ಹಾಸನ: ಹಾಸನ ಹೊರವಲಯದ ಈಚನಹಳ್ಳಿ ಬಳಿ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜು ಆಗಿದೆ. ಮೃತದೇಹಗಳನ್ನು ಹೊರಗೆ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಕಾರಿನಲ್ಲಿದ್ದ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಮತ್ತು ಒಂದು ಮಗು ಮೃತಪಟ್ಟಿದೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿದ್ದು, ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಮೂವರು ಮಹಿಳೆ, ಇಬ್ಬರು ಪುರುಷರು, ಒಂದು ಮಗು ಕೂಡ ಮೃತಪಟ್ಟಿದೆ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ಕುಟುಂಬ ತೆರಳಿತ್ತು. ವಾಪಸ್ ಊರಿಗೆ ಮರಳುವಾಗ ನಿದ್ರೆ ಮಂಪರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಮೃತರು ಹೊಸಕೋಟೆ ತಾಲೂಕಿನ, ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು. ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಬಾಲಕ ಚೇತನ್, ಡ್ರೈವರ್ ರಾಕೇಶ್ ಮೃತರು ಎಂದು ತಿಳಿದು ಬಂದಿದೆ.
ಅಪಘಾತ ಹೇಗಾಯಿತು?: ಮಂಗಳೂರಿನಿಂದ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಟ್ರಕ್‌ಗೆ ಗುದ್ದಿದೆ. ಟ್ರಕ್‌ಗೆ ಡಿಕ್ಕಿಯಾದ ರಭಸಕ್ಕೆ ಕಾರು ಹಾಗೂ ಕಾರಿನಲ್ಲಿದ್ದವರ ಮೃತದೇಹ ಛಿದ್ರ, ಛಿದ್ರವಾಗಿದೆ. ನಜ್ಜುಗುಜ್ಜಾದ ಕಾರಿನಲ್ಲಿದ್ದ ಮೃತದೇಹಗಳನ್ನು ಹೊರಗೆ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
MH-46-BM3875 ನಂಬರ್‌ನ ಕಂಟೇನರ್ ನೆಲಮಂಗಲದಿಂದ ಮಂಗಳೂರಿನ ಕಡೆಗೆ ಸಾಗುತ್ತಿತ್ತು. KA-53-C-1419 ನಂಬರ್‌ನ ಈಟೀಸ್ ಕಾರು ಮಂಗಳೂರಿನಿಂದ ಆಗಮಿಸುತ್ತಿದ್ದು ಕಾರಿನ ಚಾಲಕ ನಿದ್ದೆಗಣ್ಣಲ್ಲಿ ಡಿವೈಡರ್‌ಗೆ ಗುದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.