NEWSನಮ್ಮರಾಜ್ಯಸಿನಿಪಥ

ವರ್ಷ ನಾಲ್ಕಾದರೂ ಮರೆಯದ ನೆನಪು ನೂರಾರು: ಪುನೀತ್‌ ಸ್ಮರಿಸಿದ ಸಹೋದರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಇಂದಿಗೆ (ಅ.29) 4 ವರ್ಷ ಕಳೆದಿದೆ. ಈ ಸ್ಮರಣಾರ್ಥ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ ನೆರವೇರಿತು.

ವರ್ಷ ನಾಲ್ಕು ಮರೆಯದ ನೆನಪು ನೂರಾರು ಎಂದು ಸಹೋದರ ಪುನೀತ್‌ ಅವರನ್ನು ಸ್ಮರಿಸಿದ್ದಾರೆ. ಅಲ್ಲದೆ ಅಪ್ಪ ಮಾಡಿರುವ ಪುಣ್ಯಕೆಲಸವನ್ನು ಅಭಿಮಾನಿಗಳು ಒಬ್ಬರಿಗಾದರೂ ಮಾಡಿ ನೆರವಾಗಿ ಎಂದು ರಾಘವೇಂದ್ರ ರಾಜ್‌ಕುಮಾರ್‌ (ರಾಘಣ್ಣ) ಕರೆ ನೀಡಿದರು.

ಇನ್ನು ನಾವು ಪುನೀತ್ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಹೇಗೆ ದಿನಗಳು ಉರುಳುತ್ತಿವೆ. ಆದರೂ ಜನಗಳಿಗೆ ಅಪ್ಪು ಮೇಲಿನ ಪ್ರೀತಿ ಕಮ್ಮಿಯಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಅಪ್ಪು ಮೇಲಿನ ಪ್ರೀತಿ ಹೆಚ್ಚಾಗುತ್ತಲೇ ಇದೆ. ವರ್ಷ ಮೂರು ಮರೆಯದ ನೆನಪು ನೂರಾರು ಎಂದು ಅಪ್ಪು ಅವರ ನನೆದರು ರಾಘಣ್ಣ.

ಪ್ರತಿದಿನ ಆತ ಶಾರೀರಿಕವಾಗಿ ಇಲ್ಲವಲ್ಲವೆಂಬ ನೋವಿನಲ್ಲೇ ನಾವು ಕಾಲ ಕಳೆಯುತ್ತಿದ್ದೇವೆ. ಪುನೀತ್ ಕೊಟ್ಟ ಸ್ಫೂರ್ತಿ ಹಿನ್ನೆಲೆಯಲ್ಲಿ ಅಪ್ಪು ಹುಟ್ಟುಹಬ್ಬವನನ್ನು ಸ್ಫೂರ್ತಿ ದಿನವಾಗಿ ಆಚರಿಸುತ್ತೇವೆ. ನಿಮ್ಮ ಪ್ರೀತಿಗೆ ಬೆಲೆ ಕಟ್ಟೋಕೆ ಆಗೋಲ್ಲ. ಅಪ್ಪು ನಮ್ಮ ಮನೆಗೆ ಮಾತ್ರ ಅಲ್ಲ, ಎಲ್ಲರಿಗೂ ಬೇಕು ಎಂದು ಸ್ಮರಿಸಿದರು.

ಅಂದಹಾಗೆ, 2021ರ ಅ.29ರಂದು ಪುನೀತ್ ರಾಜ್‌ಕುಮಾರ್ ಅವರು ನಿಧನರಾದರು. ಕರುನಾಡ ಕಿರುನಗೆ ಕಣ್ಮರೆಯಾದ ದಿನವದು. ನಗುವಿನ ಅರಸನ ಅಗಲಿಕೆಗೆ ಭರ್ತಿ ನಾಲ್ಕು ವರ್ಷ. 4 ವರ್ಷವಲ್ಲ, ಇನ್ನೂ ನೂರು ವರ್ಷ ಕಳೆದರೂ ಅಪ್ಪು ಮರೆಯಲಾಗದ ಮಾಣಿಕ್ಯ. 4ನೇ ವರ್ಷದ ಅಪ್ಪು ಪುಣ್ಯ ಸ್ಮರಣೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಭಾಗಿಯಾಗಿದ್ದಾರೆ.

ನಗುಮೊಗದ ಒಡೆಯ ಪುನೀತ್‌ ಸ್ಟಾರ್ ಬ್ಯಾಕ್‌ಗ್ರೌಂಡ್‌ನಿಂದ ಬಂದಿದ್ದರೂ ಹಮ್ಮು ಬಿಮ್ಮಿಲ್ಲದೇ ಎಲ್ಲರನ್ನೂ ತನ್ನವರೆಂದು ಬಾಚಿ ತಬ್ಬಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರನ್ನು ಎಲ್ಲರೂ ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಿದ್ದರು. ಅಪ್ಪು ಕಳೆದುಕೊಂಡು ಇಂದಿಗೆ ಮೂರು ವರ್ಷಗಳು. ಆದರೂ ಕೂಡಾ ಅವರನ್ನು ಕಳೆದುಕೊಂಡ ದುಃಖ ಮಾತ್ರ ಅವರ ಭಕ್ತಗಣದ ಎದೆಯಿಂದ ಜಾರುತ್ತಿಲ್ಲ.

ಅಪ್ಪು 4ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಪತ್ನಿ ಅಶ್ವಿನಿ, ವಿನಯ್ ರಾಜ್‌ಕುಮಾರ್, ಯುವರಾಜ್ ಕುಮಾರ್, ಅಪ್ಪು ಪುತ್ರಿಯರು ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಇಷ್ಟದ ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಸಮಾಧಿಯನ್ನ ವಿಶೇಷವಾಗಿ ಹೂವುಗಳಿಂದ, ದೀಪಗಳಿಂದ ಅಲಂಕಾರ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡು ಅಪ್ಪು ಸಮಾಧಿ ಬಳಿ ಜಮಾಯಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದೆ.

ಅಪ್ಪು ಇಲ್ಲ ಎಂದು ಅವರ ಅಭಿಮಾನಿಗಳು ಸುಮ್ಮನೆ ಕುಳಿತಿಲ್ಲ. ಅವರ ಹೆಸರಿನಲ್ಲಿ ಸಾಕಷ್ಟು ಪುಣ್ಯದ ಕೆಲಸಗಳನ್ನು ವರ್ಷಪೂರ್ತಿ ಮಾಡುತ್ತಿದ್ದಾರೆ. ಇಂದು ಪುಣ್ಯ ಸ್ಮರಣೆ ವಿಶೇಷವಾಗಿ ಕಂಠೀರವ ಸ್ಟುಡಿಯೋದಲ್ಲಿ ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲೂ ಅನ್ನದಾನ, ರಕ್ತದಾನ ಶಿಬಿರಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಅಪ್ಪು ಅಭಿಮಾನಿ ಯಲಗಚ್ಚಿನಲ್ಲಿ ಗುಡಿಯೊಂದನ್ನು ಕಟ್ಟಿ ಅಭಿಮಾನ ಮೆರೆದಿದ್ದಾನೆ. ಅಲ್ಲೂ ಕೂಡಾ ಇಂದು ವಿಶೇಷ ಪೂಜೆ ನಡೆಯುತ್ತಿದೆ.

Megha
the authorMegha

Leave a Reply

error: Content is protected !!