CrimeNEWSನಮ್ಮರಾಜ್ಯ

BMTC: D-4 DM – ವಿಜಯಪಥ ಸಂಪಾದಕರ ವಿರುದ್ಧದ ಪ್ರಕರಣಗಳ ತಡೆಯಾಜ್ಞೆ ವಿಸ್ತರಿಸಿದ ಹೈ ಕೋರ್ಟ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು 2021ರ ಏಪ್ರಿಲ್‌7ರಿಂದ ಸುಮಾರು 14 ದಿನಗಳವರೆ ನಡೆಸಿದ ಮುಷ್ಕರದ ವೇಳೆ ವಿಜಯಪಥ ಮುಖ್ಯ ಸಂಪಾದಕರ ವಿರುದ್ಧ ದಾಖಲಿಸಿದ್ದ ಪ್ರಕರಣ ಸೇರಿದಂತೆ ಸಾರಿಗೆ ನೌಕರರ ಮತ್ತೆರಡು ಪ್ರಕರಣಗಳಿಗೆ ಕರ್ನಾಟಕ ಹೈ ಕೋರ್ಟ್‌ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿದೆ.

ಈ ಮೂಲಕ ಸುಖ ಸುಮ್ಮನೇ ಆರೋಪ ಮಾಡಿ ಅಂದು ಬಿಎಂಟಿಸಿ ಜಯನಗರದ 4ನೇ ಘಟಕದ ವ್ಯವಸ್ಥಾಪಕ ಪ್ರಶಾಂತ್‌, ಘಟಕದ ನಿರ್ವಾಹಕ ಎಸ್‌.ಜೆ. ಮೇಟಿಯನ್ನು ವಿಜಯಪಥ ಸಂಪಾದಕರು ಡ್ಯೂಟಿ ಮಾಡುತ್ತಿದ್ದಾಗ ತಡೆದು ಡ್ಯೂಟಿ ಮಾಡದಂತೆ ಬೆದರಿಕೆ ಹಾಕಿದ್ದರು ಎಂದು ಸುಳ್ಳು ದೂರು ನೀಡಿದ್ದರು.

ಆ ಬಗ್ಗೆ ವಿಚಾರಣೆ ಮಾಡದ ತಿಲಕ್‌ನಗರ ಪೊಲೀಸ್‌ಠಾಣೆ ಐಒ ವಿಜಯಪಥ ಸಂಪಾದಕರ ಫೋನ್‌ನಂಬರ್‌ ಮಾಹಿತಿಯನ್ನು ಏರ್‌ಟೆಲ್‌ಕಚೇರಿಯಿಂದ ಪಡೆದು ಅದರಲ್ಲಿ ಅಂದು ಯಾರ ಜತೆ ಮಾತನಾಡಿದ್ದಾರೆ ಎಂಬುದನ್ನು ಪರಿಶೀಲಿಸಿದ್ದಾರೆ. ಆ ವೇಳೆ ಪ್ರಶಾಂತ್‌ ಮತ್ತು ಎಸ್‌.ಜೆ. ಮೇಟಿ ಅವರ ಜತೆ ಯಾವುದೇ ಸಂಭಾಷಣೆ ನಡೆಸಿರುವುದು ಕಂಡು ಬರದಿದ್ದರು ಡ್ಯೂಟಿ ಮಾಡುವುದಕ್ಕೆ ಅಡ್ಡಿ ಪಡಿಸಿದರು ಎಂಬ ದೂರಿನ ಆಧಾರದ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡು ಬಳಿಕ ಚಾರ್ಜ್‌ಶೀಟ್‌ಕೂಡ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

H B Shivaraju, Advocate.

ಇದರ ವಿರುದ್ಧ ಹೈ ಕೋರ್ಟ್‌ಮೆಟ್ಟಿಲೇರಿದ ವಿಜಯಪಥ ಸಂಪಾದಕರ ಪರ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್.ಬಿ.ಶಿವರಾಜು ಅವರು ವಕಾಲತ್ತು ವಹಿಸಿದ್ದು, ಮತ್ತೆ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ನಟರಾಜನ್‌ ಅವರು ಪ್ರಕರಣದ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶಿಸಿದ್ದಾರೆ.

ಅದೇ ರೀತಿ ಕೆಎಸ್‌ಆರ್‌ಟಿಸಿ ನೌಕರ ವಿಜಯ ಕುಮಾರ್‌ ಮತ್ತು ಇತರರ ವಿರುದ್ಧ ಕುಂಬಳಗೋಡು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಮತ್ತೊಬ್ಬ ಸಾರಿಗೆ ನೌಕರ ನಾಗೇಂದ್ರಸ್ವಾಮಿ ವಿರುದ್ಧ ಕೇಂಗೇರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದವೂ ಕೂಡ ಗುರುವಾರ ಹೈಕೋರ್ಟ್‌ನ ನ್ಯಾಯಮೂರ್ತಿ ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ಮತ್ತೆ ಬಂದಿದ್ದರಿಂದ ಈ ನೌಕರರಿಗೂ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಒಟ್ಟಾರೆ ಈ ಪ್ರಕರಣಗಳಲ್ಲೂ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್.ಬಿ.ಶಿವರಾಜು ಅವರು ವಕಾಲತ್ತು ವಹಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ