NEWSದೇಶ-ವಿದೇಶನಮ್ಮರಾಜ್ಯ

ಅಬ್ಬಬ್ಬಾ ಲಾರಿ ಚಾಲನೆ ಜತೆಗೆ ಯೂಟ್ಯೂಬರಾಗಿ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಈತ ಹೊಸ ಮನೆ ಖರೀದಿಸಿದ!!

ವಿಜಯಪಥ ಸಮಗ್ರ ಸುದ್ದಿ

ಸಾಮಾಜಿ ಜಾಲತಾಣ ಅನ್ನೋದೇ ಹಾಗೇ. ಈಗಂತೂ ಯಾರು ಯಾವಾಗ ಫೇಮಸ್ ಆಗುತ್ತಾರೆ ಎಂದು ಹೇಳೋಕೆ ಆಗೋದಿಲ್ಲ ಬಿಡಿ. ಅದೃಷ್ಟ ಅನ್ನೋದೆ ಹಾಗೆಯೇ ಯಾವಾಗ ಯಾರ ಕೈ ಹಿಡಿಯುತ್ತದೆ. ಯಾರ ಕೈ ಬಿಡುತ್ತದೆ ಎಂದು ಹೇಳೋದಕ್ಕೆ ಅಸಾಯ. ಹೀಗೆ ಸುಮ್ಮನೆ ಶುರು ಮಾಡಿದ ಯೂಟ್ಯೂಬ್​ನಿಂದ ಈಗ ತಿಂಗಳಿಗೆ ಲಕ್ಷ ಲಕ್ಷ ಸಂಪದಾನೆ ಮಾಡಬಹುದೆಂದು ಆತನ ಕೂಡ ಊಹಿಸಿರಲಿಲ್ಲ.

ಹೌದು, ಲಾರಿ ಚಾಲಕನಾಗುವುದು ಎಂದರೆ ಅದುಕೂಡ ಸಾಮಾನ್ಯ ಕೆಲಸವಲ್ಲ. ಆದರೆ ಈ ಲಾರಿ ಚಾಲಕ ವೃತ್ತಿಯ ಜತೆಗೆ ತಿಂಗಳಿಗೆ 10 ಲಕ್ಷ ರೂ.ಗಳವರೆಗೆ ಯೂಟ್ಯೂಬ್​ನಿಂದ ಗಳಿಸುತ್ತಿದ್ದಾರ ಒಬ್ಬ ಚಾಲಕ. ಶ್ರಮ ಅನ್ನೋದು ಇದ್ದರೆ ಯಾರು ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

ಲಾರಿ ಚಾಲಕನಾಗಿರುವ ರಾಜೇಶ್ ರವಾನಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್. ಭಾರತದಾದ್ಯಂತ ಟ್ರಕ್ ಓಡಿಸುತ್ತಾ ಸುಮಾರು 20 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ರಾಜೇಶ್ ಅವರು ತಮಗೆ ಅಡುಗೆಯ ಮೇಲಿರುವ ಆಸಕ್ತಿಯನ್ನು ಬಳಸಿಕೊಂಡೇ ವರ್ಲ್ಡ್ ಫೇಮಸ್ ಆಗಿದ್ದಾರೆ ಈಗ.

ಆರ್.ರಾಜೇಶ್ ವ್ಲಾಗ್ಸ್ ಎಂಬ ಹೆಸರಿನ ಚಾನೆಲ್ ಮೂಲಕ ಅವರು ವಿಧವಿಧವಾದ ಅಡುಗೆ ತಯಾರು ಮಾಡುತ್ತಾರೆ. ಜತೆಗೆ ಅಡುಗೆ ಮಾಡುವ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹೀಗಾಗಿ ರಾಜೇಶ್ ಅವರು ಈ ಮೂಲಕ ಯೂಟ್ಯೂಬ್​ನಿಂದ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾರೆ.

ಇನ್ನು, ತಾವು ಲಾರಿ ಚಾಲಕ ವೃತ್ತಿ ಮಾಡುತ್ತಿದ್ದು, ಇದರಿಂದ ತಿಂಗಳಿಗೆ 25 ರಿಂದ 30 ಸಾವಿರ ಸಂಪಾದಿಸುತ್ತಿದ್ದೇನೆ. ಆದರೆ ಯೂಟ್ಯೂಬ್​ನಿಂದ ತಿಂಗಳಿಗೆ 10 ಲಕ್ಷ ರೂ.ವರೆಗೂ ಗಳಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ.

ಇನ್ನು, ಸಖತ್​ ಫೇಮಸ್ ಆಗಿದ್ದ ರಾಜೇಶ್ ಅವರ ಬಗ್ಗೆ ಆನಂದ್ ಮಹೀಂದ್ರ ಅವರು ತಮ್ಮ ಎಕ್ಸ್‌ನಲ್ಲಿ ವಿಡಿಯೋ ಶೇರ್ ಮಾಡಿ, 25 ವರ್ಷಗಳಿಂದ ರಾಜೇಶ್ ರಾವಾನಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಫುಡ್ ಹಾಗೂ ಟ್ರಾವೆಲ್ ವ್ಲಾಗಿಂಗ್ ಮಾಡುತ್ತಾರೆ. ಈಗ ಅವರು ಯೂಟ್ಯೂಬ್​ನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಇರುವ ಯೂಟ್ಯೂಬರ್ ಎಂದು ತಿಳಿಸಿದ್ದಾರೆ.

ಅಲ್ಲದೆ ರಾಜೇಶ್​​ ತಮ್ಮ ಸಂಪಾದನೆಯಿಂದ ಹೊಸ ಮನೆ ಖರೀದಿಸಿದ್ದಾರೆ. ನಿಮ್ಮ ವಯಸ್ಸು ಎಷ್ಟೇ ಇರಲಿ, ನಿಮ್ಮ ಕೆಲಸ ಎಷ್ಟೇ ಕಷ್ಟದ್ದಾಗಿರಲಿ. ಹೊಸ ಟೆಕ್ನಾಲಜಿಗೆ ನಿಮ್ಮನ್ನು ನೀವು ಅಳವಡಿಸಿಕೊಂಡು ಬೆಳೆಯುವುದಕ್ಕೆ ಅಡ್ಡಿಯಿಲ್ಲ ಎಂದು ಅವರು ತೋರಿಸಿಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ