CRIMENEWSದೇಶ-ವಿದೇಶ

ಸೂಪರ್ ಮಾರ್ಕೆಟ್​​ನಲ್ಲಿ ಸ್ಫೋಟ: 23 ಮಂದಿ ಸಜೀವ ದಹನ, 17 ಜನರ ಸ್ಥಿತಿ ಗಂಭೀರ

ವಿಜಯಪಥ ಸಮಗ್ರ ಸುದ್ದಿ

ಹೆರ್ಮೊಸಿಲ್ಲೊ: ಮೆಕ್ಸಿಕೋ ಸೂಪರ್ ಮಾರ್ಕೆಟ್​​ನಲ್ಲಿ ಭಯಾನಕ ಸ್ಫೋಟ ಸಂಭವಿದ ಪರಿಣಾಮ 23 ಜನರು ಸಜೀವದಹನಗೊಂಡಿದ್ದು, 17 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ವಾಯುವ್ಯ ಮೆಕ್ಸಿಕೋದ ಹೆರ್ಮೊಸಿಲ್ಲೊ ನಗರದ ಸಿಟಿ ಸೆಂಟರ್​ನ ರಿಯಾಯತಿ ದರದ ಅಂಗಡಿ ವಾಲ್ಡೋ ಸ್ಟೋರ್​ನಲ್ಲಿ ಈ ಭಯಾನಕ ಸ್ಫೋಟ ಸಂಭವಿಸಿ ಬಳಿಕ ಹೊತ್ತಿಕೊಂಡ ಬೆಂಕಿಯಿಂದ ಮಕ್ಕಳು ಸೇರಿದಂತೆ 23 ಜನರು ಸಜೀವ ದಹನಗೊಂಡಿದ್ದು, 17 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಾರದ ಕೊನೆ ದಿನವಾಗಿದ್ದರಿಂದ ಮೆಕ್ಸಿಕೋ ಜನರು ತಮ್ಮ ಕುಟುಂಬದಲ್ಲಿ ಮೃತಪಟ್ಟವರ ಸ್ಮರಣೆ ದಿನಾಚರಣೆ ಮಾಡಲು ಸಿದ್ಧತೆಯ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಸಾಮಗ್ರಿಗಳನ್ನು ಖರೀದಿಸಲು ನಗರದ ಸಿಟಿ ಸೆಂಟರ್​ನಲ್ಲಿನ ರಿಯಾಯತಿ ದರದ ಅಂಗಡಿ ವಾಲ್ಡೋ ಸ್ಟೋರ್​ಗೆ ಬಂದಿದ್ದರು. ಇಂದೆಂದಿಗಿತ್ತಲೂ ಹೆಚ್ಚಿನ ಜನ ಸೇರಿದ್ದರು. ಇದೇ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ್ದರಿಂದ ಮಕ್ಕಳು ಸೇರಿ 23 ಮಂದಿ ಕೊನೆಯುಸಿರೆಳೆದಿದ್ದಾರೆ.

ಇನ್ನು ಈ ಘಟನೆಯಲ್ಲಿ ಹೆಚ್ಚಿನ ಮಂದಿ ವಿಷಕಾರಿ ಅನಿಲವನ್ನು ಉಸಿರಾಡಿದ್ದರಿಂದ ಮೃತಟ್ಟಿದ್ದಾರೆ ಎಂದು ರಾಜ್ಯದ ಅಟಾರ್ನಿ ಜನರಲ್ ಗುಸ್ತಾವೊ ಸಲಾಸ್ ಹೇಳಿದ್ದಾರೆ.

ಘಟನೆ ಈ ಸಂಬಂಧ ಪಾರದರ್ಶಕ ತನಿಖೆ ಆಗಬೇಕು. ಪ್ರಾಣ ಕಳೆದುಕೊಂಡ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ ಎಂದು ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಶೋಕ ಸಂತಾಪ ಸೂಚಿಸಿದ್ದಾರೆ.

ಈ ಭಯಾನಕವಾದ ಸ್ಫೋಟ ಸಂಭವಿಸಿದಾಗ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸೂಪರ್ ಮಾರ್ಕೆಟ್​ನಲ್ಲಿದ್ದ ಹಲವು ಸಜೀವ ದಹನಗೊಂಡಿದ್ದಾರೆ ಎಂದ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ 40 ಸಿಬ್ಬಂದಿ, 10 ಆಂಬುಲೆನ್ಸ್​ಗಳು ರಕ್ಷಣಾಕಾರ್ಯ ನಡೆಸಿ 17 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಆದರೆ ಸ್ಫೋಟ ಹೇಗೆ ಸಂಭವಿಸಿದೆ ಎನ್ನುವುದು ಈಗಲೂ ನಿಗೂಢವಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ ಎಂದು ಹೇಳಲಾಗುತ್ತಿದೆ.

Megha
the authorMegha

Leave a Reply

error: Content is protected !!