7ನೇ ವೇತನ ಆಯೋಗದಂತೆ ಸಂಬಳ ಕೊಟ್ಟರೆ ಅದು KSRTC ಅಧಿಕಾರಿಗಳಿಗಷ್ಟೇ ಸೀಮಿತವಾಗಲ್ಲ ನೌಕರರಿಗೂ ಸಿಗುತ್ತದೆ!

ಬೆಂಗಳೂರು: ಸಾರಿಗೆ ಅಧಿಕಾರಿಗಳಿಗಷ್ಟೇ 7ನೇ ವೇತನ ಆಯೋಗದ ಮಾದರಿಯಲ್ಲಿ ಸಂಬಳ ಕೊಡಿ ಎಂದಷ್ಟೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಕೆಎಸ್‌ಆರ್‌ಟಿಸಿ ಆಫೀಸರ್ಸ್ ವೆಲ್ಫೇರ್ ಅಸೋಶಿಯೇಶನ್ ಪದಾಧಿಕಾರಿಗಳು ಒತ್ತಾಯಿಸಿಲ್ಲ ಅಧಿಕಾರಿಗಳು/ಸಿಬ್ಬಂದಿಗಳು/ನೌಕರರಿಗೂ ಕೊಡಿ ಎಂದೇ ವಿವರಿಸಿದ್ದಾರೆ.
ಆದರೆ, ಕೆಲ ನೌಕರರು ಅದನ್ನು ಸರಿಯಾಗಿ ತಿಳಿದುಕೊಳ್ಳದೆ ಇದು ಬರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಬಿಂಬಿಸುತ್ತಿದ್ದಾರೆ. ನೋಡಿ ಇದು ಹೇಳಿ ಕೇಳಿ ಆಫೀಸರ್ಸ್ ವೆಲ್ಫೇರ್ ಅಸೋಶಿಯೇಶನ್ ಆಗಿರುವುದರಿಂದ ಈ ರೀತಿ ಮನವಿ ಸಲ್ಲಿಸುವುದು ಸಾಮಾನ್ಯ.
ಈ ಮನವಿ ಸಲ್ಲಿಸುವ ವೇಳೆ 15 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ ಅದನ್ನು ನೌಕರರು ಗಮನಿಸಬೇಕು. ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಸರಕಾರದ ಹಾಗೂ ನೌಕರರ ಪಾತ್ರ ಅಪಾರವಾಗಿದ್ದು, ತನ್ನ ಕಾಲ ಮೇಲೆ ತಾನು ನಿಲ್ಲಲು, ಇದರಲ್ಲಿ ಕೇವಲ ಒಂದು ವರ್ಗದ ಹಿತಾಸಕ್ತಿ ಇರುವುದಿಲ್ಲ, ಎಲ್ಲ ವರ್ಗದ ಅಧಿಕಾರಿ/ಸಿಬ್ಬಂದಿ/ನೌಕರರ ಹಾಗೂ ಅವರ ಕುಟುಂಬದವರ ಜೀವನದ ಪ್ರಶ್ನೆಯಾಗಿರುವುದಲ್ಲದೇ ಹಾಗೂ ನಾಡಿನ ಜನತೆಯ ಜೀವನಾಡಿಯಾದ ಸಾರಿಗೆ ಸಂಸ್ಥೆಯ ಉಳಿವಿನ ಪ್ರಶ್ನೆಯೂ ಇದಾಗಿದೆ.
ಸರಕಾರ ಈ ಇಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ. ಈ ಮುಳಗುತ್ತಿರುವ ಹಡಗು ಮತ್ತೆ ಪ್ರಯಾಣಿಸಲು ಸಾಧ್ಯ. ಕಾರಣ ಈ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಹಾಗೂ ಅಧಿಕಾರಿಗಳ ಬೇಡಿಕೆ ಈಡೇರಿಸಿ ಅವರ ಮನೋಸ್ಥೆರ್ಯ ಹೆಚ್ಚಿಸಲು ತಮ್ಮಲ್ಲಿ ಈ ಮೂಲಕ ಕೋರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಜತೆಗೆ ಸಂಸ್ಥೆಯಲ್ಲಿ ಅಧಿಕಾರಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯವಿದ್ದು, ಸಹಜವಾಗಿ ಆನಾರೊಗ್ಯಕ್ಕೆ ತುತ್ತಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ವೆಚ್ಚಗಳನ್ನು ಮುರುಪಾವತಿಸಲು ಹಾಲಿ ನಿಯಮಗಳಲ್ಲಿ ಹಲವಾರು ನಿರ್ಬಂಧಗಳಿದ್ದು, ಹಾಲಿ ನಿರ್ಬಂಧಗಳನ್ನು ಸಡಿಲಗೊಳಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ ಸಂದರ್ಭಗಳಲ್ಲಿ CGHS ದರಗಳನ್ವಯ ಅವರುಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಅಂದರೆ ಇಲ್ಲಿ ಅಧಿಕಾರಿಗಳಿಗೆ ಮಾತ್ರ ವೈದ್ಯಕೀಯ ಸೌಲಭ್ಯ ಕೊಡಿ ಎಂದು ಅವರು ಹೇಳಿಲ್ಲ ಸಿಬ್ಬಂದಿಗಳಿಗೂ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಇದನ್ನು ತಪ್ಪಾಗಿ ತಿಳಿದುಕೊಂಡು ಇಲ್ಲ ಸಲ್ಲದ ರೀತಿ ಆರೋಪ ಮಾಡುವುದು ನೌಕರರಿಗೆ ಬುದ್ಧಿ ಇಲ್ಲ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಆರೋಪ ಮಾಡುವ ಮುನ್ನ ಯೋಚಿಸಿ ತಿಳಿದುಕೊಂಡು ಬಳಿಕ ಆರೋಪ ಮಾಡಿ ಎಂದು ನೌಕರರೇ ಅಸಮಾಧಾನದಿಂದ ತಿಳಿ ಹೇಳುತ್ತಿದ್ದಾರೆ.
ಇನ್ನು ಈವರೆಗೂ ವೇತನ ಅಥವಾ ಸಂಸ್ಥೆಯಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಳೆದ 40 ವರ್ಷಗಳಿಂದಲೂ ಒಂದೇಒಂದು ಮನವಿಯನ್ನು ಕೊಡದ ಅಧಿಕಾರಿಗಳ ಸಂಘ ಈಗ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿಕೊಡಬೇಕು ಎಂದು ಮುಂದೆ ಬಂದು ಸರ್ಕಾರಕ್ಕೆ ಮತ್ತು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದೆ ಎಂದರೆ ಆ ಮನವಿಯಿಂದ ಕೇವಲ ಅಧಿಕಾರಿಗಳಿಗಷ್ಟೇ ಲಾಭವಾಗುವುದಿಲ್ಲ ಸಮಸ್ತ ನಾಲ್ಕೂ ನಿಗಮಗಳ ನೌಕರರಿಗೂ ಲಾಭವಾಗುತ್ತದೆ. ಇದನ್ನು ಮೊದಲು ತಿಳಿದುಕೊಳ್ಳಿ.
ಕಾರಣ ಈವರೆಗೂ ನೌಕರರು ವೇತನ ಹೆಚ್ಚಳದ ಸಮಯದಲ್ಲಿ ಹೋರಾಟ ಮಾಡಿ ವೇತನ ಹೆಚ್ಚಾದಾಗ ಅದು ಅಧಿಕಾರಿಗಳಿಗೂ ಅನ್ವಯವಾಗುತ್ತಿತ್ತು. ಅದರಂತೆ ಈಗ 7 ನೇ ವೇತನ ಆಯೋಗ ಜಾರಿಯಾದರೆ ಅದು ನೌಕರರಿಗೂ ಅನ್ವಯಿಸಲಿದೆ. ಆದರೆ ನೌಕರರ ಪರ ಸಂಘಟನೆಗಳು ಎಂದು ಹೇಳಿಕೊಳ್ಳುವ ಮುಖಂಡರು ಮಧ್ಯೆ ಕಡ್ಡಿಯಾಡಿಸಬಾರು ಅಷ್ಟೆ.
ಇಲ್ಲ ಅಧಿಕಾರಿಗಳನ್ನು ಒಂದು ಗುಂಪು ಮಾಡಿ ನೌಕರರನ್ನು ಮತ್ತೊಂದು ಗುಂಪು ಮಾಡಿ ನೌಕರರಿಗೆ ಅಗ್ರಿಮೆಂಟ್ ಮೂಲಕವೇ ವೇತನಕೊಡಿ ಎಂದು ಕೇಳಬಾರದು. ಅಧಿಕಾರಿಗಳಿಗೆ ಏನು ಕೊಡುತ್ತೀರೋ ಅದೇ ರೀತಿ ನೌಕರರಿಗೂ ಕೊಡಬೇಕು ಎಂದು ಒತ್ತಾಯಿಸಬೇಕು. ಈ ಒತ್ತಾಯ ಮಾಡದಿದ್ದರೂ ಅಧಿಕಾರಿಗಳಿಗೆ ಸಿಗುವ ಸೌಲಭ್ಯಗಳು ತನ್‌ತಾನೆ ನೌಕರರಿಗೂ ಜಾರುಯಾಗುತ್ತವೆ.
ಇನ್ನು ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸಂಸ್ಥೆಯ ಮಂಡಳಿಗಳಿದ್ದು, ಈ ಮಂಡಳಿಗಳಿಗೆ ಸರ್ಕಾರದಿಂದ ನೇಮಿಸಲ್ಪಟ್ಟ ಅಧಿಕಾರಿ/ಅಧಿಕಾರೇತರ ನಿರ್ದೇಶಕರು ಇದ್ದು, ಸಂಸ್ಥೆಯ ನಿಲುವುಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ, ಸಂಸ್ಥೆಯ ನಿಲುವುಗಳನ್ನು ಪರಿಣಾಮಕಾರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ, ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ನಾಮನಿರ್ದೇಶನಗೊಂಡ ಒಬ್ಬ ಅಧಿಕಾರಿಯನ್ನು ಹಾಗೂ ನೌಕರರ ವರ್ಗದವರಿಂದ ನಾಮನಿರ್ದೇಶನಗೊಂಡ ಒಬ್ಬ ನೌಕರನನ್ನು ಸಂಸ್ಥೆಯ ನಿರ್ದೇಶಕ ಮಂಡಳಿಗೆ ನಾಮನಿರ್ದೇಶನ ಮಾಡಬೇಕು ಇದರಿಂದ ಅಧಿಕಾರಿಗಳ ಹಾಗೂ ನೌಕರರ ಹಿತ ಕಾಪಾಡಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ.
ಅಂದರೆ ಇದೆಲ್ಲ ಬರಿ ಅಧಿಕಾರಿಗಳಿಗಾಗಿ ಸಲ್ಲಿಸಿರುವ ಮನವಿ ಪತ್ರವೇ? ಅಲ್ಲತಾನೆ. ಇದು ನೌಕರರಿಗೂ ಅನುಕೂಲವಾಗಲಿದೆ ಎಂದು ಇಲ್ಲಿ ಅಧಿಕಾರಿಗಳು ನೌಕರರು ಎಂಬ ಬೇಭಾವವಿಲ್ಲದೆ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮನವಿ ಸಲ್ಲಿಸಿದೆ. ಈ ಮೂಲಕ ಕಳೆದ 40 ವರ್ಷಗಳಿಂದ ಹೋರಾಟವೇ ಬೇಡ ಎನ್ನುತ್ತಿದ್ದ ಅಧಿಕಾರಿಗಳು ನ್ಯಾಯಕ್ಕಾಗಿ ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ. ಇದರಿಂದ ನೌಕರರಿಗೂ ಲಾಭವಾಗುತ್ತದೆ. ಹೀಗಾಗಿ ಇಲ್ಲ ಸಲ್ಲದನ್ನು ಊಹಿಸಿಕೊಂಡು ನಿಮ್ಮ ಕಾಲ ಮೇಲೆ ನೀವೆ ಕಲ್ಲಾಕಿಕೊಳ್ಳಬೇಡಿ ಎಂದುವುದು ನಮ್ಮ ಕಳಕಳಿ.
ಇನ್ನು ನಮ್ಮ ಬೇಡಿಕೆಗಳು ಈಡೇರದಿದ್ದರೆ ನೌಕರರು ವೇತನ ಸಂಬಂಧ ಹೋರಾಟಕ್ಕೆ ಇಳಿಯುವ ಮನ್ನವೇ ನಾವೇ ಮುಂದಾಗುತ್ತೇವೆ ಎಂಬ ಸಂದೇಶ ರವಾನಿಸಿದ್ದಾರೆ. ಇದರಿಂದ ಅಧಿಕಾರಿಗಳು ಮತ್ತು ನೌಕರರು ಒಗ್ಗಟ್ಟಿನಿಂದ ಸೌಲಭ್ಯ ಪಡೆಯುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಎಂಬ ಮುನ್ಸೂಚನೆ ಕಾಣುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಿ, ಅದನ್ನು ಬಿಟ್ಟು ಮೂರ್ಖರಂತೆ ನಡೆದುಕೊಳ್ಳಬೇಡಿ.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...