ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಬೇಡ ಅದಕ್ಕಿಂತಲೂ ಹೆಚ್ಚಿನ ವೇತನ ಬೇಕು. ಅದಕ್ಕಾಗಿ ನಾವು ಅಗ್ರಿಮೆಂಟ್ ಕೇಳುತ್ತಿದ್ದೇವೆ ಎಂದು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿ ಅನಂತ ಸುಬ್ಬರಾವ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡುತ್ತ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನಿಜವಾಗಿಸಿದರೆ ಅಂದರೆ ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಮಾಡಿಸಿದರೆ ಸಾರಿಗೆ ನೌಕರರು ನಿಮ್ಮನ್ನು ತಲೆಯ ಮೇಲೆ ಹೊತ್ತುಕೊಂಡು ಮೆರೆಸುತ್ತಾರೆ. ಆದರೆ, ನೀವೆ ಹೇಳಿದ್ದೀರಿ ಇದೇ ಅ.9ರಂದು ವಿಧಾನಸೌಧದಲ್ಲಿ ನಡೆದ ಸಾರಿಗೆ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ನಾವು 2024 ಜನವರಿ 1ರಿಂದ ಜಾರಿಗೆ ಬರುವಂತೆ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು.
ಅಂದರೆ ಶೇ.25ರಷ್ಟು ವೇತನ ಹೆಚ್ಚಳವಾದರೆ ಸರ್ಕಾರಿ ನೌಕರರಿಗಿಂತ ಸಾರಿಗೆ ನೌಕರರು ಶೇಕಡಾ ಎಷ್ಟು ಪರ್ಸೆಂಟ್ ವೇತನ ಹೆಚ್ಚಿಗೆ ಪಡೆಯುತ್ತಾರೆ? ಈಗಾಗಲೇ ನೌಕರರ ವೇತನಕ್ಕೆ ತಾಳೆ ಹಾಕುವುದು ಬೇಡ ಏಕೆಂದರೆ ಇದಕ್ಕೆ ಅಜಗಜಾಂತರ ವ್ಯತ್ಯಾಸ ಬರುತ್ತದೆ. ಆದರೆ ಅಧಿಕಾರಿಗಳ ವೇತನಕ್ಕೆ ತಾಳೆ ಹಾಕೋಣ. ಈಗಾಗಲೇ ಸರ್ಕಾರಿ ನೌಕರರು ಪಡೆಯುತ್ತಿರುವ ಪ್ರಸ್ತುತ ವೇತನಕ್ಕೂ ಸಾರಿಗೆ ನಿಗಮದ ಅಧಿಕಾರಿಗಳು ಪಡೆಯುತ್ತಿರುವ ವೇತನಕ್ಕೂ ಶೇ.32ರಷ್ಟು ವ್ಯತ್ಯಾಸವಿದೆ.
ನೀವು ಹೋಗಿ ಸಭೆಯಲ್ಲಿ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಸಚಿವರಿಗೆ ಒತ್ತಾಯ ಮಾಡಿದ್ದೀವಿ ಎಂದು ಹೇಳಿದ್ದೀರಿ. ನೀವು ಬೇಡಿಕೆ ಇಟ್ಟಿರುವಷ್ಟನ್ನು ಅವರು ಕೊಡುವುದಿಲ್ಲ ಆದರೂ ಇರಲಿ. ಶೇ.25ರಷ್ಟು ವೇತನ ಹೆಚ್ಚಳನ್ನು ಮಾಡೇ ಬೀಡುತ್ತಾರೆ ಎಂದೆ ಇಟ್ಟುಕೊಳ್ಳೋಣ. ಆಗ ಸರ್ಕಾರಿ ನೌಕರರಿಗಿಂತ ಸಾರಿಗೆ ನೌಕರರು ಹೆಚ್ಚು ವೇತನ ಪಡೆಯುತ್ತಾರೆಯೇ? ಇಲ್ಲ ಎಂಬ ಸತ್ಯ ನಿಮಗೂ ಗೊತ್ತು.
ಶೇ.32ರಲ್ಲಿ ಶೇ.25 ಕಳೆದರೆ ಇನ್ನೂ ಕೂಡ ಶೇ.7ರಷ್ಟು ಕಡಿಮೆ ವೇತನ ಪಡೆಯುತ್ತಾರೆ. ಅಂದರೆ ನೀವು ಹೇಳುತ್ತೀರಿ ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಕೊಡಬೇಕು ಎಂದು. ಅಂದರೆ ನೀವೆ ಶೇ.25ರಷ್ಟು ಹೆಚ್ಚಳ ಮಾಡಬೇಕು ಎಂದು ಒತ್ತಾಯ ಮಾಡಿದ್ದೀರಿ. ಇದರಿಂದ ಸಾರಿಗೆ ನೌಕರರಿಗೆ ಲಾಭವಾಗುತ್ತದೋ ಇಲ್ಲ ನಷ್ಟವಾಗುತ್ತದೋ ನೀವೆ ಹೇಳಬೇಕು?
ಇನ್ನು ನೀವು ಸಾರಿಗೆ ನಿಗಮಗಳಲ್ಲಿ ಲಾಭ ನಷ್ಟ ಲೆಕ್ಕಹಾಕುವಂತಿಲ್ಲ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದೀರಿ. ಆದರೆ ನೌಕರರು ನಿಮ್ಮ ಭೇಟಿ ಮಾಡಿದಾಗ ಅವರಿಗೆ ನೀವೆ ಹೇಳುತ್ತೀರಿ ನಿಗಮಗಳು ಭಾರಿ ನಷ್ಟದಲ್ಲಿವೆ ಹೇಗೆ ನಿಮಗೆ ಹೆಚ್ಚಿಗೆ ವೇತನ ಕೊಡಲು ಸಾಧ್ಯ ಮುಂದೆ ನೋಡೋಣ ಎಂದು. ಹೀಗೆ ಹೇಳಿಕೊಂಡು ಕಾಲ ಕಳೆಯುತ್ತಿದ್ದರೆ ನೌಕರರು ಆರ್ಥಿಕವಾಗಿ ಸಬಲರಾಗುವುದು ಯಾವಾಗ ರಾಯರೆ?
ಇದರ ಜತೆಗೆ 2020ರ ಜನವರಿ ಒಂದರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಬಾಕಿ ಎಲ್ಲ ನೌಕರರಿಗೂ ಸೇರಿ ಸುಮಾರು 1775 ಕೋಟಿ ರೂಪಾಯಿಯನ್ನು ಸರ್ಕಾರ ಕೊಡಬೇಕು. ಜತೆಗೆ ಈ ವೇಳೆ ನಿವೃತ್ತರಾದ ನೌಕರರಿಗೆ 232 ಕೋಟಿ ರೂಪಾಯಿ ಕೊಡಬೇಕು. ಈ 232 ಕೋಟಿ ರೂ.ಗಳನ್ನು ಮುಂದಿನ ನವೆಂಬರ್ ವೇಳೆಗೆ ಕೊಡುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದೀರಿ. ಇದು ಒಳ್ಳೆಯ ಬೆಳವಣಿಗೆಯೆ.
ಆದರೆ 1775 ಕೋಟಿ ರೂಪಾಯಿ ಅರಿಯರ್ಸ್ ಬಗ್ಗೆ ಯಾವುದೇ ಸ್ಪಷ್ಟತೆ ಕೊಟ್ಟಿಲ್ಲ ಎಂದು ತಿಳಿಸಿದ್ದೀರಿ. ಇದರ ಕತೆ ಇನ್ನು ಓಪನ್ ಆದಂತೆ ಕಾಣುತ್ತಿಲ್ಲ. ಏಕೆಂದರೆ ಸಚಿವರು ಏನು ಹೇಳಿಲ್ಲ. ಇನ್ನು ಅಂತರ್ ನಿಗಮ ವರ್ಗಾವಣೆ ವಿಷಯದ ಬಗ್ಗೆ ತಿಳಿಸಿದ್ದೀರಿ ಅದಕ್ಕೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದೀರಿ ಇದು ಒಳ್ಳೆಯ ಬೆಳವಣಿಗೆಯೆ.
ಅಂದರೆ ಅಂತರ್ ನಿಗಮ ವರ್ಗಾವಣೆ ಭಾಗ್ಯವೇ ಇಲ್ಲದೆ 2-3ದಶಕಗಳಿಂದಲೂ ನೌಕರರು ಒದ್ದಾಡುತ್ತಿದ್ದಾಗ ಈ ಬಗ್ಗೆ ನೀವು ಮಾತನಾಡಿಲ್ಲ. 2021ರ ಬಳಿಕ ಇದಕ್ಕೆ ಸರ್ಕಾರ ಒಪ್ಪಿ ಈಗಾಗಲೇ ವರ್ಗಾವಣೆ ಮಾಡುತ್ತಿದೆ. ಆದರೆ ನೀವು ಸರ್ಕಾರ ಮಾಡುವುದು ಬೇಡ ನಿಗಮಗಳ ಮಟ್ಟದಲ್ಲೇ ಆಗಬೇಕು ಎಂದು ಒತ್ತಾಯ ಮಾಡಿದ್ದೀರಿ. ಯಾರೆ ಮಾಡಿದರೂ ವರ್ಗಾವಣೆ ವರ್ಗಾವಣೆಯೇ ಅಲ್ಲವೇ?
ಇನ್ನು ನಗದು ರಹಿತ ವೈದ್ಯಕೀಯ ಸೇವೆ ಬಗ್ಗೆ ಕೇಳಿದ್ದೀರಿ ಅದಕ್ಕೆ ಸಚಿವರು ನಿಮ್ಮ ಕಡೆಯಿಂದಲೂ ಕೊಡುಗೆ ನೀಡಬೇಕು (Contribute) ಎಂದು ಹೇಳಿದ್ದಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದೀರಿ. ಏಕೆ ಸರ್ಕಾರಿ ನೌಕರರು ನಗದು ರಹಿತ ಸೌಲಭ್ಯ ಪಡೆಯುವುದಕ್ಕೆ Contribute ಮಾಡುತ್ತಿದ್ದಾರೆಯೇ ಎಂದು ಪ್ರಶ್ನೆ ಕೇಳಲಿಲ್ಲ ನೀವು. ಅಂದರೆ ಇಲ್ಲಿಯೂ ನೌಕರರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನೇ ಮಾಡಲು ಹೊರಟಿದ್ದೀರಾ?
ಇನ್ನು ಮುಖ್ಯವಾಗಿ ಬೇಕಿರುವುದು ಸಾರಿಗೆ ನೌಕರರಿಗೆ 4 ವರ್ಷಕ್ಕೊಮ್ಮೆ ನಡೆಯುವ ವೇತನ ಹೋರಾಟಕ್ಕೆ ಪೂರ್ಣವಿರಾಮ ಬೀಳುವುದು. ಆದರೆ ನೀವು ಶೇ.100ಕ್ಕೆ 100ರಷ್ಟು ಅಧಿಕಾರಿಗಳು ಮತ್ತು ಶೇ.100ಕ್ಕೆ 99ರಷ್ಟು ನೌಕರರು ಕೇಳುತ್ತೀರುವ ಈ ಹೋರಾಟವಿಲ್ಲದೆ ವೇತನ ಹೆಚ್ಚಳವಾಗಬೇಕು ಎಂಬುದಕ್ಕೆ ಏಕೆ ಒಪ್ಪುತ್ತಿಲ್ಲ? ಇದು ಈಗಲೂ ಯಕ್ಷಪ್ರಶ್ನೆಯಾಗಿಯೆ ಉಳಿದಿದೆ ಇದಕ್ಕೆ ಸ್ಪಷ್ಟ ಉತ್ತರ ಕೊಡುವಿರಾ?
ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಕೇಳುತ್ತಿದ್ದೇವೆ ಎಂದು ಹೇಳುವ ನೀವೆ ಈಗ ಅಂದರೆ 7ನೇ ವೇತನ ಆಯೋಗದಲ್ಲಿ ಆಗಿರುವ ಶೇ.27.5ರಷ್ಟು ವೇತನ ಹೆಚ್ಚಳವನ್ನಾದರೂ ಕೇಳಬೇಕಿತ್ತು. ಆದರೆ ಅಷ್ಟನ್ನಾದರೂ ಕೇಳದೆ ಶೇ.25ರಷ್ಟು ವೇತನ ಹೆಚ್ಚಳವಾಗಬೇಕು ಎಂದು ಕೇಳಿದ್ದೀರಿ ಇದು ನಿಮಗೆ ಸರಿ ಅನಿಸುತ್ತದೆಯೇ ಅನಂತ ಸುಬ್ಬರಾವ್ ಅವರೆ ನೀವೆ ಹೇಳಿ?
ಇದಕ್ಕೆ ನಿಮ್ಮಿಂದ ಒಂದು ಉತ್ತರವೂ ಬರಬಹುದೆಂದು ನಾವು ಊಹಿಸಿದ್ದೇವೆ. ಅದೇನೆಂದರೆ ಅದು ನಾವು 4ವರ್ಷಕ್ಕೊಮ್ಮೆ ಅಗ್ರಿಮೆಂಟ್ ಮಾಡಿದರೆ ಈಗ ಶೇ.25ರಷ್ಟು ಅಂದರೆ 2024 ಜನವರಿ 1ಕ್ಕಾದರೆ ಮತ್ತು 2028 ಜನವರಿ 1ಕ್ಕೆ ಶೇ.25ರಷ್ಟು ವೇತನ ಹೆಚ್ಚಳವಾದರೆ. ಈಗ ಇರುವ ಶೇ.32ರಷ್ಟು ವೇತನ ವ್ಯತ್ಯಾಸ ಹೋಗಿ ನಾವೇ ಅವರಿಗಿಂತ ಹೆಚ್ಚು ವೇತನ ಪಡೆಯುತ್ತೇವೆ ಅಲ್ಲವೇ ಎಂದು ನೀವು ಹೇಳಬಹುದು.
ಅಂದರೆ ಈಗ ನೀವು ಅರೆಹೊಟ್ಟೆಯಲ್ಲಿರಿ 2028ಕ್ಕೆ ಸರಿಹೋಗುತ್ತದೆ ಎಂದು ಹೇಳುತ್ತೀರಿ ಅಲ್ವಾ? ಆದರೆ, ಅಲ್ಲಿಯವರೆಗೂ ಕಡಿಮೆ ವೇತನದಲ್ಲಿ ನೌಕರರು ಬದುಕಬೇಕಾ? ಇನ್ನು ಮತ್ತೆ 5ವರ್ಷಕ್ಕೆ 8ನೇ ವೇತನ ಆಯೋಗ ರಚನೆಯಾಗಿ ಆಗ ಶೇ30ರಷ್ಟು ವೇತನ ಸರ್ಕಾರಿ ನೌಕರರಿಗೆ ಹೆಚ್ಚಳವಾದರೆ ಮತ್ತೆ ಸಾರಿಗೆ ನೌಕರರು ಅವರಿಗೆ ಸರಿಸಮಾನವಾದ ವೇತನ ಬೇಕು ಎಂದು ಹೋರಾಟಕ್ಕೆ ಇಳಿಯಬೇಕಾ?
ಅದಕ್ಕೆ ಈ ಎಲ್ಲವನ್ನು ಮತ್ತು ನೌಕರರ ಭವಿಷ್ಯದ ದೃಷ್ಟಿಯಲ್ಲಿ ನೀವುಕೂಡ ಕೇಳಿ ಸರಿ ಸಮಾನ ವೇತನ ಬೇಕು ಎಂದು. ಅದನ್ನು ಬಿಟ್ಟು ಅರೆಹೊಟ್ಟೆಯಲ್ಲೇ ಇರಿ ಮುಂದೆ ಸರಿಯಾಗುತ್ತದೆ ಎಂದು ಹೇಳಿ ನೌಕರರನ್ನು ಅರೆಹೊಟ್ಟೆಯಲ್ಲೇ ಜೀವನ ಸವೆಸುವಂತ ನಿರ್ಧಾರ ತೆಗೆದುಕೊಳ್ಳಬೇಡಿ. ಜತೆಗೆ ನೌಕರರ ನೆಮ್ಮದಿಯನ್ನು ಕಸಿದುಕೊಳ್ಳಬೇಡಿ.
ಇನ್ನು ಇದನ್ನು ಅರಿತ ಸಾರಿಗೆಯ 799 ಅಧಿಕಾರಿಗಳು ಕೂಡ ಈಗ 7ನೇ ವೇತನ ಆಯೋಗದಂತೆ ನಮಗೂ ವೇತನ ಕೊಡಿ ಎಂದು ಹೇಳುತ್ತಿದ್ದಾರೆ. ಆದರೆ ನೀವು ಮತ್ತೆ ಮತ್ತೆ ನೌಕರರಿಗೆ ಈ ರೀತಿ ಅಗ್ರಿಮೆಂಟ್ ಅಗ್ರಿಮೆಂಟ್ ಎಂದು ಆಸೆ ಹುಟ್ಟಿಸಿ ಕೊನೆಗೆ ಮುಗ್ದ ನೌಕರರ ದಾರಿ ತಪ್ಪಿಸುವುವ ಕೆಲಸ ಮಾಡುತ್ತೀರಿ. ಇನ್ನಾದರೂ ನೀವು ಇದನ್ನು ಬಿಟ್ಟು ನೌಕರರ ಬೇಡಿಕೆಯನ್ನು ಈಡೇರಿಸುವುದಕ್ಕೆ ನಮ್ಮ ಜತೆ ಕೈ ಜೋಡಿಸಿ ಎಂದು ನೌಕರರ ಒಕ್ಕೂಟದ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಈ ನನ್ನ ಮಗನೇ ಕೆಎಸ್ಆರ್ಟಿಸಿ ನೌಕರರಿಗೆ ಶಾಪ