CrimeNEWSನಮ್ಮಜಿಲ್ಲೆ

KSRTC ಓವರ್‌ ಟೇಕ್‌ ಮಾಡುವ ವೇಳೆ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ಬಸ್‌ಗಳ ನಡುವೆ ಓವರ್​ ಟೇಕ್ ಮಾಡುವಾಗ ಘರ್ಷಣೆ ಸಂಭಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿಯ ಮಾದಾವರದ ಬಳಿ ಇಂದು ಮುಂಜಾನೆ ನಡೆದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ಎಲ್ಲ ಪ್ರಯಾಣಿಕರು ಪಾರಾಗಿದ್ದಾರೆ. ಮಾದಾವರದ ಹೆದ್ದಾರಿಯಲ್ಲಿ ಒಂದು ‌ಕೆಎಸ್​ಆರ್​‌ಟಿಸಿ ಬಸ್ ಅನ್ನು, ಇನ್ನೊಂದು ಬಸ್​ ಓವರ್ ಟೇಕ್ ಮಾಡುತ್ತಿತ್ತು. ಆಗ ಎರಡು ಬಸ್​ಗಳ ನಡುವೆ ಭಯಾನಕ ಅಪಘಾತವಾಗಿದೆ. ಇದರಿಂದ ಎರಡು ಬಸ್​ಗಳು ಮೇಲು ಸೇತುವೆಯ ಡಿವೈಡರ್​​ಗೆ ಡಿಕ್ಕಿ ಹೊಡೆದು ಹೆದ್ದಾರಿಗೆ ಅಡ್ಡವಾಗಿ ನಿಂತಿವೆ.

ಈ ಅವಘಡದಿಂದ ಬೇರೆ ವಾಹನಗಳು ಹೆದ್ದಾರಿಯಲ್ಲಿ ಚಲಿಸದಂತೆ ಆಗಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇಂದು ಭಾನುವಾರವಾದ್ದರಿಂದ ತೀರ್ಥ ಕ್ಷೇತ್ರಕ್ಕೆ, ದೇವಾಲಯಗಳಿಗೆ ಹೋಗುತ್ತಿದ್ದ ಸವಾರರು, ಪ್ರಯಾಣಿಕರಿಗೆ ಬಸ್​ಗಳ ಅಪಘಾತದಿಂದ ಟ್ರಾಫಿಕ್ ಬಿಸಿ ತಟ್ಟಿದೆ‌.

Leave a Reply

error: Content is protected !!