ನ್ಯೂಡೆಲ್ಲಿ: ದೆಹಲಿಯ ವಿಮಾನ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಬೆಂಗಳೂರಿಗೆ ಹೋಗಲು ಜ.21ರ ರಾತ್ರಿ 9ಗಂಟೆಗೆ ಹೊರಡಬೇಕಾಗಿದ್ದ ಸ್ಪೈಸ್ ಜಟ್ ವಿಮಾನ ವಿರಡದೆ ರಾತ್ರಿಯಿಡಿ ಪರದಾಡಿದನಡೆದಿದೆ.
ರಾತ್ರಿ 9ಕ್ಕೆ ಹೊರಡಬೇಕಿದ್ದ ವಿಮಾನದ ಸಮಯ ಬದಲಾಗಿದೆ 10 ಗಂಟೆಗೆ ಹೊರಡುತ್ತದೆ ಎಂದು ಮಾಹಿತಿ ನೀಡಿದರು, ಆ ಬಳಿಕ ಮತ್ತೆ 11 ಗಂಟೆಗೆ ಎಂದು ಎರಡು ಬಾರಿ ಸಮಯವನ್ನು ಮುಂದೂಡಿದರು. ಆಗಲು ವಿಮಾನ ಹೊರಡದೇ ಮಾರನೇ ದಿನ ಅಂದರೆ ಇಂದು ಜ.22ರ ಬೆಳಗ್ಗೆ ಆರು ಗಂಟೆಗೆ ಹೊರಡುತ್ತದೆ ಎಂದು ಪ್ರಯಾಣಿಕರಿಗೆ ಮಾಹಿತಿ ನೀಡಿದರು.
ಇದರಿಂದ ಆಕ್ರೋಶಗೊಂಡ ನೂರಕ್ಕೂ ಹೆಚ್ಚು ಪ್ರಯಾಣಿಕರು ಸ್ಪೈಸ್ ಜೆಟ್ ವ್ಯವಸ್ಥಾಪಕರ ಜತೆ ವಾಗ್ವಾದ ನಡೆಸಿದರು, ವಿಳಂಬಕ್ಕೆ ಕಾರಣ ಏನು ಎಂದು ಕೇಳಿದರು ಸರಿಯಾಗಿ ಉತ್ತರ ನೀಡಲಿಲ್ಲ.
ಪ್ರಯಾಣಿಕರು ರಾತ್ರಿಯಲ್ಲ ವಿಮಾನ ನಿಲ್ದಾಣದ ಕುರ್ಚಿಗಳಲ್ಲಿ ಕುಳಿತು ಸಮಯ ಕಳೆಯಬೇಕಾಯಿತು. ರಾತ್ರಿ ಎಲ್ಲ ಕಾದು ವ್ಯವಸ್ಥಾಪಕರ ಜತೆ ವಾಗ್ವಾದ ಮಾಡಿದರು ಪ್ರಯೋಜನಕ್ಕೆ ಬರಲಿಲ್ಲ.
ನಾನು ಕೂಡ ಈ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ ಕಾರಣ ಈ ಪರಿಸ್ಥಿತಿಯನ್ನು ಅನುಭವಿಸಬೇಕಾಯಿತು ಎಂದು ರೈತ ಮುಖಂಡ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಸ್ಪೈಸ್ ಜೆಟ್ ಸಂಸ್ಥೆಯ ಮುಖ್ಯಸ್ಥರ ದೂರವಾಣಿ ಸಂಖ್ಯೆಯನ್ನು ಸಹ ನೀಡಲಿಲ್ಲ, ವಿಮಾನ ನಿಲ್ದಾಣ ಭದ್ರತಾಧಿಕಾರಿಗಳು ಈ ಬಗ್ಗೆ ಯಾವುದೇ ಗಂಭೀರ ಕ್ರಮ ಕೈಗೊಳ್ಳಲಿಲ್ಲ ಅವರ ಬೇಜವಾಬ್ದಾರಿತನ ಎದ್ದು ಕಾಣುತ್ತಿತ್ತು.
ಕೇಂದ್ರ ಸರ್ಕಾರದ ವಿಮಾನಯಾನ ಸಚಿವರು ಇಂತಹ ಸಂಸ್ಥೆಗಳ ರಹದಾರಿ ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ನೊಂದ ಪ್ರಯಾಣಿಕರು ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರದ ಗಮನ ಸೆಳೆಯಲು ಯತ್ನಿಸುತ್ತಿದ್ದರು ಎಂದು ತಿಳಿಸಿದ್ದಾರೆ.