಾಗೂ ಜಲಗಳ ಹೋರಾಟದ ಮೂಲಕ ಕನ್ನಡ ಕನ್ನಡಿಗ ಮತ್ತು ಕರ್ನಾಟಕದ ಹಿತಕಾಯುವ ಸಾಮೂಹಿಕ ಸಂಘಟನೆಗಳ ಹೋರಾಟಗಳನ್ನು ಹತ್ತಿಕ್ಕಿ ಹೋರಾಟಗಾರರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಸರ್ಕಾರದ ಧೋರಣೆಯನ್ನು ಕರ್ನಾಟಕ -ಜಲ ಸಂರಕ್ಷಣಾ ಸಮಿತಿ ಮುಖಂಡರು ಖಂಡಿಸಿದ್ದಾರೆ.

ಜನಪರ ಹೋರಾಟಗಳು ಪ್ರಜಾತಂತ್ರ ವ್ಯವಸ್ಥೆಯ ಜೀವಾಳ. ಭಾರತದ ಸಂವಿಧಾನವೂ ಸಂಘಟನೆಯನ್ನು ಕಟ್ಟಿಕೊಳ್ಳುವ ಮತ್ತು ಅಭಿವ್ಯಕ್ತಿಸುವ ಸ್ವಾತಂತ್ರ್ಯವನ್ನು ಒಂದು ಮೂಲಭೂತ ಹಕ್ಕನ್ನಾಗಿ ನೀಡಿದೆ. ಸಂವಿಧಾನದ ಸೃಷ್ಟಿಕರ್ತರಾದ ಅಂಬೇಡ್ಕರ್‌ ಅವರು ಶಿಕ್ಷಣ, ಸಂಘಟನೆ ಹಾಗೂ ಹೋರಾಟವನ್ನು ಪ್ರಜಾಪ್ರಭುತ್ವದ ಪ್ರಬಲ ಅಸ್ತ್ರವನ್ನಾಗಿಸಲು ಕರೆ ನೀಡಿದ್ದಾರೆ.

ಆದರೆ, ಪ್ರಸ್ತುತ ಸರ್ಕಾರದ ಕಾರ್ಯವೈಖರಿ ಮತ್ತು ಮನೋಧೋರಣೆಯು ಈ ಎಲ್ಲ ಆಶಯಗಳಿಗೆ ವಿರುದ್ಧವಾಗಿದ್ದು, ಕಳೆದ 6-7 ತಿಂಗಳುಗಳಿಂದ ನ್ಯಾಯಯುತ ಜನಪರ ಹೋರಾಟಗಳನ್ನು ಹತ್ತಿಕ್ಕುವ ಹಾಗೂ ಹೋರಾಟಗಾರರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದೆ. ಸರ್ಕಾರದ ಈ ಧೋರಣೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರದ ಧೋರಣೆಯನ್ನು ಹಿನ್ನೆಲೆಯಲ್ಲಿ, ಅಧಿಕಾರಕ್ಕೆ ಬರುವ ಮೊದಲು ಸಿದ್ದರಾಮಯ್ಯನವರು ಹೋರಾಟಗಳನ್ನು ಪ್ರಜಾತಂತ್ರದ ಜೀವಾಳ ಎಂದು ಬಣ್ಣಿಸಿದ್ದರು, ಹಿಂದಿನ ಬಿಜೆಪಿ ಸರ್ಕಾರ ಹೋರಾಟಗಾರರನ್ನು ದಮನಿಸುವ ಪ್ರಯತ್ನ ನಡೆಸಿದಾಗ, ಹೋರಾಟಗಾರರ ಪರವಾಗಿ ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಟ್ಟಿದ್ದರು.

ಹಿಂದಿನ ಸರ್ಕಾರದ ಇಂಥಹುದೇ ದಮನಕಾರಿ ನೀತಿ ಹಾಗು ಮನೋಧೋರಣೆಯ ವಿರುದ್ಧ ಕೊರೋನಾದಂತಹ ಲಾಕ್ ಡೌನ್ ಸಂದರ್ಭವನ್ನು ಲೆಕ್ಕಿಸದೆ ಮೇಕೆದಾಟು ಪಾದಯಾತ್ರೆಯೂ ಸೇರಿದಂತೆ ಹಲವು ಹೋರಾಟಗಳ ಮೂಲಕ ಪ್ರತಿಭಟಿಸುವ ಹಕ್ಕನ್ನು ಎತ್ತಿ ಹಿಡಿದಿದ್ದ ಇಂದಿನ ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಅವರ ಹಲವು ಸಂಪುಟ ಸಹದ್ಯೋಗಿಗಳು ಇಂದು ಅದೇ ರೀತಿಯ ಹೋರಾಟಗಳನ್ನು ಹತ್ತಿಕ್ಕುವ ಕಾರ್ಯಕ್ಕೆ ಮುಂದಾಗಿರುವುದು ವಿಷಾದನೀಯ ಮತ್ತು ಖಂಡನೀಯ.

ಕಳೆದ, 6-7 ತಿಂಗಳಿಂದ ನಡೆ ಹಲವು ರೈತ, ಕಾರ್ಮಿಕ, ದಲಿತ, ಮಹಿಳಾ ಹಾಗೂ ಸಾಮೂಹಿಕ ಸಂಘಟನೆಗಳಾದ ಅತಿಥಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟದ ನೌಕರರು, ಕನ್ನಡ ಪರ ಸಂಘಟನೆಗಳ ಹೋರಾಟಗಳನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿ ಹತ್ತಿಕ್ಕುತ್ತಿರುವ ಹತ್ತು-ಹಲವು ನಿದರ್ಶನಗಳು ವರದಿಯಾಗಿವೆ.

ಅಧಿಕಾರಕ್ಕೆ ಬಂದ ಕ್ಷಣದಿಂದಲೇ ತನ್ನ ಹಿಂದಿನ ವಿಚಾರಗಳನ್ನು ಹಾಗೂ ನಡೆ-ನುಡಿಗಳನ್ನು ಮರೆತು ಹಿಂದಿನ ಸರ್ಕಾರದ ದಮನಕಾರಿ, ಜನವಿರೋಧಿ ಹಾಗೂ ಪ್ರಜಾತಂತ್ರ ವಿರೋಧಿ ಕ್ರಮಗಳ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿರುವು ಅತ್ಯಂತ ಆತಂಕಕಾರಿ ನಡೆಯಾಗಿದೆ.

ಸಮಾಜದಲ್ಲಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಮೂಲಕ ಸಮಾಜವನ್ನು ಒಡೆಯುವ ಮತ್ತು ಸಾಮರಸ್ಯ ಕದಡುವ ದೇಶದ್ರೋಹಿ ಮತ್ತು ಛಿದ್ರಕಾರಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಬಗ್ಗೆ ಯಾವುದೇ ರಾಜಿಯಿರಬಾರದು. ಆದರೆ, ಭಾಷೆ, ನೆಲ, ಜಲ ಮತ್ತು ಕನ್ನಡ ಕನ್ನಡಿಗ ಮತ್ತು ಕರ್ನಾಟಕದ ಹಿತಕಾಯುವ ಸಾಮೂಹಿಕ ಸಂಘಟನೆಗಳ ಹೋರಾಟಗಳನ್ನು ಹತ್ತಿಕ್ಕಿ ಹೋರಾಟಗಾರರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಸರ್ಕಾರದ ಧೋರಣೆ ಜನ ವಿರೋಧಿ ಧೋರಣೆಯಾಗಿದೆ.

ಇತ್ತೀಚಿನ ಕಾವೇರಿ ನೀರಿನ ಹೋರಾಟ, ಅಂಗನವಾಡಿ-ಬಿಸಿಯೂಟ ನೌಕರರ ಹೋರಾಟ, ಅತಿಥಿ ಶಿಕ್ಷಕರ ಹೋರಾಟ, ಆಡಳಿತ, ಶಿಕ್ಷಣ ಮತ್ತು ದಿನನಿತ್ಯದ ವ್ಯವಹಾರದಲ್ಲಿ ಕನ್ನಡದ ಬಳಕೆ, ಇತ್ಯಾದಿ ಹೋರಾಟಗಳ ಸಂದರ್ಭದಲ್ಲಿ ಹೋರಾಟಗಾರರನ್ನು ನಡೆಸಿಕೊಂಡ ಮತ್ತು ಅವರ ಮೇಲೆ ಅನಗತ್ಯ ಕೇಸುಗಳನ್ನು ದಾಖಲಿಸುವ ಕ್ರಮ ಖಂಡನೀಯ. ರಾಜ್ಯದಲ್ಲಿ ಚುನಾಯಿತ ಸರ್ಕಾರದ ಆಡಳಿತವಿದೆಯೋ ಅಥವಾ ದೊಡ್ಡ ಬಂಡವಾಳಶಾಹಿ ಕಾರ್ಪೋರೇಟ್‌ ವ್ಯಾಪಾರಸ್ಥರ ಮತ್ತು ಅಧಿಕಾರಶಾಹಿ ಆಡಳಿತವಿದೆಯೋ ಎಂಬ ಸಂಶಯ ಮೂಡುತ್ತದೆ.

ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕಾದ ಎಲ್ಲ ಸಾಂಸ್ಥಿಕ ಸಂಸ್ಥೆಗಳು ನಿಷ್ಕ್ರಿಯವಾಗಿದ್ದು ಅವುಗಳನ್ನು ಮತ್ತು ಎಲ್ಲ ಹಂತದ ಅಧಿಕಾರಶಾಹಿಯನ್ನು ಚುರುಕುಗೊಳಿಸುವ ಬದಲು, ಬೆಂಗಳೂರಿನಲ್ಲಿ ನಡೆಯುತ್ತಿರುವ ಕನ್ನಡಪರ ಹೋರಾಟಗಳನ್ನು ಹತ್ತಿಕ್ಕಿ ಕನ್ನಡ ಹೋರಾಟಗಾರರನ್ನು ಬಂಧಿಸುತ್ತಿರುವುದು ಅತ್ಯಂತ ಖಂಡನೀಯ. ಬಂದಿತರನ್ನು ಕೂಡಲೇ ಬಿಡುಗಡೆ ಮಾಡಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು.

ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಈ ಬಗೆಯ ಕ್ರಮಗಳನ್ನು ತಡೆಯಬೇಕು ಹಾಗೂ ಹೋರಾಟಗಾರರ ಮೇಲೆ ಹೂಡಲಾಗಿರುವ ಎಲ್ಲ ಸುಳ್ಳು, ಅನಗತ್ಯ ಮೊಕದ್ದೊಮ್ಮೆಗಳನ್ನು ಹಿಂಪಡೆಯಬೇಕೆಂದು ನಾವು ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ. ಅಲ್ಲದೆ ಈ ಸಂಬಂಧ ಚರ್ಚಿಸಲು ತಕ್ಷಣ ಮುಖ್ಯಮಂತ್ರಿಗಳು ಗೃಹ ಮಂತ್ರಿಗಳ ಸಮ್ಮುಖದಲ್ಲಿ ಎಲ್ಲ ಸಂಘಟನೆಗಳ ಹೋರಾಟಗಾರರ ಸಭೆ ಕರೆಯಬೇಕೆಂದು ರೈತಮುಖಂಡ ಕುರುಬೂರು ಶಾಂತಕುಮಾರ, ಕನ್ನಡ ಅಬಿವೃದಿ ಪ್ರಾದಿಕಾರ ಮಾಜಿ ಅದ್ಯಕ್ಷ ಮುಖ್ಯ ಮಂತ್ರಿ ಚಂದ್ರು, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ., ಸಮತ ಸೈನಿಕ ದಳ ಡಾ.ಎಂ.ವೆಂಕಟಸ್ವಾಮಿ, ಕನ್ನಡ ಚಳವಳಿ ಗುರುದೇವ್‌ ನಾರಾಯಣ್‌, ಶಾಲಾ ಪೋಷಕರ ಸಂಘ ಬಿ.ಎನ್.ಯೋಗಾನಂದ ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ